Gruhalakshmi: ಗೃಹಲಕ್ಷ್ಮಿ ಯೋಜನೆಯ ಹಣ ಇನ್ಮುಂದೆ ಬರಲ್ಲ ಸರ್ಕಾರದಿಂದ ಬಂತು ನೋಡಿ ಬಿಗ್ ಅಪ್ಡೇಟ್!

Gruhalakshmi: ಕಾಂಗ್ರೆಸ್ ರಾಜ್ಯ ಸರ್ಕಾರದಿಂದ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿ ತಿಂಗಳು ಮಹಿಳೆಯರಿಗೆ ರೂ. 2000 ಗಳ ಮಾಸಾಶನ ದೊರಕುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ ಅದರಿಂದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಈಗ ಲೇಟೆಸ್ಟ್ ಆಗಿ ಕೇಳಿ ಬರುತ್ತಿರುವಂತಹ ಸುದ್ದಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರು ಪಡೆದುಕೊಳ್ಳಲು ಸಾಧ್ಯವಿಲ್ಲ ಅನ್ನೋದಾಗಿ ತಿಳಿದು ಬಂದಿದ್ದು ಅದಕ್ಕೆ ಕಾರಣಗಳನ್ನು ಕೂಡ ನೀಡಲಾಗಿದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಇನ್ಮುಂದೆ ಮಹಿಳೆಯರಿಗೆ 2000 ರೂಪಾಯಿಗಳ ಗೃಹಲಕ್ಷ್ಮಿ ಹಣ ಸಿಗೋದಿಲ್ಲ!

ಕೆಲವೊಂದು ಮಹಿಳೆಯರ ಮನೆಯಲ್ಲಿ ನಾಲ್ಕರಿಂದ ಐದು ರೇಷನ್ ಕಾರ್ಡ್ ಗಳು ಕಂಡುಬಂದಿರುವಂತಹ ಪ್ರಕರಣಗಳು ಪತ್ತೆಯಾಗಿವೆ. ಉಳಿದ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿಸುವಂತಹ ಕೆಲಸವನ್ನು ಮಾಡೋದಕ್ಕೆ ಹೊರಟಿದೆ. ಹೀಗಾಗಿ ರದ್ದು ಮಾಡಿಸಿದ ನಂತರ ಆ ಕುಟುಂಬದ ಸದಸ್ಯರ ಮಾಹಿತಿಯನ್ನು ಮುಖ್ಯ ರೇಷನ್ ಕಾರ್ಡಿಗೆ ಸೇರಿಸುವಂತಹ ಪ್ರಕ್ರಿಯೆಯನ್ನು ಕೂಡ ಮಾಡಲಾಗುತ್ತದೆ. ಇವರು ಹೊಸದಾಗಿ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಿದರು ಕೂಡ ಅವರಿಗೆ ಸಿಗೋದಿಲ್ಲ.

ಹೊಸದಾಗಿ ಮದುವೆ ಆಗಿರುವಂತಹ ದಂಪತಿಗಳು ಬೇರೆ ಮನೆಯಲ್ಲಿ ಇರುತ್ತಿದ್ದರೆ ಅವರಿಗೆ ಮಾತ್ರ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವನ್ನು ನೀಡಲಾಗುತ್ತಿದೆ. ಒಂದು ವೇಳೆ ಕುಟುಂಬದಲ್ಲಿಯೇ ವಾಸಿಸುತ್ತಿದ್ದರೆ ತಮ್ಮ ಹೆಸರನ್ನು ಆ ಮುಖ್ಯವಾಗಿರುವಂತಹ ರೇಷನ್ ಕಾರ್ಡ್ ನಲ್ಲಿ ಸೇರಿಸಬೇಕಾಗಿರುತ್ತದೆ. ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗಾಗಿ ನಕಲಿ ರೇಷನ್ ಕಾರ್ಡ್ ಮಾಡಿಕೊಂಡಿರುವಂತಹ ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗೋದಿಲ್ಲ ಅನ್ನೋದಾಗಿ ಸರ್ಕಾರ ತಿಳಿಸಿದೆ. ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಅರ್ಹರಾಗಿರುವ ಮಹಿಳೆಯರಿಗೆ ಸಲ್ಲಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುವುದಕ್ಕೆ ಹೊರಟಿರೋದು ಅದೇ ಸಂದರ್ಭದಲ್ಲಿ ಕೆಲವೊಂದು ಈ ರೀತಿ ಅಡೆತಡೆಗಳು ಉಂಟಾದಾಗ ಅವುಗಳನ್ನು ನಿವಾರಣೆ ಮಾಡಿಕೊಂಡು ಸರಿಯಾದ ಜನರಿಗೆ ಸರಿಯಾದ ಅವಧಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈ ತೆಗೆದುಕೊಳ್ಳಲಾಗುತ್ತಿದೆ.

ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರಿಯಾದ ರೀತಿಯಲ್ಲಿ ಮಹಿಳೆಯರ ಖಾತೆಗೆ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಟೆಕ್ನಾಲಜಿಯ ಮೂಲಕ ಹಣವನ್ನು ನೇರವಾಗಿ ವರ್ಗಾವಣೆ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸದ್ಯದ ಮಟ್ಟಿಗೆ ಮನೆಯ ಒಡತಿಗೆ ಈ 2000 ರೂಪಾಯಿಗಳ ಮಾಸಾಶನ ಸಾಕಷ್ಟು ರೀತಿಯಲ್ಲಿ ಸಹಾಯಕವಾಗಿದೆ ಹಾಗೂ ಅವರ ಖರ್ಚನ್ನು ಕೂಡ ಇದು ನೋಡಿಕೊಳ್ಳುವುದಕ್ಕೆ ಚಿಕ್ಕಮಟ್ಟದಲ್ಲಿ ಆರ್ಥಿಕ ಸಹಾಯವನ್ನು ಒದಗಿಸುವಂತಹ ಕೆಲಸವನ್ನು ಕೂಡ ಮಾಡುತ್ತಿದೆ ಎಂದು ಹೇಳಬಹುದಾಗಿದೆ.

Comments are closed.