Dr. Rajkumar: ಜನ ಈಗಲೂ ಗುನುಗುನಿಸೋ ರಾಜಕುಮಾರ್ ಅವರ ಆ ಒಂದು ಹಾಡಿನ ಹಿನ್ನೆಲೆ ಕೇಳಿದರೆ ಮೈ ರೋಮ ನೆಟ್ಟಗಾಗುತ್ತೆ! ಯಾವ ಹಾಡು ಗೊತ್ತಾ?

Dr. Rajkumar: ಕನ್ನಡ ಚಿತ್ರರಂಗ ಕಂಡಂತಹ ಸಾರ್ವಕಾಲಿಕ ಶ್ರೇಷ್ಠ ನಾಯಕ ನಟರಲ್ಲಿ ರಾಜಕುಮಾರ್ ಅವರ ಹೆಸರು ಮೊದಲನೇ ಸ್ಥಾನದಲ್ಲಿ ಕಂಡುಬರುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಕನ್ನಡ ಚಿತ್ರರಂಗದ ಘನತೆ ಹಾಗೂ ಗೌರವವನ್ನು ಮೇಲಕ್ಕೆ ಕರೆದುಕೊಂಡು ಹೋಗಿರುವಂತಹ ನಟದಲ್ಲಿ ರಾಜಕುಮಾರ್ ರವರು ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ‌. ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವಂತಹ ಕೊಡುಗೆ ನಿಜಕ್ಕೂ ಕೂಡ ಪ್ರಾತಸ್ಮರಣೀಯ. ಕೇವಲ ನಟನೆ ಮಾತ್ರವಲ್ಲದೆ ಗಾಯನಕ್ಕಾಗಿ ಕೂಡ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವಂತಹ ಏಕೈಕ ಕಲಾವಿದ ಅವರು ಅಂದ್ರೆ ಅರ್ಥ ಮಾಡಿಕೊಳ್ಳಿ ಅವರ ಸಾಧನೆ ಎಂತದ್ದು ಎನ್ನುವುದನ್ನು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊದಲ ಬಾರಿಗೆ ರಾಜಕುಮಾರ್ ಅವರಿಗೆ ನೀಡಬೇಕು ಎಂಬುದಾಗಿ ನಿರ್ಧಾರ ಮಾಡಿದ ಸಂದರ್ಭದಲ್ಲಿ ಕೂಡ ಅದನ್ನು ಕುವೆಂಪು ಅವರಿಗೆ ಮೊದಲಿಗ ನೀಡಿ ನಂತರ ತಮಗೆ ಪಡೆದುಕೊಂಡರು.

ಇನ್ನು ನಾವು ಹೇಳಿರುವಂತೆ ರಾಜಕುಮಾರ್ ಅವರು ಪಡೆದುಕೊಂಡಿರುವಂತಹ ನ್ಯಾಷನಲ್ ಅವಾರ್ಡ್ ವಿಚಾರದ ಬಗ್ಗೆ ನೋಡುವುದಾದರೆ ಅವರು ಹಾಡಿರುವುದಕ್ಕಾಗಿ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿರುವುದು ಜೀವನ ಚರಿತ್ರೆ ಸಿನಿಮಾದ ಹಾಡಿಗಾಗಿ. ಈ ಸಿನಿಮಾವನ್ನು ದೊರೆಭಗವಾನ್ ನಿರ್ದೇಶನ ಮಾಡಿದರು. ಈ ಹಾಡು ರಾಜಕುಮಾರ್ ಅವರ ಸಿನಿಮಾ ಜೀವನದಲ್ಲಿ ಸಾಕಷ್ಟು ವಿಶೇಷತೆಗಳಿಗೆ ಕಾರಣವಾಗಿದೆ ಎಂದು ಹೇಳಬಹುದಾಗಿದ್ದು ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಜೀವನ ಚೈತ್ರ ಸಿನಿಮಾದ ನಾದಮಯ ಸಾಂಗ್!

ಮೊದಮೊದಲಿಗೆ ರಾಜಕುಮಾರ ಬದಲಿಗೆ ಅವರ ಕಂಠದ ರೀತಿಯಲ್ಲಿ ಪಿ ಬಿ ಶ್ರೀನಿವಾಸ್ ರವರು ಅವರ ಸಿನಿಮಾ ಗಳಲ್ಲಿ ಹಾಡನ್ನು ಹಾಡ್ತಾ ಇದ್ದರು. ನಂತರ ರಾಜಕುಮಾರ್ ರವರು ಖುದ್ದಾಗಿ ಅವರ ಸಿನಿಮಾಗಳಲ್ಲಿ ತಾವೇ ಹಾಡೋದಿಕ್ಕೆ ಪ್ರಾರಂಭ ಮಾಡುತ್ತಾರೆ. ಇನ್ನು ಜೀವನ ಚೈತ್ರ ಸಿನಿಮಾದ ನಾದಮಯ ಹಾಡಿನ ಬಗ್ಗೆ ಮಾತನಾಡುವುದಾದರೆ ಈ ಸಿನಿಮಾಗೆ ಅವರ ಅಚ್ಚುಮೆಚ್ಚಿನ ಸಾಹಿತಿಯಾಗಿರುವಂತಹ ಚಿ ಉದಯಶಂಕರ್ ಅವರು ಸಾಹಿತ್ಯವನ್ನು ಬರೆಯುತ್ತಾರೆ. ರಾಜಕುಮಾರ್ ರವರು ಈ ಹಾಡನ್ನು ಹಾಡಿ ಗಾಯನಕ್ಕೂ ಕೂಡ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿರುವಂತಹ ಏಕೈಕ ನಟ ಎಂಬಂತಹ ಖ್ಯಾತಿಗೆ ಒಳಗಾಗುತ್ತಾರೆ.

ಆ ಹಿಮದ ನಡುವೆ ಕೂಡ ತಮ್ಮ ಯೋಗ ಶಕ್ತಿಯ ಮೂಲಕ ಯಾವುದೇ ಚಪ್ಪಲಿ ಇಲ್ಲದೆ ನಡೆದು ಆ ಸಾಂಗ್ ಚಿತ್ರೀಕರಣವನ್ನು ರಾಜಕುಮಾರ್ ಅವರು ಮಾಡಿದರು ಅನ್ನೋದು ಇವತ್ತಿಗೂ ಕೂಡ ಮೈನವಿರೇಳುವ ಹಾಗೆ ಮಾಡುತ್ತದೆ‌‌. ನಟನೆ ಹಾಗೂ ಗಾಯನವನ್ನು ಎರಡನ್ನು ಕೂಡ ಸಮಾನಾಂತರವಾಗಿ ಬ್ಯಾಲೆನ್ಸ್ ಮಾಡಿಕೊಂಡು ಹೋಗುವಂತಹ ಸೂಪರ್ ಸ್ಟಾರ್ ನಮ್ಮ ಭಾರತೀಯ ಚಿತ್ರರಂಗದಲ್ಲಿ ಇದ್ದರು ಅಂದರೆ ಅದು ಖಂಡಿತವಾಗಿ ರಾಜಕುಮಾರ್ ಅಲ್ಲದೆ ಬೇರೆ ಯಾರು ಆಗಿರಲು ಕೂಡ ಸಾಧ್ಯವಿಲ್ಲ. ಗಾಯಕರನ್ನು ಮೀರಿಸುವಂತಹ ಕಂಠ ಸೌಂದರ್ಯವನ್ನು ನಾವು ರಾಜಕುಮಾರ್ ರವರಲ್ಲಿ ಗಮನಿಸಬಹುದಾಗಿತ್ತು ಅಷ್ಟರಮಟ್ಟಿಗೆ ತಮ್ಮ ಹಾಡುಗಳ ಮೂಲಕ ಎಲ್ಲರ ಮನಸ್ಸನ್ನು ರಂಜಿಸಿದರು.

Comments are closed.