Government Scheme: ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಈ ಯೋಜನೆಯ ಅಡಿಯಲ್ಲಿ ಸಿಗಲಿದೆ 4 ಲಕ್ಷ ರೂಪಾಯಿ; ಇಂದೇ ಅಪ್ಲೈ ಮಾಡಿ!

Government Scheme: ಕೇಂದ್ರ ಸರ್ಕಾರ ಸಮಾಜದಲ್ಲಿ ಇರುವಂತಹ ಪ್ರತಿಯೊಂದು ವರ್ಗಗಳನ್ನು ಕೂಡ ಸಮಾನವಾಗಿ ಕಾಣುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಇದುವರೆಗೂ ಜಾರಿಗೆ ತಂದಿದೆ ಹಾಗೂ ಅದರಿಂದಾಗಿ ಕೋಟ್ಯಾಂತರ ಮಂದಿ ಅದಾಗಲೇ ಲಾಭವನ್ನು ಪಡೆದುಕೊಂಡಿದ್ದಾರೆ ಅನ್ನೋದು ಕೂಡ ಪ್ರತಿಯೊಬ್ಬರು ತಿಳಿದುಕೊಂಡಿರುವ ವಿಚಾರ. ಇನ್ನು ಇವತ್ತಿನ ಈ ವಿಶೇಷವಾದ ಲೇಖನದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರೋದು ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗಾಗಿ ಒಂದು ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ ಬನ್ನಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ವಿದ್ಯಾರ್ಥಿಗಳಿಗೆ ಮೋದಿ ಜಿ ಸರ್ಕಾರದಿಂದ ವಿಶೇಷ ಯೋಜನೆ!

ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಈ ಹೊಸ ಯೋಜನೆಯ ಮೂಲಕ ಯುವಕರು ತಮ್ಮ ಕೌಶಲ್ಯಗಳನ್ನು ಸುಧಾರಿಸುವಂತಹ ಕೆಲಸವನ್ನು ಕೂಡ ಮಾಡಬಹುದಾಗಿದ್ದು ಇದಕ್ಕಾಗಿ ಸರ್ಕಾರ ಅವರಿಗೆ ಬೇಕಾಗಿರುವಂತಹ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಗಳನ್ನು ಕೂಡ ಒದಗಿಸುವುದಕ್ಕೆ ಮುಂದಾಗಿದೆ ಎಂದು ಹೇಳಬಹುದಾಗಿದೆ. ಇದಕ್ಕಾಗಿ ಆರ್ಥಿಕ ಸಹಾಯವನ್ನು ಕೂಡ ಸರ್ಕಾರವೇ ಮಾಡುತ್ತಿದೆ ಅನ್ನೋದು ಮತ್ತೊಂದು ವಿಶೇಷವಾಗಿದೆ. ವಿದ್ಯಾರ್ಥಿಗಳ ಕೌಶಲ್ಯತೆಯ ಅಗತ್ಯತೆ ಮೇರೆಗೆ ಅವರಿಗೆ ನಾಲ್ಕು ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲವನ್ನು ಈ ಯೋಜನೆಯಲ್ಲಿ ನೀಡಲಾಗುತ್ತದೆ. ಸಾಲವನ್ನು ಮರುಪಾವತಿ ಮಾಡುವುದಕ್ಕೆ ಸರ್ಕಾರ ಯುವಕರಿಗೆ ಏಳು ವರ್ಷಗಳ ಸಮಯಾವಧಿಯನ್ನು ನೀಡುತ್ತದೆ.

ಅರ್ಹತೆಗಳು ಹಾಗೂ ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು!

ರಾಜ್ಯ ಕೌಶಲ್ಯ ನಿಗಮ ಬೆಂಬಲಿತ ಕಂಪನಿಯಲ್ಲಿ ಪ್ರವೇಶ ಪಡೆದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ವಯೋ ಮಾನ್ಯತೆಯ ವಿಚಾರಕ್ಕೆ ಬರುವುದಾದರೆ 18ರಿಂದ 50 ವರ್ಷಗಳ ನಡುವೆ ಇರುವಂತಹ ಜನರು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಬೇಕಾಗಿರುವ ಡಾಕ್ಯುಮೆಂಟ್ಸ್ ಗಳ ಮಾಹಿತಿಯನ್ನ ನೋಡೋದಾದ್ರೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಬ್ಯಾಂಕ್, ಅಕೌಂಟ್ ಡೀಟೇಲ್ಸ್, ಜಾತಿ ಪ್ರಮಾಣ ಪತ್ರ ಹಾಗೂ ನಿಮ್ಮ ವಾಸ ಸ್ಥಳದ ಡಾಕ್ಯುಮೆಂಟ್ಸ್ಗಳನ್ನು ಒದಗಿಸ ಬೇಕಾಗಿರುತ್ತದೆ.

ಕೇಂದ್ರ ಸರ್ಕಾರದಿಂದ ಜಾರಿಯಾಗಿರುವಂತಹ ಈ ಯೋಜನೆಯಲ್ಲಿ ಒಂದು ವೇಳೆ ನೀವು ಕೂಡ ಅರ್ಹತೆಯ ಮಾಪನದ ಒಳಗೆ ಸೇರುತ್ತೀರಿ ಎಂದಾದರೆ ಹಾಗೂ ಈ ಮೇಲೆ ಕೇಳಲಾಗಿರುವಂತಹ ಡಾಕ್ಯುಮೆಂಟ್ ಗಳನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ ನೀವು ಕೂಡ ಈ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ, 4 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು ಏಳು ವರ್ಷಗಳ ಮರುಪಾವತಿಯ ಅವಧಿಗೆ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಯೋಜನೆಯ ಹೆಸರು ವೃತ್ತಿಪರ ತರಬೇತಿ ಹಾಗೂ ತರಬೇತಿ ಸಾಲ ಯೋಜನೆ ಎಂಬುದಾಗಿದ್ದು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಸರ್ಕಾರಿ ಸೇವಕ ಕೇಂದ್ರಗಳಲ್ಲಿ ವಿಚಾರಿಸಬಹುದಾಗಿದೆ.

Comments are closed.