Film: “ಪ್ರಶಾಂತ್ ನೀಲ್ ರವರ ಈ ಒಂದು ಕೆಟ್ಟ ಅಭ್ಯಾಸ ನನಗೆ ಕೋಪ ತರಿಸುತ್ತಿತ್ತು” ಅಂದ ಸಲಾರ್ ಸಿನಿಮಾದ ಖ್ಯಾತ ನಟಿ!

Film: ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದಂತಹ ಸಿನಿಮಾ ಅಂದ್ರೆ ಅದು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಹಾಗೂ ಪ್ರವಾಸ ರವರ ನಾಯಕತ್ವದಲ್ಲಿ ಮೂಡಿಬಂದಿರುವಂತಹ ಸಲಾರ್ ಸಿನಿಮಾ ಎಂದು ಹೇಳಬಹುದಾಗಿದೆ. ಸಿನಿಮಾ ನೋಡೋದಕ್ಕೆ ಬಹುತೇಕ ಉಗ್ರಂ ಸಿನಿಮಾದ ರೀತಿಯಲ್ಲಿ ಕಾಣಿಸಿಕೊಂಡರು ಕೂಡ ದೊಡ್ಡ ಬಜೆಟ್ ತಕ್ಕಂತೆ ಸಿನಿಮಾವನ್ನು ಸೊಗಸಾಗಿ ಮೂಡಿಸಲಾಗಿದೆ.

ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 600 ಕೋಟಿಗಳಿಗಿಂತ ಹೆಚ್ಚಿನ ಕಲೆಕ್ಷನ್ ಮಾಡಿರುವುದು ಕೂಡ ಸಿನಿಮಾ ಯಾವ ಮಟ್ಟದಲ್ಲಿ ಯಶಸ್ವಿಯಾಗಿದೆ ಅನ್ನೋದನ್ನ ಸಾಬೀತುಪಡಿಸುತ್ತದೆ. ಸಾಕಷ್ಟು ಸತತ ಸಿನಿಮಾಗಳು ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ ರವರಿಗೆ ಪ್ರಶಾಂತ್ ನೀಲ್ ಸಲಾರ್ ಸಿನಿಮಾದ ಮೂಲಕ ನಿಜವಾದ ಗೆಲುವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಪ್ರಭಾಸ್ ರವರು ಇತ್ತೀಚಿನ ದಿನಗಳಲ್ಲಿ ಸತತವಾಗಿ ಸಿನಿಮಾಗಳು ಸೋಲಿನಿಂದ ಕಂಗೆಟ್ಟಿದ್ದರು. ಆ ಸಂದರ್ಭದಲ್ಲಿ ಅವರಿಗೆ ನಿಜವಾದ ಬ್ರೇಕ್ ನೀಡಿದಂತಹ ಕ್ರೆಡಿಟ್ ಅನು ನಾವು ಪ್ರಶಾಂತ್ ನೀಲ್ ರವರಿಗೆ ಸಲ್ಲಿಸಬೇಕಾಗುತ್ತದೆ.

ಪ್ರಶಾಂತ್ ನೀಲ್ ಅವರ ಈ ಕೆಟ್ಟ ಗುಣದಿಂದಾಗಿ ಆ ಖ್ಯಾತ ನಟಿಗೆ ಕೋಪ ಬರುತ್ತಿತ್ತಂತೆ?!

ಸಲಾರ್ ಸಿನಿಮಾದಲ್ಲಿ ಸಾಕಷ್ಟು ಖ್ಯಾತ ನಾಮ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಮ್ಮ ಕನ್ನಡದಿಂದ ದೇವರಾಜ್ ಹಾಗೂ ಪ್ರಮೋದ್ ಸೇರಿದಂತೆ ಸಾಕಷ್ಟು ಕಲಾವಿದರನ್ನು ನೀವು ಗಮನಿಸಬಹುದಾಗಿದೆ. ಇನ್ನು ನಾವು ಮಾತನಾಡಲು ಹೊರಟಿರೋದು ಶ್ರೀಯಾ ರೆಡ್ಡಿ ಅವರ ಬಗ್ಗೆ.

ಶ್ರೀಯಾ ರೆಡ್ಡಿ ವರದರಾಜ ಮನ್ನಾರ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ಪಾತ್ರ ಸಖತ್ ಪವರ್ಫುಲ್ ಆಗಿ ಕಾಣಿಸಿಕೊಂಡಿದೆ. ಇದಕ್ಕಿಂತಲೂ ವಿಶೇಷ ಸಿನಿಮಾದ ಚಿತ್ರೀಕರಣ ಆಗುತ್ತಿದ್ದ ಸಂದರ್ಭದಲ್ಲಿ ಪ್ರಶಾಂತ್ ನೀಲ್ ಅವರ ಮೇಲೆ ಇವರಿಗೆ ಬಹಳ ಕೋಪ ಬರುತ್ತಿದ್ದಂತೆ. ಯಾಕೆಂದರೆ ಚಿತ್ರೀಕರಣದ ಸಂದರ್ಭದಲ್ಲಿಯೇ ಹೊಸದಾಗಿ ಪ್ರಶಾಂತ್ ನಿಲ್ ರವರು ಡೈಲಾಗ್ ಗಳನ್ನು ಬರೆಯುತ್ತಿದ್ದರು ಎಂದು ತಿಳಿದುಬಂದಿದೆ. ಇದು ಶ್ರೀಯ ರೆಡ್ಡಿ ರವರಿಗೆ ಸಾಕಷ್ಟು ಕಷ್ಟವನ್ನು ತಂದು ಕೊಡುತ್ತಿತ್ತು ಎಂಬುದಾಗಿ ಅವರು ಹೇಳಿಕೊಂಡಿದ್ದು ಆ ಸಂದರ್ಭದಲ್ಲಿ ಪ್ರಶಾಂತ್ ನೀಲ್ ಅವರ ಮೇಲೆ ಎಲ್ಲಿಲ್ಲದ ಕೋಪ ಬರ್ತಾಯಿತ್ತು ಅನ್ನೋದಾಗಿ ಹೇಳಿದ್ದಾರೆ.

ಇದೇನೇ ಇರಲಿ ಸಲಾರ್ ಸಿನಿಮಾದ ಮೊದಲ ಭಾಗ ಬಾಕ್ಸ್ ಆಫೀಸ್ ನಲ್ಲಿ ಈಗಾಗಲೇ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿ ಮುಗಿಸಿದೆ ಹೀಗಾಗಿ ಎರಡನೇ ಭಾಗ ಖಂಡಿತವಾಗಿ ಇನ್ನಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಮಾಡೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಪ್ರಶಾಂತ್ ನೀಲ್ ರವರು ಈ ಸಿನಿಮಾದ ಮೂಲಕ ಮತ್ತೆ ತಮ್ಮ ಕೆಜಿಎಫ್ ಜನಪ್ರಿಯತೆಯನ್ನು ಭಾರತೀಯ ಚಿತ್ರರಂಗದಲ್ಲಿ ಪಡೆದುಕೊಂಡಿದ್ದಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಿಕೊಳ್ಳಬಹುದಾಗಿದೆ.

Comments are closed.