Bank Deposit: ಈ ಸ್ಮಾಲ್ ಬ್ಯಾಂಕ್ ಅಂತ ನಿರ್ಲಕ್ಷ ಮಾಡ್ಬೇಡಿ; ಈ ಬ್ಯಾಂಕ್ನಲ್ಲೂ ಫಿಕ್ಸೆಡ್ ಡೆಪಾಸಿಟ್ ಮೇಲೆ ಸಿಗುತ್ತದೆ ಭಾರಿ ಬಡ್ಡಿದರ!

Bank Deposit: ದೊಡ್ಡ ಮಟ್ಟದ ರಿಟರ್ನ್ಸ್ ಸಿಗಬೇಕು ಅಂತ ಅಂದ್ರೆ ಹಾಗೂ ದೀರ್ಘಕಾಲಿಕ ಹೂಡಿಕೆಯ ಬಗ್ಗೆ ಯಾರಾದ್ರೂ ಯೋಚನೆ ಮಾಡ್ತಾ ಇದ್ರೆ ಅವರೆಲ್ಲರೂ ಕೂಡ ಮಾಡಬೇಕಾಗಿರುವ ಒಂದೇ ಒಂದು ಹೂಡಿಕೆ ಅಂದ್ರೆ ಅದು ಫಿಕ್ಸೆಡ್ ಡೆಪಾಸಿಟ್. ಫಿಕ್ಸೆಡ್ ಡೆಪಾಸಿಟ್ ನಲ್ಲಿ ಒಂದು ದೀರ್ಘಕಾಲದ ವರೆಗೆ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಕೈ ತುಂಬಾ ಲಾಭವನ್ನು ಸಂಪಾದನೆ ಮಾಡುವಂತಹ ಅವಕಾಶವನ್ನು ಹೊಂದಿರುತ್ತೀರಿ ಹಾಗೂ ಆ ಹಣವನ್ನು ಉಳಿತಾಯ ಮಾಡುವುದಕ್ಕೆ ಕೊಡು ನಿಮಗೆ ಸಾಧ್ಯವಾಗುತ್ತದೆ ಯಾಕೆಂದರೆ ನಿರ್ದಿಷ್ಟ ಸಮಯದವರೆಗೆ ಆ ಹಣವನ್ನು ನೀವು ಪಡೆದುಕೊಳ್ಳುವ ಹಾಗೆ ಇರುವುದಿಲ್ಲ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಫಿಕ್ಸಿಡ್ ಡೆಪಾಸಿಟ್ ಮೇಲೆ ಅತ್ಯಂತ ಹೆಚ್ಚು ಬಡ್ಡಿದರದ ರಿಟರ್ನ್ ನೀಡುವಂತಹ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ಯಾವುವು ಅನ್ನೋದರ ಬಗ್ಗೆ. ಇಲ್ಲಿ ಯಾವೆಲ್ಲ ಬ್ಯಾಂಕುಗಳು ಕಾಣಿಸಿಕೊಳ್ಳುತ್ತವೆ ಅನ್ನೋದನ್ನ ತಪ್ಪದೆ ಲೇಖನವನ್ನು ಕೊನೆಯವರೆಗೆ ಓದುವುದರ ಮೂಲಕ ತಿಳಿದುಕೊಳ್ಳಿ.

ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಿನ ಬಡ್ಡಿದರ ನೀಡುವ 4 ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು!

  • ಸಿಟಿ ಯೂನಿಯನ್ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ 400 ದಿನಗಳ ಸಮಯ ಅವಧಿಗೆ 7.75% ನೀಡಲಾಗುತ್ತಿದೆ. ಇದು ಹಿರಿಯ ನಾಗರಿಕರಿಗೆ ನೀಡಲಾಗಿರುವಂತಹ ಬಡ್ಡಿ ದರದ ಏರಿಕೆಯಾಗಿದೆ. ಸಾಮಾನ್ಯ ನಾಗರಿಕರಿಗೆ 7.25% ಬಡ್ಡಿದರ ಸಿಗುತ್ತದೆ. ಇಲ್ಲಿ ಸಾಮಾನ್ಯ ನಾಗರಿಕರಿಗಿಂತ ಹಿರಿಯ ನಾಗರಿಕರಿಗೆ 0.50% ಬಡ್ಡಿದರವನ್ನು ಹೆಚ್ಚುವರಿ ಆಗಿ ನೀಡಲಾಗುತ್ತಿದೆ ಅನ್ನೋದನ್ನ ನೀವು ತಿಳಿದುಕೊಳ್ಳಬಹುದಾಗಿದೆ.
  • ಆರ್ ಬಿ ಎಲ್ ಬ್ಯಾಂಕ್ ನಲ್ಲಿ ಕೂಡ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ. 18 ರಿಂದ 24 ತಿಂಗಳ ಹೂಡಿಕೆ ಮೇಲೆ ಸಾಮಾನ್ಯ ನಾಗರಿಕರಿಗೆ ಎಂಟು ಪ್ರತಿಶತ ಬಡ್ಡಿ ದರ ಹಾಗೂ ಹಿರಿಯ ನಾಗರಿಕರಿಗೆ 8.50% ಬಡ್ಡಿಯನ್ನು ನಿಗದಿಪಡಿಸಲಾಗಿದೆ. ಇನ್ನು ಇದೆ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ 15ರಿಂದ 18 ತಿಂಗಳುಗಳ ಹೂಡಿಕೆಯ ಮೇಲೆ ಸಾಮಾನ್ಯ ನಾಗರಿಕರಿಗೆ 7.30 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 8.30 ಪ್ರತಿಶತ ಬಡ್ಡಿಯನ್ನು ಒದಗಿಸುತ್ತಿದೆ.
  • ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಕೂಡ ಅತ್ಯುತ್ತಮ ಬಡ್ಡಿ ದರವನ್ನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ನೀಡಲಾಗುತ್ತಿದೆ. ಎರಡರಿಂದ ಮೂರು ವರ್ಷಗಳ ಕಾಲ ಈ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೂಡಿಕೆ ಮಾಡಿದರೆ ಹಿರಿಯ ನಾಗರಿಕರಿಗೆ 9.10 ಪ್ರತಿಶತ ಹಾಗೂ ಸಾಮಾನ್ಯ ನಾಗರಿಕರಿಗೆ 8.50% ಬಡ್ಡಿಯನ್ನು ನೀಡಲಾಗುತ್ತದೆ. ಎರಡು ವರ್ಷಗಳಿಗಿಂತ ಕಡಿಮೆ ಹೂಡಿಕೆ ಮೇಲೆ ಸಾಮಾನ್ಯ ನಾಗರಿಕರಿಗೆ 8.25% ಹಾಗೂ ಹಿರಿಯ ನಾಗರಿಕರಿಗೆ 8.85 ಪ್ರತಿಶತ ಬಡ್ಡಿಯನ್ನು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ನೀಡಲಾಗುತ್ತಿದೆ.
  • ಈ ಸಾಲಿನಲ್ಲಿ ಕಾಣಿಸಿಕೊಳ್ಳುವಂತಹ ಕೊನೆಯ ಬ್ಯಾಂಕ್ ಅಂದ್ರೆ ಅದು ಕ್ಯಾಪಿಟಲ್ ಸ್ಮಾಲ್ ಫೈನಾನ್ಸ್ ಬ್ಯಾಂಕ್. ಇಲ್ಲಿ ನಾನೂರು ದಿನಗಳ ಹೂಡಿಕೆ ಮೇಲೆ ಹಿರಿಯ ನಾಗರಿಕರಿಗೆ 8.05% ಹಾಗೂ ಸಾಮಾನ್ಯ ನಾಗರಿಕರಿಗೆ 7.55 ಪ್ರತಿಶತ ಬಡ್ಡಿಯನ್ನು ನಿಗದಿಪಡಿಸಲಾಗಿದೆ. ಇವುಗಳ ಮಿತ್ರರೇ ಅತ್ಯಂತ ಹೆಚ್ಚು ಬಡ್ಡಿದರವನ್ನು ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಮೇಲೆ ನೀಡುವಂತಹ ಬ್ಯಾಂಕುಗಳು.

Comments are closed.