HSRP: HSRP ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳದೆ ಇರೋರೊಗೂ ಸರ್ಕಾರದಿಂದ ಗುಡ್ ನ್ಯೂಸ್; ಇಂಥವರು ದಂಡ ಕಟ್ಟಬೇಕಾಗಿಲ್ಲ!

HSRP: HSRP ನಂಬರ್ ಪ್ಲೇಟ್ ಗಳಿಗೂ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬರಿಗೂ ಕೂಡ ಕಡ್ಡಾಯವಾಗಿ ಮೇ 31ರ ಒಳಗೆ ತಮ್ಮ ವಾಹನಗಳಿಗೆ ಸಾರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಮೂಲಕ ಅಳವಡಿಸಿಕೊಳ್ಳಬೇಕು ಎನ್ನುವುದಾಗಿ ಸಾರಿಗೆ ಇಲಾಖೆಯಿಂದ ಕಡ್ಡಾಯವಾಗಿ ನಿಯಮ ಹೊರಬಂದಿದೆ. ಹೀಗಿದ್ರೂ ಕೂಡ ರಾಜ್ಯದಲ್ಲಿ ಜನತೆ ಎರಡು ಕೋಟಿ ವಾಹನಗಳಲ್ಲಿ ಈಗ ರಿಜಿಸ್ಟ್ರೇಷನ್ ಆಗಿರೋದು ಕೇವಲ 35 ಲಕ್ಷ ವಾಹನ ಮಾತ್ರ. ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಈ ಕೆಲಸ ಮಾಡುವುದಕ್ಕೆ ಸಾರಿಗೆ ಇಲಾಖೆ ರಾಜ್ಯದ ಜನರಿಗೆ ಸಮಯಾವಕಾಶವನ್ನು ನೀಡುತ್ತಲೇ ಬಂದಿದೆ ಆದರೆ ಜನರು ಇಂದಿಗೂ ಕೂಡ ನಿರ್ಲಕ್ಷವನ್ನ ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಹೇಳಬಹುದು. ನಂತರ ಸಮಯಾವಧಿ ಮುಗಿದ ನಂತರ ಹಣವನ್ನು ಪೈನ್ ರೂಪದಲ್ಲಿ ಕಟ್ಟುವಾಗ ಮಾತ್ರ ಜನ ತಕರಾರು ತೆಗೆಯುತ್ತಾರೆ. ನಮ್ಮ ಜನರ ಈ ಮನೋಭಾವನೆ ಬದಲಾಗಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ.

HSRP ನಂಬರ್ ಪ್ಲೇಟ್ ಅಳವಡಿಸುವುದಕ್ಕೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದರೂ ಕೂಡ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಷ್ಠೆ ಎನ್ನುವುದು ಜನರಿಂದ ಸಿಕ್ತಾ ಇಲ್ಲ ಅನ್ನೋದೇ ಬೇಸರವಾದ ವಿಚಾರವಾಗಿದೆ. HSRP ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳದೆ ಇರುವವರಿಗೂ ಕೂಡ ಈಗ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ ಎಂದು ಹೇಳಬಹುದು.

HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಇರುವವರಿಗೆ ಗುಡ್ ನ್ಯೂಸ್.

ಮೇ 31ರವರೆಗೆ ಸಾರಿಗೆ ಇಲಾಖೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವ ಆದೇಶವನ್ನು ಜನರಿಗೆ ನೀಡಿದ್ದು ಅನ್ನೋದನ್ನ ನಿಮಗೆ ವಿಶೇಷವಾಗಿ ಹೇಳಬೇಕಾದ ಅಗತ್ಯವಿಲ್ಲ ಹಾಗೂ ಇದಾದ ನಂತರ ಜೂನ್ ಒಂದರಿಂದ ಸಾಮಾನ್ಯವಾಗಿ ಈ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಹೋದಲ್ಲಿ ಅವರ ವಿರುದ್ಧ ಟ್ರಾಫಿಕ್ ಪೊಲೀಸರು ವಿಧಿಸಲಿದ್ದಾರೆ ಅನ್ನೋದಾಗಿ ತಿಳಿದು ಬಂದಿದೆ. ಅದರ ನಡುವಲ್ಲಿ ಈಗ ಈ ವಿಚಾರದ ಬಗ್ಗೆ ಮತ್ತೊಂದು ಗುಡ್ ನ್ಯೂಸ್ ಅನ್ನು ಹೈಕೋರ್ಟ್ ನೀಡಿದೆ.

HSRP ನಂಬರ್ ಪ್ಲೇಟ್ ಅಳವಡಿಕೆ ಬಗ್ಗೆ BND ಎನರ್ಜಿ ಲಿಮಿಟೆಡ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಇದೇ ರೀತಿಯಲ್ಲಿ ಸಾಕಷ್ಟು ಅರ್ಜಿಗಳು ಜೂನ್ 11ರವರೆಗೆ ನಿಗದಿಯಾಗಿದೆ. ಇದೇ ಕಾರಣಕ್ಕಾಗಿ ಜೂನ್ 12ರ ವರೆಗೆ HSRP ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳುವಂತಹ ಅವಕಾಶವನ್ನು ನೀಡಲಾಗಿದ್ದು ಈ ಸಂದರ್ಭದಲ್ಲಿ ಯಾವುದೇ ರೀತಿಯ ಫೈನ್ ಕಟ್ಟ ಬೇಕಾದಂತಹ ಅವಶ್ಯಕತೆ ಇಲ್ಲ ಎನ್ನುವ ರೀತಿಯಲ್ಲಿ ಕೂಡ ಹೈಕೋರ್ಟ್ ಆದೇಶವನ್ನು ನೀಡಿದೆ. ಜೂನ್ 12ರ ನಂತರ ಈ ಪ್ರಕ್ರಿಯೆಯನ್ನು ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಪರಿಪಾಲಿಸ ಬೇಕಾಗಿರುವುದು ಕಾನೂನಾತ್ಮಕವಾಗಿ ಕೂಡ ಈಗ ನಿಗದಿಯಾಗಿರುವುದನ್ನು ನೀವು ಗಮನಿಸಬಹುದಾಗಿದೆ.

Comments are closed.