Prabhas: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ರವರ ಜೀವನದಲ್ಲಿ ಕಾಲಿಡ್ತಿದ್ದಾರೆ ಈ ವಿಶೇಷ ವ್ಯಕ್ತಿ; ಕುಣಿದಾಡಿದ ಅಭಿಮಾನಿಗಳು!

Prabhas: ಇಡೀ ಭಾರತೀಯ ಚಿತ್ರರಂಗದಲ್ಲಿ ಸಲ್ಮಾನ್ ಖಾನ್ ಅವರನ್ನು ಬಿಟ್ರೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂತ ಅಂದ್ರೆ ಅದು ಪ್ರಭಾಸ್ ಅವರು ಅಂತ ಹೇಳಬಹುದು. ಬಾಹುಬಲಿ ಸಿನಿಮಾದ ಮೂಲಕ ತಮ್ಮ ನಿಜವಾದ ಜನಪ್ರಿಯತೆಯನ್ನು ಪಡೆದುಕೊಂಡಂತಹ ನಟ ಪ್ರಭಾಸ್ ರವರು ಅದಾದ ಮೇಲೆ ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಟರ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಾರೆ. ಅವರ ಪ್ರತಿಯೊಂದು ಸಿನಿಮಾಗಳು ಜನರ ನಿರೀಕ್ಷೆಯಲ್ಲಿ ಗೆಲ್ಲುತ್ತೋ ಇಲ್ವೋ ಗೊತ್ತಿಲ್ಲ ಆದರೆ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಖಂಡಿತವಾಗಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತೆ.

ಸದ್ಯಕ್ಕೆ ಪ್ರಭಾಸ್ ರವರು ತಮ್ಮ ಮುಂದಿನ ಸಿನಿಮಾ ಆಗಿರುವಂತಹ ಕಲ್ಕಿ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಜೂನ್ 27ನೇ ತಾರೀಕಿನಂದು 22 ಕ್ಕೂ ಅಧಿಕ ಭಾಷೆಗಳಲ್ಲಿ ವಿಶ್ವದ್ಯಂತ ಬಿಡುಗಡೆಯಾಗುವುದಕ್ಕೆ ಈ ಸಿನಿಮಾ ಸಜ್ಜಾಗಿ ನಿಂತಿದೆ. ಸಾಕಷ್ಟು ಭವಿಷ್ಯದ ರೂಪದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದ್ದು ಸಿನಿಮಾದಲ್ಲಿ ಸಾಕಷ್ಟು ಬಜೆಟ್ ಖರ್ಚಾಗಿರುವುದು ಕೂಡ ಕಂಡುಬರುತ್ತದೆ. ಭಾರತದ ಅತ್ಯಂತ ದಿಗ್ಗಜ ಕಲಾವಿದಾಗಿರುವಂತಹ ಅಮಿತಾಬ್ ಬಚ್ಚನ್ ರವರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಾಯಕಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಇದ್ದಾರೆ.

ಪ್ರಭಾಸ್ ರವರು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ತಮ್ಮ ಜೀವನದಲ್ಲಿ ವಿಶೇಷ ಅತಿಥಿ ಒಬ್ಬರು ಬರಲಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇದನ್ನು ಜನರು ಈಗ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಕೆಲವರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಕೀರ್ತಿ ಸುರೇಶ್ ರವರ ಹೆಸರನ್ನು ಅರ್ಥ ಮಾಡಿಕೊಂಡಿದ್ದರೆ ಇನ್ನು ಕೆಲವರು ಪ್ರಭಾಸ್ ರವರು ಹೊಸ ಕಾರನ್ನು ಖರೀದಿ ಮಾಡುತ್ತಿದ್ದು ಅದಕ್ಕೆ ಇರುವಂತಹ ಅಲೆಕ್ಸಾ ವಾಯ್ಸ್ ನಲ್ಲಿ ಕೀರ್ತಿ ಸುರೇಶ್ ರವರ ಧ್ವನಿ ಇರಲಿದೆ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ.

ಈ ಹಿಂದೆ ಅನುಷ್ಕಾ ಶೆಟ್ಟಿ ಅವರ ಜೊತೆಗೆ ಪ್ರಭಾಸ್ ರವರ ಮದುವೆ ಆಗುತ್ತದೆ ಅನ್ನೋದಾಗಿ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಈ ಕನಸು ನನಸಾಗಲಿಲ್ಲ ಅನ್ನೋದೇ ಬೇಸರದ ವಿಚಾರ. ಇದರ ಜೊತೆಗೆ ಈಗ ಕಲ್ಕಿ ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದ್ದು ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಪ್ರಭಾಸ್ ಅಮಿತಾಬ್ ಬಚ್ಚನ್ ದೀಪಿಕಾ ಪಡುಕೋಣೆ ಅವರ ಜೊತೆಗೆ ಸಿನಿಮಾದಲ್ಲಿ ಕಮಲ್ ಹಾಸನ್ ಹಾಗೂ ದಿಶಾ ಪಟಾನಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಸಿನಿಮಾ ಬಿಡುಗಡೆ ಆಗೋದಕ್ಕೆ ಇನ್ನೇನು ಒಂದು ತಿಂಗಳು ಬಾಕಿ ಉಳಿದಿದ್ದು ಸಿನಿಮಾ ತಂಡ ಪ್ರಚಾರ ಕಾರ್ಯಕ್ರಮವನ್ನು ಪ್ರಾರಂಭ ಮಾಡುವುದಕ್ಕೆ ಕೂಡ ಸಿದ್ಧವಾಗಿ ನಿಂತಿದೆ.

Comments are closed.