PM Kisan Scheme: ಪಿಎಂ ಕಿಸಾನ್ ಹಣ ಬೇಕು ಅಂದ್ರೆ ತಕ್ಷಣ ಈ ಕೆಲ್ಸ ಮಾಡಿ; ಇಲ್ಲಾಂದ್ರೆ ಹಣ ಬರಲ್ಲ!

PM Kisan Scheme: ರೈತರಿಗೆ ಆರ್ಥಿಕ ಧನ ಸಹಾಯ ಮಾಡಬೇಕು ಎನ್ನುವ ಕಾರಣಕ್ಕಾಗಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆ ಜಾರಿಗೆ ತಂದಿದ್ದು. ಈ ಯೋಜನೆಯ ಮೂಲಕ ಅರ್ಹರಾಗಿರುವಂತಹ ರೈತರಿಗೆ ಆರ್ಥಿಕ ಧನ ಸಹಾಯವನ್ನು ಮಾಡುವಂತಹ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಆದರೆ ಕೆಲವೊಂದು ನಿಯಮಗಳನ್ನ ಮೀರಿದರೆ ನೀವು ಪಿಎಂ ಕಿಸಾನ್ ಯೋಜನೆಯ ಹಣವನ್ನು ಪಡೆದುಕೊಳ್ಳುವುದಕ್ಕೆ ಅನರ್ಹರಾಗಿರುತ್ತೀರಿ ಅನ್ನೋದನ್ನ ಕೂಡ ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ಹಾಗಿದ್ರೆ ಬನ್ನಿ ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಪಿಎಂ ಕಿಸಾನ್ ಯೋಜನೆಯ ನಿಯಮದಲ್ಲಿ ಈ ರೀತಿಯ ತಪ್ಪನ್ನು ಮಾಡುವುದಕ್ಕೆ ಹೋಗಬೇಡಿ!

ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಮೂರು ಕಂತಿನಲ್ಲಿ 6000 ಹಣವನ್ನು ತಲಾ ಎರಡು ಸಾವಿರ ರೂಪಾಯಿಗಳ ರೀತಿಯಲ್ಲಿ ನೀಡಲಾಗುತ್ತದೆ. ಈ ಯೋಜನೆಯ ಲಾಭವನ್ನು 3 ಲಕ್ಷಕ್ಕೂ ಹೆಚ್ಚಿನ ರೈತ ಕುಟುಂಬಗಳು ಪಡೆದುಕೊಳ್ಳುತ್ತಿರುವುದು ಕೂಡ ಗಮನಾರ್ಹವಾಗಿವೆ. ಇನ್ನು ಪಿಎಂ ಕಿಸಾನ್ ಯೋಜನೆಯ ಹಣ ಕೆಲವರಿಗೆ ಒಂದು ಕಂತು ಕೂಡ ಬಂದಿಲ್ಲ ಅನ್ನೋದಾಗಿ ತಿಳಿದುಬಂದಿದೆ.

ಇವರು ಅನರ್ಹರಾಗಿರುತ್ತಾರೆ!

  • ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹಣ ಸಿಗುತ್ತದೆ.
  • ಸ್ವಂತ ಸಾಗುವಳಿ ಭೂಮಿ ಇಲ್ಲದೇ ಇದ್ರೆ ಹಾಗೂ 18 ವರ್ಷಕ್ಕಿಂತ ಕಡಿಮೆ ಇರುವಂತಹ ವ್ಯಕ್ತಿಗಳಿಗೆ ಇದು ಸಿಗೋದಿಲ್ಲ.
  • ತೆರಿಗೆ ಇಲಾಖೆಯ ನಿಯಮವನ್ನು ಮೀರಿರುವಂತಹ ಆದಾಯವನ್ನು ಹೊಂದಿರುವವರು ಈ ಯೋಜನೆಯನ್ನು ಪಡೆದುಕೊಳ್ಳುವ ಹಾಗೆ ಇಲ್ಲ. eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಇರುವಂತಹ ಕುಟುಂಬದವರಿಗೂ ಕೂಡ ನೀಡಲಾಗುವುದಿಲ್ಲ.
  • ಈ ಯೋಜನೆಯನ್ನು ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಫೇಕ್ ಡಾಕ್ಯುಮೆಂಟ್ ಗಳನ್ನು ನೀಡಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವವರು ಕೂಡ ಇದರಿಂದ ಹೊರ ಹೋಗುತ್ತಾರೆ ಹಾಗೂ ಮನೆಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಇಂಜಿನಿಯರ್ ಡಾಕ್ಟರ್ ಪೊಲೀಸ್ ನಂತಹ ಅಧಿಕಾರಿಗಳು ಇದ್ದರೂ ಕೂಡ ಅವರಿಗೂ ಕೂಡ ಸಿಗುವುದಿಲ್ಲ.
  • ಬೇರೆ ರೈತಪರವಾಗಿರುವಂತಹ ಯೋಜನೆಯಲ್ಲಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಅದಕ್ಕೂ ಕೂಡ ಸಿಗೋದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಆರ್ಥಿಕವಾಗಿ ಹಿಂದುಳಿದಿರುವಂತಹ ರೈತ ವರ್ಗದ ಜನರಿಗಾಗಿ ಜಾರಿಗೆ ತಂದಿರುವಂತಹ ಯೋಜನೆಯಾಗಿದ್ದು ಇದರಿಂದಾಗಿ ಆ ವರ್ಗದ ಜನರು ಸ್ವಲ್ಪಮಟ್ಟಿಗೆ ಆರ್ಥಿಕ ಸಹಾಯವನ್ನು ಸರ್ಕಾರದ ಮೂಲಕ ಪಡೆದುಕೊಳ್ಳಬಹುದು ಎನ್ನುವ ನಿಟ್ಟಿನಲ್ಲಿಯೇ ಅರ್ಥಗರ್ಭಿತ ಯೋಜನೆಯನ್ನು ಜಾರಿಗೆ ತರಲಾಗಿದೆ. ಹೀಗಾಗಿ ಈ ನಿಯಮಗಳ ವಿರುದ್ಧವಾಗಿರುವಂತಹ ಜನರು ಒಂದು ವೇಳೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳುತ್ತಿದ್ದರೆ ಇನ್ಮುಂದೆ ಅವರಿಗೆ ಯಾವುದೇ ರೀತಿಯಲ್ಲಿ ಕೂಡ ಹಣ ವರ್ಗಾವಣೆ ಆಗುವುದಿಲ್ಲ ಅನ್ನೋದನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಆದಷ್ಟು ಇಂತಹ ರೈತರಿಗೆ ಜಾರಿಗೆ ತಂದಿರುವಂತಹ ಯೋಜನೆಗಳನ್ನ ಅವರಿಗೆ ಸಲ್ಲುವ ರೀತಿಯಲ್ಲಿ ಪ್ರಜ್ಞಾವಂತ ನಾಗರಿಕರಾಗಿ ನಡೆದುಕೊಳ್ಳೋಣ.

Comments are closed.