Low Price car: ಕೇವಲ 6 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಈ ಕಾರುಗಳನ್ನು ಖರೀದಿಸಿ ಮನೆಗೆ ತಗೊಂಡು ಹೋಗಿ!

Low Price car: ಸ್ನೇಹಿತರ ಒಂದಲ್ಲ ಒಂದು ಸಮಯದಲ್ಲಿ ತಮ್ಮ ಸ್ವಂತ ಕಾರನ್ನು ಖರೀದಿಸಬೇಕು ಎನ್ನುವಂತಹ ಆಸೆ ಬಡವರ್ಗದ ಕುಟುಂಬದ ಯುವಕರಿಂದ ಹಿಡಿದು ಮಾಧ್ಯಮ ವರ್ಗದ ಕುಟುಂಬದವರೆಗೂ ಇದ್ದೇ ಇರುತ್ತದೆ. ಅಂತಹ ಜನರಿಗೆ ಇವತ್ತಿನ ಈ ಲೇಖನದ ಮೂಲಕ ಯಾವ ರೀತಿಯಲ್ಲಿ 6 ಲಕ್ಷ ರೂಪಾಯಿಗಳ ಕಡಿಮೆ ಬೆಲೆಯಲ್ಲಿ ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ನ ಯಾವೆಲ್ಲ ಕಾರುಗಳನ್ನು ಖರೀದಿ ಮಾಡಬಹುದಾಗಿದೆ ಎನ್ನುವಂತಹ ಮಾಹಿತಿಯನ್ನು ನೀಡಲು ಹೊರಟಿದ್ದೇವೆ.

Maruti Suzuki Alto K10

ಈ ಕಾರ್ಯದಲ್ಲಿ 1.0 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹಾಗೂ CNG ರೂಪಾಂತರವನ್ನು ಕೂಡ ಕಾಣಬಹುದಾಗಿದೆ. ಪೆಟ್ರೋಲ್ ರೂಪಾಂತರ ನಿಮಗೆ 24 ಕಿಲೋಮೀಟರ್ಗಳ ರೇಂಜ್ನಲ್ಲಿ ಮೈಲೇಜ್ ನೀಡುತ್ತದೆ ಹಾಗೂ ಸಿಎನ್‌ಜಿ ರೂಪಾಂತರ ನಿಮಗೆ ಪ್ರತಿ ಕೆಜಿಗೆ 33 ಕಿಲೋ ಮೀಟರ್ ಗಳ ಆಸು ಪಾಸಿನಲ್ಲಿ ಮೈಲೇಜ್ ನೀಡುತ್ತದೆ. ಕಾರಿನ ಬೆಲೆ ಬಗ್ಗೆ ಮಾತನಾಡುವುದಾದರೆ 3.99 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 5.96 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಈ ಕಾರನ್ನು ಖರೀದಿ ಮಾಡಬಹುದಾಗಿದೆ. ಇದರಲ್ಲಿ ನಿಮಗೆ ಇಂಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಆಪಲ್ ಕಾರ್ ಪ್ಲೇ, ಸ್ಟೇರಿಂಗ್ ಮೌಂಟೆಡ್ ಇನ್ಸ್ಟ್ರುಮೆಂಟಲ್ ಕಂಟ್ರೋಲ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್, ಹೀಗೆ ಸಾಕಷ್ಟು ಅಡ್ವಾನ್ಸ್ ಫೀಚರ್ಗಳನ್ನು ಕೂಡ ನೀವು ಕಾಣಬಹುದಾಗಿದೆ. ABS, EBD ತಂತ್ರಜ್ಞಾನವನ್ನು ಕೂಡ ನೀವು ಕಾಣಬಹುದಾಗಿದೆ.

Renault Kwid

ಈ ಹ್ಯಾಚ್ ಬ್ಯಾಕ್ ಸೆಗ್ಮೆಂಟಿನ ಕಾರಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ ಇಲ್ಲಿ ಕೂಡ 1.0 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸಲಾಗಿದೆ. ಐದು ಸ್ಪೀಡ್ ಆಟೋಮೆಟಿಕ್ ಹಾಗೂ ಐದು ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಗಳನ್ನ ಆಪ್ಷನ್ ರೂಪದಲ್ಲಿ ಈ ಕಾರ್ ನಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ. 21 ರಿಂದ 22 km ಗಳ ಮೈಲೇಜ್ ಅನ್ನು ನೀವು ಈ ಕಾರಿನ ಮೂಲಕ ಪಡೆದುಕೊಳ್ಳಬಹುದಾಗಿದೆ. ಇನ್ನು ಬೆಲೆಯ ಬಗ್ಗೆ ಮಾತನಾಡದಾದ್ರೆ 4.70 ರಿಂದ 6.45 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಖರೀದಿ ಮಾಡಬಹುದಾಗಿದೆ. ಇದರಲ್ಲಿ ನಿಮಗೆ ಸಿಗುತ್ತದೆ ಹಾಗೂ ಎಂಟು ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಕೂಡ ಇದೆ. ಸುರಕ್ಷತೆ ರೂಪದಲ್ಲಿ ಫ್ರೆಂಡ್ ಡ್ಯುಯಲ್ ಏರ್ ಬ್ಯಾಗ್ ಗಳನ್ನು ಕೂಡ ಕಾಣಬಹುದಾಗಿದೆ. ಮಾನುವಲ್ ಎಸಿ ಸೇರಿದಂತೆ ಸಾಕಷ್ಟು ಫೀಚರ್ ಗಳನ್ನು ನೀವು ಈ ಕಾರಿನಲ್ಲಿ ಪಡೆದುಕೊಳ್ಳಬಹುದಾಗಿದೆ.

Tata Tiago

ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಅತ್ಯಂತ ಭರವಸೆಯ ಕಂಪನಿ ಆಗಿರುವಂತಹ ಟಾಟಾ ಕಂಪನಿಯ ಈ ಕಾರು 1.2 ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಪ್ಷನ್ ಹೊಂದಿದೆ. ಐದು ಸ್ಪೀಡ್ ಆಟೋಮೆಟಿಕ್ ಹಾಗೂ ಮ್ಯಾನ್ ವಾಲ್ ಗೇರ್ ಬಾಕ್ಸ್ ಗಳ ಆಪ್ಶನ್ ಕೂಡ ಇಲ್ಲಿ ಕಾಣಬಹುದಾಗಿದೆ. ಪೆಟ್ರೋಲ್ ನಲ್ಲಿ ನಿಮಗೆ 19 ರಿಂದ 20 ಕಿಲೋಮೀಟರ್ಗಳ ಮೈಲೇಜ್ ಸಿಕ್ಕರೆ ಸಿಎನ್‌ಜಿನಲ್ಲಿ ಈ ಕಾರು ನಿಮಗೆ 26 ರಿಂದ 28 ಕಿಲೋಮೀಟರ್ಗಳ ಮೈಲೇಜ್ ನೀಡಲು ಸಿದ್ಧವಾಗಿದೆ. 5.65 ರಿಂದ 8.9 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಈ ಕಾರನ್ನು ಖರೀದಿ ಮಾಡಬಹುದಾಗಿದೆ. ಈ ಕಾಲದಲ್ಲಿ ನೀವು ಎಂಟು ಸ್ಪೀಕರ್ ಸೌಂಡ್ ಸಿಸ್ಟಮ್, ಏಳು ಇಂಚಿನ ಇಂಪೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಡುಯಲ್ ಫ್ರೆಂಟ್ ಏರ್ ಬ್ಯಾಗ್, ಪಾರ್ಕಿಂಗ್ ಸೆನ್ಸರ್, ABS, EBD ಗಳಂತಹ ಅಡ್ವಾನ್ಸ್ ಫೀಚರ್ ಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.

Comments are closed.