SBI: ಎಸ್ ಬಿ ಐ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್; ರಾತ್ರೋ ರಾತ್ರಿ ಗ್ರಾಹಕರ ಪರವಾಗಿ ಈ ನಿರ್ಧಾರ ತಗೊಂಡಿದೆ ಬ್ಯಾಂಕ್!

SBI: ಭಾರತ ದೇಶದ ಬ್ಯಾಂಕಿಂಗ್ ಸಿಸ್ಟಮ್ ನಲ್ಲಿ ಅತ್ಯಂತ ದೊಡ್ಡ ಗ್ರಹಕ್ಕೆ ಬಳಗವನ್ನು ಹೊಂದಿರುವಂತಹ ಸರ್ಕಾರಿ ಬ್ಯಾಂಕ್ ಯಾವುದು ಅಂತ ಕೇಳಿದರೆ ಕೇಳಿಬರುವಂತಹ ಒಂದೇ ಉತ್ತರ ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಭಾರತ ಸರ್ಕಾರದ ಅಧೀನದಲ್ಲಿ ಇರುವಂತಹ ಈ ಬ್ಯಾಂಕಿನಲ್ಲಿ ತನ್ನ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯೋಜನೆಗಳನ್ನು ಆಗಾಗ ಜಾರಿಗೆ ತರುವ ಕೆಲಸವನ್ನು ಮಾಡುತ್ತದೆ. ಇನ್ನು ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಮೇಲಿನ ಬಡ್ಡಿ ದರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚು ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

2024ರ ಮೇ 15ರಿಂದ ಜಾರಿಗೆ ಬರುವ ರೀತಿಯಲ್ಲಿ ಎರಡು ಕೋಟಿ ರೂಪಾಯಿಗಳಿಗಿಂತ ಕಡಿಮೆ ಹಣದ ಹೂಡಿಕೆ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈ ವಿಚಾರದ ಬಗ್ಗೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿದೆ. ಎರಡು ಕೋಟಿ ರೂಪಾಯಿಗಳಿಗಿಂತ ಕಡಿಮೆ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ 75 ಬೇಸಿಸ್ ಪಾಯಿಂಟ್ ಗಳನ್ನು ಹೆಚ್ಚಳ ಮಾಡಲಾಗಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ.

ಪರಿಷ್ಕರಿಸಿರುವ ಬಡ್ಡಿದರ!

  • 46 ರಿಂದ 179 ದಿನಗಳ ಮೇಲಿನ ಫಿಕ್ಸ್ಡ್ ಡೆಪಾಸಿಟ್ ಹೂಡಿಕೆ ಮೇಲೆ ಈ ಹಿಂದೆ ಇದ್ದ 4.75 ಪ್ರತಿಶತ ಬಡ್ಡಿದರವನ್ನು 5.50 ಕ್ಕೆ ಹೆಚ್ಚಿಸಲಾಗಿದೆ. ಇದೆ ಯೋಜನೆಯಲ್ಲಿ ಹಿರಿಯ ನಾಗರಿಕರ ಬಡ್ಡಿದರವನ್ನು 5.25 ರಿಂದ 5.75ಕ್ಕೆ ಹೆಚ್ಚಿಸಲಾಗಿದೆ.
  • 180 ರಿಂದ 210 ದಿನಗಳ ಮೇಲಿನ ಫಿಕ್ಸ್ಡ್ ಡೆಪಾಸಿಟ್ ಹೂಡಿಕೆಯ ಮೇಲೆ ಸಾಮಾನ್ಯ ನಾಗರಿಕರಿಗೆ ಇದ್ದಂತಹ 5.75 ಪ್ರತಿಶತ ಬಡ್ಡಿ ದರವನ್ನು ಆರು ಪ್ರತಿಶತಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರ ಬಡಿದರವನ್ನು 6.25 ಪ್ರತಿಶತ ಕೆ ಹೆಚ್ಚಿಸಲಾಗಿದೆ.
  • 2 11 ದಿನದಿಂದ ಒಂದು ವರ್ಷದ ಮೇಲಿನ ಫಿಕ್ಸ್ಡ್ ಡೆಪಾಸಿಟ್ ಹೂಡಿಕೆ ಮೇಲೆ ಸಾಮಾನ್ಯ ನಾಗರಿಕರಿಗೆ ಆರು ಪ್ರತಿಶತ ಬಡ್ಡಿದರವನ್ನು 6.25 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರ ಬಡ್ಡಿ ದರವನ್ನು 6.75% ಹೆಚ್ಚಿಸಲಾಗಿದೆ.
  • ಮಾಹಿತಿ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಳು ದಿನಗಳಿಂದ 45 ದಿನಗಳ ಮೇಲಿನ ಹೂಡಿಕೆಯ ಮೇಲೆ ಯಾವುದೇ ರೀತಿಯ ಬಡ್ಡಿದರವನ್ನು ಬದಲಾವಣೆ ಮಾಡಿಲ್ಲ ಎಂಬುದಾಗಿ ತಿಳಿದುಬಂದಿದೆ. ಇವುಗಳ ಜೊತೆಗೆ ಒಂದರಿಂದ ಎರಡು ವರ್ಷ ಎರಡರಿಂದ ಮೂರು ವರ್ಷ ಮೂರರಿಂದ ಐದು ವರ್ಷ ಹಾಗೂ 5 ರಿಂದ 10 ವರ್ಷಗಳ ಫಿಕ್ಸೆಡ್ ಡೆಪಾಸಿಟ್ ಮೇಲೆ ಕೂಡ ಯಾವುದೇ ರೀತಿಯ ಬಡ್ಡಿ ದರದ ಬದಲಾವಣೆ ಆಗಿಲ್ಲ ಅನ್ನೋದನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೆಬ್ಸೈಟ್ಗಳು ಅಧಿಕೃತವಾಗಿ ಘೋಷಣೆ ಮಾಡಿವೆ.

ಒಂದು ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚ್ ನಲ್ಲಿ ನೀವು ಕೂಡ ಖಾತೆಯನ್ನು ಹೊಂದಿದ್ದರೆ ಇವುಗಳಲ್ಲಿ ಬಡ್ಡಿ ದರವನ್ನು ಹೆಚ್ಚಳ ಮಾಡಿರುವಂತಹ ಯೋಜನೆ ಅಥವಾ ಸಮಯಾವಧಿಯ ಮೇಲೆ ನೀವು ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದಾಗಿದೆ

Comments are closed.