Tirupati: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರೋ ಭಕ್ತಾಭಿಮಾನಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಗುಡ್ ನ್ಯೂಸ್!

Tirupati: ತಿರುಪತಿ ತಿಮ್ಮಪ್ಪನ ದರ್ಶನ ಅನ್ನೋದು ಅವರ ಭಕ್ತಾಭಿಮಾನಿಗಳಿಗೆ ವೈಕುಂಠದ ದರ್ಶನ ಎಂದು ಹೇಳಬಹುದಾಗಿದೆ. ಅಷ್ಟರ ಮಟ್ಟಿಗೆ ತಿರುಪತಿ ಸಾನಿಧ್ಯ ಎನ್ನುವುದು ಪವಿತ್ರತೆಯನ್ನು ಹೊಂದಿದೆ. ಪ್ರತಿದಿನ ಲಕ್ಷಾಂತರ ಭಕ್ತಾಭಿಮಾನಿಗಳು ತಿಮ್ಮಪ್ಪನ ದರ್ಶನವನ್ನು ಪಡೆದುಕೊಳ್ಳಲು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಇನ್ನು ಸದ್ಯದ ಮಟ್ಟಿಗೆ ಬೇಸಿಗೆ ರಜೆಯ ಕಾರಣದಿಂದಾಗಿ ಕೂಡ ತಿರುಪತಿಗೆ ಬರುತ್ತಿರುವಂತಹ ಭಕ್ತಾಭಿಮಾನಿಗಳ ಸಂಖ್ಯೆಗಳ ಹೆಚ್ಚಾಗಿದೆ ಇದೇ ಕಾರಣಕ್ಕಾಗಿ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಆಗಿರುವಂತಹ ಟಿಟಿಡಿ ಕೆಲವೊಂದು ಸೂಕ್ತ ಕ್ರಮಗಳನ್ನು ಕೈ ತೆಗೆದುಕೊಳ್ಳುವಂತಹ ನಿರ್ಧಾರ ಮಾಡಿದೆ.

ಮೇ 27ರಿಂದ ಮೇ 29 ರ ವರೆಗೆ ಮೂರು ದಿನಗಳ ಕಾಲ ಕಲ್ಯಾಣ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ವಸಂತೋತ್ಸವ ಶ್ರೀನಿವಾಸಮಂಗಲಪುರದಲ್ಲಿ ನಡೆಯಲಿದೆ. ಉಭಯ ನಂಚರು ಶ್ರೀಗಳು ಕೂಡ ಮೊದಲೆರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕೊನೆಯ ದಿನ ಉತ್ಸವ ಮೂರ್ತಿಗಳನ್ನು ವಸಂತ ಮಂಟಪಕ್ಕೆ ಕರೆತಂದು ವೈದಿಕರು ದರ್ಬಾರನ್ನು ಏರ್ಪಡಿಸುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ವಸಂತೋತ್ಸವದ ಪ್ರಮುಖ ಉದ್ದೇಶ ಅಂದ್ರೆ ವಸಂತ ಋತುವಿನಲ್ಲಿ ದೊರೆಯುವಂತಹ ಹೂವು ಹಣ್ಣುಗಳನ್ನು ಶ್ರೀನಿವಾಸನಿಗೆ ಅರ್ಪಿಸಿ ಆತನ ಆಶೀರ್ವಾದವನ್ನು ಪಡೆದುಕೊಳ್ಳುವುದೇ ಪ್ರಮುಖ ಉದ್ದೇಶವಾಗಿರುತ್ತದೆ. ಇನ್ನು ಈ ವಸಂತೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಕೂಡ ಇದೆ ಆಗಿರುತ್ತದೆ.

ಭಕ್ತಾಭಿಮಾನಿಗಳಿಗೆ ತೊಂದರೆ ಆಗದೆ ಇರುವ ರೀತಿಯಲ್ಲಿ ಟಿಟಿಡಿ ಸೂಕ್ತ ಕ್ರಮ ಕೈಗೊಳ್ಳಲಿದೆ!

ಇದೇ ಸಂದರ್ಭದಲ್ಲಿ ಬೇಸಿಗೆ ರಜೆ ಇರುವ ಕಾರಣದಿಂದಾಗಿ ತಿರುಮಲಕ್ಕೆ ಭಕ್ತಾಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿ ಬರುತ್ತಿದೆ. ಈ ಸಂದರ್ಭದಲ್ಲಿ ಟಿಟಿಡಿ ಭಕ್ತಾಭಿಮಾನಿಗಳಿಗೆ ಯಾವುದೇ ಕಾರಣಕ್ಕೂ ಕೂಡ ತೊಂದರೆ ಆಗದೆ ಇರುವ ನಿಟ್ಟಿನಲ್ಲಿ ನೋಡಿಕೊಳ್ಳುವ ನಿರ್ಧಾರವನ್ನು ಮಾಡಿದೆ. ಕಂಪಾರ್ಟ್ಮೆಂಟ್ ನಲ್ಲಿ ನಿರಂತರವಾಗಿ ಆಹಾರ ಹಾಗೂ ನೀರು ಮಜ್ಜಿಗೆ ಅಂತಹ ಅಗತ್ಯ ಆಹಾರ ವಸ್ತುಗಳನ್ನು ನೀಡುವಂತಹ ಕೆಲಸವನ್ನು ಅವಿರತವಾಗಿ ಮಾಡುವಂತಹ ವ್ಯವಸ್ಥೆಯನ್ನು ಈಗಾಗಲೇ ಟಿಟಿಡಿ ಮಾಡಿಕೊಂಡಿದೆ. ಈ ಮೂಲಕ ಭಕ್ತಾಭಿಮಾನಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವಂತಹ ಕಾಳಜಿಯನ್ನು ವಹಿಸಿಕೊಳ್ಳುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ.

ಇದರ ಜೊತೆಗೆ ವೈದ್ಯಕೀಯ ಸೌಲಭ್ಯಗಳನ್ನು ಕೂಡ ಭಕ್ತಾಭಿಮಾನಿಗಳಿಗೆ ನೀಡಲಾಗುತ್ತಿದೆ. ಬಿಸಿಲಿನ ತಾಪದಿಂದ ಭಕ್ತಾಭಿಮಾನಿಗಳನ್ನು ರಕ್ಷಿಸುವ ಕಾರಣದಿಂದಾಗಿ ಕೂಡ ಕೆಲವೊಂದು ಯೋಜನೆಗಳನ್ನು ಟಿಟಿಡಿ ಮಾಡಲು ಹೊರಟಿದೆ. ಭಕ್ತರು ಈ ಬಿಸಿಲಿನಿಂದ ತಮ್ಮನ್ನು ತಾವು ಕಾಪಾಡಿಕೊಂಡು ವಿಶ್ರಾಂತಿ ಪಡೆದುಕೊಳ್ಳುವುದಕ್ಕೆ ಶೆಡ್ ಗಳ ನಿರ್ಮಾಣ ಕೂಡ ಈಗಾಗಲೇ ಪ್ರಾರಂಭವಾಗಿದೆ ಎನ್ನುವ ಮಾಹಿತಿ ಇದೆ. ಇನ್ನು ತಿರುಪತಿಗೆ ಬರುವಂತಹ ಭಕ್ತಾಭಿಮಾನಿಗಳಿಗೂ ಕೂಡ ಸಾಕಷ್ಟು ವಿಶೇಷವಾದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ.

Comments are closed.