MSS: ಮಹಿಳೆಯರಿಗಾಗಿ ಸರ್ಕಾರದಿಂದ ಭಾರಿ ಯೋಜನೆ ಘೋಷಣೆ; ಉಳಿತಾಯಕ್ಕೆ ಇದೇ ಬೆಸ್ಟ್ ಪ್ಲಾನ್!

MSS: ಕೇಂದ್ರ ಸರ್ಕಾರ ಭಾರತ ದೇಶದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವಂತಹ ಕಾರಣದಿಂದಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಈ ವಿಚಾರವನ್ನು ಸಾಕಾರಗೊಳಿಸಲು ಸಂಪೂರ್ಣ ಪ್ರಯತ್ನವನ್ನು ನಡೆಸುತ್ತಿದೆ. ಅದೇ ನಿಟ್ಟಿನಲ್ಲಿ ಈಗ ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ಜಾರಿಗೆ ತಂದಿದೆ. 2023ರಲ್ಲಿ ಬಜೆಟ್ ಸಂದರ್ಭದಲ್ಲಿ ಈ ಯೋಜನೆಯನ್ನು ಘೋಷಿಸಲಾಗಿತ್ತು ಹಾಗೂ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗಿದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ!

ಈ ಯೋಜನೆಯಲ್ಲಿ ಮಹಿಳೆಯರು ಅಥವಾ ಬಾಲಕಿಯರು ಎರಡು ವರ್ಷಗಳವರೆಗೆ ಗರಿಷ್ಠ 2 ಲಕ್ಷ ರೂಪಾಯಿಗಳ ಹಣವನ್ನು ಠೇವಣಿ ಇಡಬಹುದಾಗಿದೆ. ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್ ಹಾಗೂ ಸಾಕಷ್ಟು ಬ್ಯಾಂಕುಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರುವ ಕೆಲಸವನ್ನು ಮಾಡಿದೆ. ಈ ಯೋಜನೆ ಮಾರ್ಚ್ 2025 ರವರೆಗೆ ಕೂಡ ಲಭ್ಯ ಇರುತ್ತದೆ ಹೀಗಾಗಿ ಈ ದಿನಾಂಕದೊಳಗೆ ನೀವು ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗಿರುತ್ತದೆ. ವಾರ್ಷಿಕವಾಗಿ 7.5% ಬಡ್ಡಿದರವನ್ನು ನೀವು ಈ ಯೋಜನೆ ಹೂಡಿಕೆ ಮೇಲೆ ಪಡೆದುಕೊಳ್ಳಬಹುದಾಗಿದೆ. ಮೂರು ತಿಂಗಳಲ್ಲಿ ಇದರ ಬಡ್ಡಿಯ ಲೆಕ್ಕಾಚಾರ ಮಾಡಿ ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.

ಮಹಿಳೆಯರು ಈ ಯೋಜನೆಯ ಹೂಡಿಕೆ ಮಾಡಲು ಮೊದಲಿಗೆ ಯೋಜನೆಯ ಖಾತೆಯನ್ನು ತೆರೆಯಬೇಕಾಗಿರುತ್ತದೆ. ಹೆಣ್ಣು ಮಕ್ಕಳ ಹೆಸರಿನಲ್ಲಿ ಅವರ ತಾಯಿ ಖಾತೆಯನ್ನು ತೆರೆಯ ಬಹುದಾಗಿದೆ. ಎರಡು ವರ್ಷಗಳ ನಂತರ ನೀವು ಮಾಡಿರುವಂತಹ ಹೂಡಿಕೆ ಮೇಲೆ ಬಡ್ಡಿಯನ್ನು ಸೇರಿಸಿ ನಿಮಗೆ ನೀಡಲಾಗುತ್ತದೆ. ಅತ್ಯಂತ ಕಡಿಮೆ ರಿಸ್ಕ್ ಹಾಗೂ ಕೈ ತುಂಬಾ ಲಾಭ ನೀಡುವಂತಹ ಯೋಜನೆ ಆಗಿದ್ದು ಮಹಿಳೆಯರು ಇದರಲ್ಲಿ ತಪ್ಪದೆ ಹೂಡಿಕೆ ಮಾಡಬೇಕಾಗಿದೆ.

ಈ ಯೋಜನೆಯಲ್ಲಿ ಮಹಿಳೆಯರು 2 ಲಕ್ಷ ರೂಪಾಯಿ ಹಣವನ್ನು ಮ್ಯಾಕ್ಸಿಮಮ್ ಹೂಡಿಕೆ ಮಾಡಬಹುದಾಗಿದ್ದು, ಮೂರು ತಿಂಗಳ ನಂತರ 3750 ರೂಪಾಯಿಗಳ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ. ಎರಡನೇ ತ್ರೈಮಾಸಿಕದ ನಂತರ ನಿಮಗೆ 3820 ರೂಪಾಯಿ ಬಡ್ಡಿ ಸಿಗಲಿದೆ. ಒಟ್ಟಾರೆಯಾಗಿ ಮೆಚುರಿಟಿ ಆದ ನಂತರ ನೀವು ಹೂಡಿಕೆ ಮಾಡಿರುವ ಎರಡು ಲಕ್ಷ ರೂಪಾಯಿಗಳ ಮೇಲೆ ಹೆಚ್ಚು ಹೆಚ್ಚುವರಿಯಾಗಿ 32,044 ರೂಪಾಯಿಗಳ ಬಡ್ಡಿ ದರವನ್ನು ಪಡೆದುಕೊಳ್ಳಬಹುದಾಗಿದೆ.

ಬೇರೆ ಯೋಜನೆಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಇದು ಅಲ್ಪ ಅವಧಿಯಲ್ಲಿ ಮಹಿಳೆಯರಿಗೆ ಫಿಕ್ಸೆಡ್ ಡೆಪಾಸಿಟ್ ಯೋಜನೆಯ ರೂಪದಲ್ಲಿ ಒಂದು ಸ್ಥಿರವಾಗಿರುವಂತಹ ಪಕ್ಕ ಗ್ಯಾರೆಂಟಿ ರಿಟರ್ನ್ ಅನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು ಎಂದು ಭಾವಿಸಿರುವಂತಹ ಮಹಿಳೆಯರು ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಕೈತುಂಬ ಲಾಭವನ್ನು ಸಂಪಾದನೆ ಮಾಡಬಹುದಾಗಿದೆ ಅದು ಕೂಡ ಕೇವಲ ಎರಡು ವರ್ಷದಲ್ಲಿ.

Comments are closed.