Pension Scheme: ಪ್ರತಿ ತಿಂಗಳು 50,000ಗಳಿಗಿಂತ ಹೆಚ್ಚಿನ ಪೆನ್ಶನ್ ಬೇಕಾ ಹಾಗಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ!

Pension Scheme: ಸರ್ಕಾರದಿಂದ ಪರಿಚಯಿಸಲಾಗಿರುವಂತಹ ನ್ಯಾಷನಲ್ ಪೆನ್ಷನ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರ ಮೂಲಕ ನೀವು ನಿಮ್ಮ ನಿವೃತ್ತಿ ಜೀವನದಲ್ಲಿ ಆರ್ಥಿಕವಾಗಿ ಸ್ವಾತಂತ್ರ್ಯವನ್ನು ಹೊಂದಬಹುದಾಗಿದೆ. ಹಾಗಿದ್ರೆ ಬನ್ನಿ ನ್ಯಾಷನಲ್ ಪೆನ್ಷನ್ ಯೋಜನೆ ಅಡಿಯಲ್ಲಿ ಯಾವ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡುವುದರ ಮೂಲಕ ನೀವು ಪ್ರತಿ ತಿಂಗಳಿಗೆ 50,000ಗಳಿಗಿಂತ ಹೆಚ್ಚಿನ ಹಣವನ್ನು ಪೆನ್ಷನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ ಎನ್ನುವುದನ್ನು ತಿಳಿದುಕೊಳ್ಳೋಣ.

ನ್ಯಾಷನಲ್ ಪೆನ್ಷನ್ ಯೋಜನೆ ಹೂಡಿಕೆ!

ನ್ಯಾಷನಲ್ ಪೆನ್ಷನ್ ಯೋಜನೆಯ ಅಡಿಯಲ್ಲಿ ನೀವು ಮಾಡುವಂತಹ ಹೂಡಿಕೆಯ 60% ಹಣವನ್ನ ನೀವು 60 ವಯಸ್ಸು ಆದ ನಂತರ ಒಂದೇ ಮೊತ್ತದಲ್ಲಿ ಪಡೆದುಕೊಳ್ಳಬಹುದಾಗಿದೆ. ಅದಾದ ನಂತರ ಉಳಿದಿರುವಂತಹ 40 ಪ್ರತಿಶತ ಹಣವನ್ನ ಕಂತಿನ ರೂಪದಲ್ಲಿ ವರ್ಷಾಸನದಲ್ಲಿ ಕೂಡ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ನ್ಯಾಷನಲ್ ಪೆನ್ಷನ್ ಯೋಜನೆಯಲ್ಲಿ 35ನೇ ವರ್ಷದಿಂದ ಹಣವನ್ನು ಹೂಡಿಕೆ ಮಾಡುವುದಕ್ಕೆ ಪ್ರಾರಂಭ ಮಾಡಿದರೆ ಒಟ್ಟಾರೆ 25 ವರ್ಷಗಳ ಕಾಲ ನೀವು ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ ಅಂದರೆ ಅರವತ್ತು ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.

ಅಂದ್ರೆ ಲೆಕ್ಕಾಚಾರದಲ್ಲಿ ಪ್ರತಿ ತಿಂಗಳು ನೀವು 15,000 ಹಣವನ್ನು 25 ವರ್ಷಗಳ ಕಾಲ ಸತತವಾಗಿ ನ್ಯಾಷನಲ್ ಪೆನ್ಷನ್ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀವು ಮಾಡುವಂತಹ ಇನ್ವೆಸ್ಟ್ಮೆಂಟ್ 45 ಲಕ್ಷ ರೂಪಾಯಿ ಆಗಿರುತ್ತದೆ. 10 ಪ್ರತಿಶತ ಬಡ್ಡಿದರ ಅನ್ನೋದು 1,55,68,356 ರೂಪಾಯಿ ಆಗಿರುತ್ತದೆ. ಈ ಲೆಕ್ಕಾಚಾರದಲ್ಲಿ ನೀವು ನ್ಯಾಷನಲ್ ಪೆನ್ಷನ್ ಯೋಜನೆಯ ಮೂಲಕ 2,00,68,356 ಹಣವನ್ನು ಸಂಪಾದನೆ ಮಾಡಿದಂತಾಗುತ್ತದೆ. 60ನೇ ವಯಸ್ಸಿನ ನಂತರ ನೀವು ನ್ಯಾಷನಲ್ ಪೆನ್ಷನ್ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿರುವಂತಹ ಹಣದ 60% ಅಂದ್ರೆ 1,20,41,014 ಹಣವನ್ನ ಒಂದೇ ಸಮನೆ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ವಾರ್ಷಿಕ ವರ್ಷಾಸನ ರೂಪದಲ್ಲಿ 40 ಪ್ರತಿಶತದ 80,27,342 ಹಣವನ್ನು ನೀವು ಪ್ರತಿ ತಿಂಗಳ ದ ಕಂತಿನ ರೂಪದಲ್ಲಿ ನೋಡೋದಾದ್ರೆ 53,516 ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳಬಹುದಾಗಿದೆ. ನಿವೃತ್ತಿಯ ಸಂದರ್ಭದಲ್ಲಿ ಖಂಡಿತವಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ನೀವು ಪ್ರತಿ ತಿಂಗಳು ಪಡೆದುಕೊಳ್ಳುವುದು ನಿಜಕ್ಕೂ ಈ ಯೋಜನೆ ಲಾಭ ಅನ್ನೋದನ್ನ ಸಂಪೂರ್ಣವಾಗಿ ಸಾಬೀತು ಪಡಿಸುತ್ತೆ.

ಒಂದು ವೇಳೆ ನೀವು ಕೂಡ ನಿಮ್ಮ ನಿವೃತ್ತಿಯ ಜೀವನ ಚೆನ್ನಾಗಿರಬೇಕು ಅಂತ ಇದ್ರೆ ಅಥವಾ ಬೇರೆಯವರು ನಿಮಗೆ ಗೊತ್ತಿರೋರು ಈ ಪರಿಧಿಯಲ್ಲಿ ಬರ್ತಾ ಇದ್ರೆ ಅವರಿಗೂ ಕೂಡ ನ್ಯಾಷನಲ್ ಪೆನ್ಷನ್ ಸ್ಕೀಮ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ಅದರಿಂದ ಆಗುವ ಲಾಭಗಳ ಬಗ್ಗೆ ಕೂಡ ಇನ್ಫಾರ್ಮಶನ್ ತಿಳಿಸಿ. ಯಾಕೆಂದ್ರೆ ನಿವೃತ್ತಿಯ ಸಂದರ್ಭದಲ್ಲಿ ಹಣಕಾಸಿನ ಸ್ವಾವಲಂಬತೆ ಇರಬೇಕಾಗಿರುವುದು ಅಗತ್ಯವಾಗಿರುತ್ತದೆ.

Comments are closed.