Virat Kohli: ವಿರಾಟ್ ಕೊಹ್ಲಿ ಒಂದು ಹೇರ್ ಕಟ್ ಮಾಡಿಸಿಕೊಳ್ಳುವುದಕ್ಕೆ ಎಷ್ಟು ಹಣವನ್ನು ಖರ್ಚು ಮಾಡ್ತಾರೆ ಗೊತ್ತಾ?

Virat Kohli: ಭಾರತ ದೇಶದ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ನಮ್ಮೆಲ್ಲರ ನೆಚ್ಚಿನ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಅವರು ಅಂಡರ್ 19 ತಂಡದ ಕ್ಯಾಪ್ಟನ್ ಆಗಿ ಭಾರತಕ್ಕೆ ವಿಶ್ವ ಕಪ್ ಗೆದ್ದಿರೋದು ಸಾಕಷ್ಟು ಜನರು ಮರೆತೇ ಬಿಟ್ಟಿದ್ದಾರೆ ಅಂತ ಹೇಳಬಹುದು. ಅದಕ್ಕಾಗಿನೆ ಅನ್ಸುತ್ತೆ ಈಗ ಅವರು ಐಪಿಎಲ್ ಕಪ್ ಗೆದ್ದಿಲ್ಲ ಅಂತ ಅಂದ್ರೆ ಅವರನ್ನ ಟ್ರೊಲ್ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಭಾರತ ದೇಶದ ಕ್ರಿಕೆಟ್ ಲೋಕಕ್ಕೆ ವಿರಾಟ್ ಕೊಹ್ಲಿ ಅವರು ನೀಡಿರುವಂತಹ ಕೊಡುಗೆ ನಿಜಕ್ಕೂ ಕೂಡ ಅಸಮಾನ್ಯ ಎಂದು ಹೇಳಬಹುದು. ಅದರಲ್ಲಿ ವಿಶೇಷವಾಗಿ ನಮ್ಮ ಕನ್ನಡಿಗರಿಗೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ದೇವರ ಸ್ವರೂಪ ಆಗಿದ್ದಾರೆ ಎಂದು ಹೇಳಬಹುದಾಗಿದೆ.

ಸದ್ಯದ ಮಟ್ಟಿಗೆ ವಿಶ್ವದಲ್ಲಿ ಇರುವಂತಹ ಶ್ರೀಮಂತ ಕ್ರೀಡಾಪಟುಗಳ ಸಾಲಿನಲ್ಲಿ ಕೂಡ ವಿರಾಟ್ ಕೊಹ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ವಿರಾಟ್ ಕೊಹ್ಲಿ ಅವರ ಆಸ್ತಿಯ ವಿಚಾರದ ಬಗ್ಗೆ ಮಾತನಾಡುವುದಾದರೂ ಕೂಡ ಸಾವಿರಾರು ಕೋಟಿ ರೂಪಾಯಿಗಳ ಲೆಕ್ಕಾಚಾರದಲ್ಲಿ ನಾವು ವಿರಾಟ್ ಕೊಹ್ಲಿ ಅವರ ಆಸ್ತಿಯ ಬಗ್ಗೆ ಮಾತನಾಡಬಹುದಾಗಿದೆ. ಇದಕ್ಕಿಂತಲೂ ಬದಲಾಗಿ ಅವರ ಬಳಿ ಸಾಕಷ್ಟು ವಿದೇಶಿ ಕಂಪನಿಗಳ ಬ್ರಾಂಡೆಡ್ ಕಾರುಗಳನ್ನು ಕೂಡ ಗಮನಿಸಬಹುದಾಗಿದೆ. ತಮ್ಮದೇ ಆಗಿರುವಂತಹ ಹೊಸ ಹೋಟೆಲ್ ಚೇನ್ ಅನ್ನು ಕೂಡ ವಿರಾಟ್ ಕೊಹ್ಲಿ ಅವರು ಪ್ರಾರಂಭಿಸಿದ್ದು ಅದರಿಂದಲೂ ಕೂಡ ಹಣ ಸಂಪಾದನೆ ಮಾಡುತ್ತಿದ್ದಾರೆ. ಹೀಗಾಗಿ ಹಣಕಾಸಿನ ವಿಚಾರಕ್ಕೆ ಬಂದರೆ ಸದ್ಯದ ಮಟ್ಟಿಗೆ ಇರುವಂತಹ ಭಾರತೀಯ ಕ್ರಿಕೆಟ್ ತಂಡದ ಆಟಗಾರರಲ್ಲಿ ಅವರೇ ಅತ್ಯಂತ ಹೆಚ್ಚು ಹಣವನ್ನು ಹೊಂದಿರುವಂತಹ ಕ್ರಿಕೆಟ್ ಆಟಗಾರ ಎಂದು ಹೇಳಬಹುದು.

ವಿರಾಟ್ ಕೊಹ್ಲಿ ರವರ ಒಂದು ಹೇರ್ ಕಟಿಂಗ್ ಬೆಲೆ ಎಷ್ಟು ಗೊತ್ತಾ?

ಒಂದೇ ಮಾತಲ್ಲಿ ಹೇಳೋದಾದರೆ ಭಾರತೀಯ ಚಿತ್ರರಂಗದಲ್ಲಿ ಇರುವಂತಹ ಸಾಕಷ್ಟು ಸೆಲೆಬ್ರಿಟಿ ಗಳಿಗಿಂತ ಹೆಚ್ಚಿನ ಜನಪ್ರಿಯತೆಯನ್ನು ಜಾಗತಿಕವಾಗಿ ವಿರಾಟ್ ಕೊಹ್ಲಿ ಅವರು ಹೊಂದಿದ್ದಾರೆ. ಇಡೀ ಭಾರತ ದೇಶದಲ್ಲಿ ಇನ್ಸ್ಟಾಗ್ರಾಮ್ ವಿಚಾರಕ್ಕೆ ಬಂದರೆ ಅತ್ಯಂತ ಹೆಚ್ಚು ಫಾಲ್ಲೋರ್ಸ್ ಗಳನ್ನು ಹೊಂದಿರುವಂತಹ ಸೆಲೆಬ್ರಿಟಿ ವಿರಾಟ್ ಕೊಹ್ಲಿ. ಇನ್ನು ವಿರಾಟ್ ಕೊಹ್ಲಿ ಅವರು ಒಂದು ಕಟಿಂಗ್ ಮಾಡೋದಕ್ಕೆ ಭರ್ಜರಿ ಒಂದು ಲಕ್ಷ ಹಣವನ್ನು ಆಲಿಮ್ ಹಕಿಂ ಎನ್ನುವಂತಹ ಹೇರ್ ಡಿಸೈನರ್ ಗೆ ನೀಡುತ್ತಾರೆ. 1 ಲಕ್ಷಗಳಲ್ಲಿ ಸಾಮಾನ್ಯ ಜನರು ಏನೆಲ್ಲಾ ಮಾಡಬಹುದು ಆದರೆ ನಮ್ಮ ವಿರಾಟ್ ಕೊಹ್ಲಿ ಮಾತ್ರ ಸ್ಟೈಲಿಶ್ ಆಗಿ ಹೇರ್ ಕಟಿಂಗ್ ಮಾಡಿಸಿಕೊಳ್ಳುತ್ತಾರೆ.

ಸದ್ಯಕ್ಕೆ ಜೂನ್ ಒಂದರಿಂದ ಪ್ರಾರಂಭವಾಗಲಿರುವಂತಹ ಟಿ 20 ವಿಶ್ವಕಪ್ಗಾಗಿ ವಿರಾಟ್ ಕೊಹ್ಲಿ ಅವರು ತಯಾರಿ ನಡೆಸಿಕೊಳ್ಳುತ್ತಿದ್ದು ಈ ಬಾರಿಯಾದರೂ ಅವರ ವಿಶ್ವ ಕಪ್ ಗೆಲ್ಲಲಿ ಎಂಬುದಾಗಿ ಪ್ರತಿಯೊಬ್ಬರ ಹಾರೈಸುತಿದ್ದಾರೆ ಯಾಕೆಂದರೆ ವಿರಾಟ್ ಕೊಹ್ಲಿ ಅವರಿಗೆ ಇದು ಕೊನೆಯ ವಿಶ್ವಕಪ್ ಆಗಿರಬಹುದು ಎನ್ನುವ ಸಾಧ್ಯತೆ ಹೆಚ್ಚಾಗಿದೆ.

Comments are closed.