Maruti Suzuki: ಸ್ಪರ್ಧಾತ್ಮಕ ಬೆಲೆ ಜೊತೆಗೆ ಉತ್ತಮ ಮೈಲೇಜ್. ಮಾರುಕಟ್ಟೆಗೆ ಕಾಲಿಟ್ಟಿದ ನೋಡಿ ಮಾರುತಿ ಸುಜುಕಿ ಹೊಸ ಕಾರು!

Maruti Suzuki: ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಅತ್ಯಂತ ಕಡಿಮೆ ಬೆಲೆ ಕಾರುಗಳಿಗೆ ಹಾಗೂ ಉತ್ತಮ ಸುರಕ್ಷತೆಯನ್ನು ಹೊಂದಿರುವಂತಹ ಕಾರುಗಳಿಗೆ ಮಾರುತಿ ಸುಜುಕಿ ಸಂಸ್ಥೆ ಕೂಡ ಹೆಸರುವಾಸಿಯಾಗಿದೆ ಎಂದು ಹೇಳಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಾವು ಮಾತನಾಡುವುದಕ್ಕೆ ಹೊರಟಿರೋದು ಹೊಸ Maruti Suzuki Grand Vitara ಕಾರಿನ ಬಗ್ಗೆ. ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

Maruti Suzuki Grand Vitara ನ ಹೊಸ ಅವತಾರದ ಸಂಪೂರ್ಣ ಮಾಹಿತಿ ಹಾಗೂ ಬೆಲೆ!

ಹೊಸ Maruti Suzuki Grand Vitara ಕಾರ್ ನಲ್ಲಿ ನೀವು ಆರು ಏರ್ ಬ್ಯಾಗ್ ಗಳನ್ನು ಸುರಕ್ಷತೆ ರೂಪದಲ್ಲಿ ನೋಡಬಹುದಾಗಿದೆ. ಇಎಸ್‌ಪಿ ಹಾಗು ಟಿಪಿಎಂಎಸ್ ಜೊತೆಗೆ 360 ಡಿಗ್ರಿ ಕ್ಯಾಮೆರಾ ಕವರೇಜನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ. Maruti Suzuki Grand Vitara ಕಾರು ನಿಮಗೆ 5 ವೇರಿಯಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತದೆ. ಐದು ಜನರು ಆರಂಭವಾಗಿ ಕುಳಿತುಕೊಂಡು ಹೋಗಬಲ್ಲಂತಹ ಸ್ಪೇಸ್ ಕೂಡ ಸಿಗುತ್ತದೆ. ಇದು ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಎರಡು ವಿಭಾಗದಲ್ಲಿ ಕೂಡ ನಿಮಗೆ ಸಿಗಲಿದೆ. 1.5 ಲೀಟರ್ಗಳ ಸ್ಟ್ರಾಂಗ್ ಹಾಗೂ ಮೈಲ್ಡ್ ಇಂಜಿನ್ ಗಳ ಆಪ್ಶನ್ ಕೂಡ ಸಿಗುತ್ತದೆ.

ಐದು ಸ್ಪೀಡ್ ಮಾನ್ಯುಯಲ್ ಹಾಗೂ ಆರು ಸ್ಪೀಡ್ ಆಟೋಮೆಟಿಕ್ ಗೇರ್ ಟ್ರಾನ್ಸ್ಮಿಷನ್ ಅವಕಾಶವನ್ನು ನೀವು ಪಡೆದುಕೊಳ್ಳಬಹುದಾಗಿದೆ.‌ ಪೆಟ್ರೋಲ್ ನಲ್ಲಿ 19 ರಿಂದ 20 km ಗಳ ಮೈಲೇಜ್ ನೀಡುವಂತಹ ಈ ಕಾರು ಸಿಎನ್‌ಜಿನಲ್ಲಿ 26 ಕಿಲೋಮೀಟರ್ಗಳ ಮೈಲೇಜ್ ಪಡೆದುಕೊಳ್ಳಬಹುದಾಗಿದೆ. 9 ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್ ಹಾಗೂ 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ವಯರ್ಲೆಸ್ ಫೋನ್ ಚಾರ್ಜ್ ಆಪ್ಷನ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿಗಳನ್ನು ನೀವು ಈ ಕಾರಿನಲ್ಲಿ ಪಡೆದುಕೊಳ್ಳಬಹುದಾಗಿದೆ.

ಪನೊರಾಮಿಕ್ ಸನ್ರೂಫ್ ಸೇರಿದಂತೆ ಆಂಬಿಯಂಟ್ ಲೈಟಿಂಗ್ ಅನ್ನು ಕೂಡ ಇಲ್ಲಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಏಳು ಸೀಟರ್ ಅವಕಾಶದಲ್ಲಿ ಕೂಡ ಸಿಗಬಹುದಾಗಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. Maruti Suzuki Grand Vitara ಕಾರಿನ ಬೆಲೆ ಬಗ್ಗೆ ಮಾತನಾಡುವುದಾದರೆ ಇದು ನಿಮಗೆ 10.80 ರಿಂದ 20.09 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರಾಟಕ್ಕೆ ಸಿಗಲಿದೆ. ಮಾರುಕಟ್ಟೆಯಲ್ಲಿ ಇದಕ್ಕೆ ಕ್ರೆಟಾ ಎಲಿವೇಟರ್ ಸಿಟ್ರನ್ ಕಾರುಗಳ ಕಾಂಪಿಟೇಶನ್ ಕೂಡ ಇದಕ್ಕೆ ಇದ್ದು ಖಂಡಿತವಾಗಿ ಮುಂದಿನ ದಿನಗಳಲ್ಲಿ ಇದು ಎಸ್ಯುವಿ ವಿಭಾಗದಲ್ಲಿ ಎಲ್ಲರ ಗಮನ ಸೆಳೆಯುವಂತಹ ಕಾಣಿಸಿಕೊಳ್ಳಲಿದೆ.

Comments are closed.