HSRP: HSRP ನಂಬರ್ ಪ್ಲೇಟ್ ಬಣ್ಣ ಇಳಿಯದೇ ಇರೋದಕ್ಕೆ ಈ ರೀತಿ ಮಾಡಿ! ಇಲ್ಲ ಅಂದ್ರೆ ಫೈನ್ ಕಟ್ಬೇಕಾಗುತ್ತೆ!

HSRP: HSRP ನಂಬರ್ ಪ್ಲೇಟ್ ಸದ್ಯದ ಮಟ್ಟಿಗೆ ರಾಜ್ಯ ಸಾರಿಗೆ ಇಲಾಖೆ ರಾಜ್ಯದ ವಾಹನ ಚಲಾವಣೆ ಮಾಡುವವರಿಗೆ ಮೇ 31ರ ಒಳಗೆ ರಿಜಿಸ್ಟರ್ ಮಾಡಿಕೊಂಡು ಅಳವಡಿಸಿಕೊಳ್ಳಬೇಕು ಎನ್ನುವಂತಹ ನಿಯಮವನ್ನು ಈಗಾಗಲೇ ಜಾರಿಗೆ ತರಲಾಗಿದ್ದು ಈ ದಿನಾಂಕ ಮುಗಿಯೋದಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಹೀಗಿದ್ರೂ ಕೂಡ ರಾಜ್ಯದಲ್ಲಿ ಇರುವಂತಹ ಎರಡು ಕೋಟಿ ವಾಹನಗಳಲ್ಲಿ ಈ ನಿಯಮವನ್ನು ಪರಿಪಾಲಿಸಿರುವುದು ಕೇವಲ 35 ಲಕ್ಷಕ್ಕೂ ಹೆಚ್ಚಿನ ವಾಹನಗಳು ಮಾತ್ರ. 80 ಪ್ರತಿಶತಕ್ಕಿಂತ ಹೆಚ್ಚಿನ ವಾಹನಗಳು ರಿಜಿಸ್ಟರ್ ಮಾಡಿಕೊಳ್ಳಬೇಕಾಗಿರುವುದು ಅಗತ್ಯವಾಗಿದೆ.

ಇದರ ನಡುವೆ HSRP ನಂಬರ್ ಪ್ಲೇಟ್ ನಲ್ಲಿ ಇರುವಂತಹ ಅಂಕೆಗಳ ಕಪ್ಪು ಸಂಖ್ಯೆ ಮಾಸಿ ಹೋಗುತ್ತಿದೆ ಎನ್ನುವಂತಹ ದೂರುಗಳು ಕೂಡ ಕೇಳಿ ಬರುತ್ತಿವೆ. ಈ ರೀತಿ ನಂಬರ್ ಪ್ಲೇಟ್ ನಲ್ಲಿ ಸಂಖ್ಯೆಗಳು ಮಾಸಿ ಹೋದರೆ ಹಾಗೂ ನಂಬರ್ ಪ್ಲೇಟ್ ನಲ್ಲಿರುವಂತಹ ನಂಬರ್ಗಳು ಕಾಣಿಸಿಕೊಳ್ಳದೆ ಹೋದರೆ ಟ್ರಾಫಿಕ್ ಪೊಲೀಸರು ನಿಮ್ಮ ಮೇಲೆ ಫೈನ್ ಹಾಕುವುದು ನಿಶ್ಚಿತವಾಗಿದೆ. ಇದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹಾಗೂ ನಿಮ್ಮ HSRP ನಂಬರ್ ಪ್ಲೇಟ್ ನಲ್ಲಿ ಇರುವಂತಹ ಸಂಖ್ಯೆಗಳ ಕಲರ್ ಮಾಸಿ ಹೋಗಬಾರದು ಎನ್ನುವ ಆಸಕ್ತಿ ನಿಮಗಿದ್ದರೆ ಏನು ಮಾಡಬೇಕು ಎನ್ನುವುದರ ಬಗ್ಗೆ ಕೂಡ ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ಬನ್ನಿ ಹಾಗಿದ್ದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

HSRP ನಂಬರ್ ಪ್ಲೇಟ್ ನಲ್ಲಿ ಸಂಖ್ಯೆ ಮಾಸಿ ಹೋಗದೆ ಇರುವುದಕ್ಕೆ ಏನು ಮಾಡಬೇಕು?

HSRP ನಂಬರ್ ಪ್ಲೇಟ್ ಬಗ್ಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದು ಅಲ್ಯೂಮಿನಿಯಂ ನಂಬರ್ ಪ್ಲೇಟ್ ಆಗಿದ್ದು Snap On Locks ಸಿಸ್ಟಮ್ ಇರುವುದರಿಂದಾಗಿ ಇದು ಅತ್ಯಂತ ಸುರಕ್ಷಿತವಾಗಿರುವಂತಹ ನಂಬರ್ ಪ್ಲೇಟ್ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿರುವಂತಹ ನಕಲಿ ನಂಬರ್ ಪ್ಲೇಟ್ ಗಳ ಬಳಕೆಯ ಕಾರಣದಿಂದಾಗಿಯೇ ಇದನ್ನ ಮೊದಲಿಗೆ ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ಜಾರಿಗೆ ತಂದು ಈಗ ಇಡೀ ಭಾರತ ದೇಶದ ಎಲ್ಲಾ ಕಡೆಗಳಲ್ಲಿ ಕೂಡ ನಿಯಮವನ್ನು ಕಡ್ಡಾಯ ಮಾಡಲಾಗುತ್ತಿದೆ.

  • ನೀವು ನಿಮ್ಮ ಕಾರನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ HSRP ಮೇಲೆ ಯಾವುದಾದ್ರೂ ಪ್ಲಾಸ್ಟಿಕ್ ಕವರ್ ಅನ್ನು ಕಟ್ಟಿ ನಂತರ ಸ್ವಚ್ಛ ಮಾಡುವುದು ಒಳ್ಳೆಯದು ಇದರಿಂದಾಗಿ ನಿಮ್ಮ ನಂಬರ್ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.
  • ಇಲ್ಲವಾದರೆ ನಿಮ್ಮ ನಂಬರ್ ಪ್ಲೇಟ್ ಮೇಲೆ ಒಂದು ಕೋಟ್ ಪಿಪಿಎಫ್ ಅನ್ನು ಅಳವಡಿಸಿದರೆ ಸಾಕು ಈ ಸಮಸ್ಯೆಯಿಂದ ನೀವು ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ ಎಲ್ಲಕ್ಕಿಂತ ಪ್ರಮುಖವಾಗಿ ನೀವು ವಾಹನವನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ ನಂಬರ್ ಪ್ಲೇಟ್ ಮೇಲೆ ಯಾವುದೇ ರೀತಿಯ ಪ್ರಶರ್ ನೀರನ್ನು ಬಳಸಬೇಡಿ. ಇದರಿಂದಾಗಿ ನಿಮ್ಮ ನಂಬರ್ ಪ್ಲೇಟಿನ ನಂಬರ್ ಅಳಿಸಿ ಹೋಗುವ ಸಾಧ್ಯತೆ ಜಾಸ್ತಿ ಇದೆ.

Comments are closed.