Fixed Deposit: ಒಂದು ವರ್ಷದವರೆಗೆ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಠೇವಣಿ ಇಡುವುದಕ್ಕೆ ಈ ಮೂರು ಬೆಸ್ಟ್ ಬ್ಯಾಂಕುಗಳು!

Fixed Deposit: ಫಿಕ್ಸಿಡ್ ಡೆಪಾಸಿಟ್ ಅನ್ನೋದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿರುವ ಪ್ರಮುಖ ವಿಚಾರ ಏನಂದರೆ, ದೀರ್ಘಕಾಲಿಕವಾಗಿ ಹಣವನ್ನು ಹೂಡಿಕೆ ಮಾಡುವ ನಿಟ್ಟಿನಲ್ಲಿ ಅಂದರೆ ದೊಡ್ಡ ರಿಟರ್ನ್ ಅನ್ನು ನಿರೀಕ್ಷೆ ಮಾಡುವಂತಹ ವ್ಯಕ್ತಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಸೂಕ್ತವಾಗಿರುತ್ತಾರೆ. ಯಾಕೆಂದ್ರೆ ಹಣದ ಹೂಡಿಕೆಯ ವಿಚಾರದಲ್ಲಿ ಅದರಲ್ಲೂ ವಿಶೇಷವಾಗಿ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಹೂಡಿಕೆ ಮಾಡಿದಲ್ಲಿ ಅದು ಎಷ್ಟು ರಿಟರ್ನ್ ನೀಡುತ್ತದೆ ಅನ್ನೋದು ನಿಮ್ಮ ತಾಳ್ಮೆಯ ಮೇಲೆ ನಿರ್ಧರಿತವಾಗುತ್ತದೆ. ಇನ್ನು ಅದೇ ರೀತಿಯಲ್ಲಿ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಒಂದು ವರ್ಷದವರೆಗೆ ಹೂಡಿಕೆ ಮಾಡುವಂತಹ ಅವಕಾಶವನ್ನು ಕೂಡ ನೀಡಲಾಗುತ್ತದೆ. ಹಾಗಿದ್ರೆ ಬನ್ನಿ ಒಂದು ವರ್ಷದವರಿಗೆ ಫಿಕ್ಸೆಡ್ ಡೆಪಾಸಿಟ್ ಠೇವಣಿಯನ್ನು ಮಾಡಲು ಇರುವಂತಹ ಬೆಸ್ಟ್ ಬ್ಯಾಂಕುಗಳು ಯಾವುವು ಅನ್ನೋದನ್ನ ಸಂಪೂರ್ಣ ವಿವರವಾಗಿ ತಿಳಿಯೋಣ.

ಹೆಚ್ ಡಿ ಎಫ್ ಸಿ ಬ್ಯಾಂಕ್

ಪ್ರೈವೇಟ್ ಸೆಕ್ಟರ್ ನಲ್ಲಿ ಕಾಣಿಸಿಕೊಳ್ಳುವಂತಹ ಖ್ಯಾತನಾಮ ಬ್ಯಾಂಕುಗಳಲ್ಲಿ ಹೆಚ್ ಡಿ ಎಫ್ ಸಿ ಬ್ಯಾಂಕ್ನ ಹೆಸರು ಕೂಡ ಪ್ರಮುಖವಾಗಿ ಕೇಳಿಬರುತ್ತದೆ. ಇಲ್ಲಿ ನೀವು ಒಂದು ವರ್ಷದಿಂದ 15 ತಿಂಗಳ ನಡುವೆ ಮಾಡುವಂತ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ 6.6 ಪ್ರತಿಶತ ಬಡ್ಡಿದರವನ್ನು ಪಡೆದುಕೊಳ್ಳುತ್ತೀರಿ. ಇನ್ನು ನಾಲ್ಕು ವರ್ಷದ ಏಳು ತಿಂಗಳಿನಿಂದ 55 ತಿಂಗಳು ವರೆಗೆ ಮಾಡುವಂತಹ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ಹೆಚ್ ಡಿ ಎಫ್ ಸಿ ಬ್ಯಾಂಕ್ ನಿಮಗೆ 7.20 ಪ್ರತಿಶತ ಬಡ್ಡಿಯನ್ನು ನೀಡುತ್ತದೆ.

ಐಸಿಐಸಿಐ ಬ್ಯಾಂಕ್

ಪ್ರೈವೇಟ್ ಸೆಕ್ಟರ್ ನಲ್ಲಿರುವಂತಹ ಮತ್ತೊಂದು ಜನಪ್ರಿಯ ಬ್ಯಾಂಕ್ ಅಂದ್ರೆ ಅದು ಐಸಿಐಸಿಐ ಬ್ಯಾಂಕ್. ಇಲ್ಲಿ ನಿಮಗೆ ಮಾಡುವಂತಹ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ 15 ತಿಂಗಳಿಂದ ಎರಡು ವರ್ಷಗಳ ಅವಧಿಯ ಮೇಲೆ 7.2% ಬಡ್ಡಿದರವನ್ನು ನಿಮಗೆ ನೀಡಲಾಗುತ್ತದೆ. ಒಂದು ವರ್ಷದಿಂದ 15 ತಿಂಗಳುಗಳ ಮೇಲಿನ ಫಿಕ್ಸ್ಡ್ ಡೆಪಾಸಿಟ್ ಹೂಡಿಕೆಯ ಮೇಲೆ ಈ ಬ್ಯಾಂಕಿನಲ್ಲಿ 6.5% ಬಡ್ಡಿಯನ್ನು ನೀಡಲಾಗುತ್ತದೆ.

ಬ್ಯಾಂಕ್ ಆಫ್ ಬರೋಡ

ಬ್ಯಾಂಕ್ ಆಫ್ ಬರೋಡದಲ್ಲಿ ನೀವು ಎರಡರಿಂದ ಮೂರು ವರ್ಷಗಳವರೆಗೆ ಮಾಡುವಂತಹ ಹೂಡಿಕೆ ಮೇಲೆ 7.25% ಬಡ್ಡಿ ದರವನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳುತ್ತೀರಿ.

ಇವುಗಳ ಜೊತೆಗೆ ಇನ್ನೂ ಕೆಲವು ಬ್ಯಾಂಕುಗಳ ಬಡ್ಡಿದರವನ್ನು ನೀವು ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಇಲ್ಲಿ ವಿಧಿಸಲಾಗಿರುವಂತಹ ಪ್ರತಿಯೊಂದು ಬಡ್ಡಿ ದರದ ಮೇಲೆ ಹಿರಿಯ ನಾಗರಿಕರಿಗೆ 0.50% ಹೆಚ್ಚಿನ ಬಡ್ಡಿದರವನ್ನು ನೀಡಲಾಗುತ್ತದೆ. ಉದಾಹರಣೆಗೆ ಇಲ್ಲಿ ಮೂರರಿಂದ ಐದು ವರ್ಷಗಳ ಫಿಕ್ಸೆಡ್ ಡೆಪಾಸಿಟ್ ಮೇಲೆ 6.75 ಪ್ರತಿಶತ ಬಡ್ಡಿ ದರವನ್ನು ಪಡೆದುಕೊಳ್ಳಬಹುದಾಗಿದೆ. 2 ರಿಂದ 3 ವರ್ಷಗಳ ಫಿಕ್ಸ್ಡ್ ಡೆಪಾಸಿಟ್ ಹೂಡಿಕೆಯ ಮೇಲೆ ಏಳು ಪ್ರತಿಶತ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್

ಒಂದರಿಂದ ಎರಡು ವರ್ಷಗಳ ಮೇಲಿನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಕೋಟಕ್ ಮಹಿಂದ್ರ ಬ್ಯಾಂಕ್ ನಲ್ಲಿ ಗ್ರಾಹಕರಿಗೆ 7.25 ಪ್ರತಿಶತ ಬಡ್ಡಿದರವನ್ನು ಪಡೆದುಕೊಳ್ಳುವಂತಹ ಅವಕಾಶ ಇದೆ. 180 ದಿನಗಳ ಹೂಡಿಕೆಯ ಮೇಲೆ ಕೋಟಕ್ ಮಹೀಂದ್ರಾ ಬ್ಯಾಂಕಿನಲ್ಲಿ ಏಳು ಪ್ರತಿಶತ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ.

Comments are closed.