Loans: ಸ್ವಂತ ಆಸ್ತಿ ಹಾಗೂ ಮನೆ ಇದೆ ಹಾಗಿದ್ರೆ ನಿಮಗೆ ಸಿಕ್ಕಿದೆ ನೋಡಿ ಗುಡ್ ನ್ಯೂಸ್; ಲೋನ್ ಪಡೆದುಕೊಳ್ಳುವುದಕ್ಕೆ ಬೆಸ್ಟ್ ಆಯ್ಕೆ!

Loans: ನಿಮ್ಮ ಬಳಿ ಸ್ವಂತವಾದ ಆಸ್ತಿ ಅಥವಾ ಪ್ರಾಪರ್ಟಿ ಮನೆ ಇದ್ರೆ ನೀವು ಯಾವುದೇ ಸಂದರ್ಭದಲ್ಲಿ ಆರ್ಥಿಕ ಅಗತ್ಯತೆ ಇದೆ ಅಂದ್ರೆ ಇನ್ನು ಮುಂದೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ನಿಮ್ಮ ಪ್ರಾಪರ್ಟಿಗೆ ವಿರುದ್ಧವಾಗಿ ನೀವು ಬ್ಯಾಂಕಿನಿಂದ ಲೋನ್ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಸ್ವಂತ ಮನೆ ಹಾಗೂ ಆಸ್ತಿ ಇರುವವರು ಇನ್ಮುಂದೆ ಸಾಲಕ್ಕಾಗಿ ಯೋಚನೆ ಮಾಡಬೇಕಾದ ಅಗತ್ಯ ಇಲ್ಲ.

ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಯಾವ ಬ್ಯಾಂಕಿನಲ್ಲಿ ಪ್ರಾಪರ್ಟಿಯ ವಿರುದ್ಧವಾಗಿ ಲೋನ್ ನೀಡುತ್ತಾರೆ ಹಾಗೂ ಎಷ್ಟು ಬಡ್ಡಿಗೆ ಲೋನ್ ನೀಡುತ್ತಾರೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ. ಮುಂದಿನ ದಿನಗಳಲ್ಲಿ ಒಂದು ವೇಳೆ ಯಾರಾದರೂ ಆರ್ಥಿಕ ಅಗತ್ಯತೆಗಳನ್ನು ಹೊಂದಿದ್ದರೆ ಪರ್ಸನಲ್ ಲೋನ್ ಅನ್ನು ಹೆಚ್ಚಿನ ಬಡ್ಡಿದರವನ್ನು ನೀಡುವ ಮೂಲಕ ಪಡೆದುಕೊಳ್ಳಬೇಕಾದ ಅಗತ್ಯವಿಲ್ಲ. ಬನ್ನಿ ಬ್ಯಾಂಕುಗಳ ಲಿಸ್ಟ್ ಹಾಗೂ ಅವುಗಳ ಬಡ್ಡಿ ದರದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ.

ಕಡಿಮೆ ಬಡ್ಡಿದರಕ್ಕೆ ಪ್ರಾಪರ್ಟಿಗೆ ವಿರುದ್ಧವಾಗಿ ಲೋ ನೀಡುವ ಬ್ಯಾಂಕ್ ಗಳು!

ಬಹುತೇಕ ಎಲ್ಲಾ ಬ್ಯಾಂಕಿನಲ್ಲಿ ಕೂಡ ಏಳು ವರ್ಷಗಳ ಸಮಯಾವಧಿಗೆ 15 ಲಕ್ಷ ರೂಪಾಯಿಗಳ ಸಾಲವನ್ನು ನೀಡುವ ಬಗ್ಗೆ ತಿಳಿಸಲಾಗಿದ್ದು ಬಡ್ಡಿದರದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಹಾಗೂ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

  • ಹೆಚ್‍ಡಿಎಫ್‍ಸಿ ಬ್ಯಾಂಕ್ ನಲ್ಲಿ ನೀವು ಈ ಮೊತ್ತಕ್ಕೆ 9.50% ರಿಂದ ಪ್ರಾರಂಭಿಸಿರುವಂತಹ ಬಡ್ಡಿಯನ್ನು ನೀಡಬೇಕಾಗುತ್ತದೆ ಹಾಗೂ ತಿಂಗಳ ಕಂತು 24,323 ಆಗಿರುತ್ತದೆ.
  • ಭಾರತ ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 10.10% ನೀಡಬೇಕಾಗಿರುತ್ತದೆ ಹಾಗೂ ಪ್ರತಿ ತಿಂಗಳ ಕಂತಿನ ಹಣ 24,771 ರೂಪಾಯಿ ಆಗಿದೆ.
  • ಆಕ್ಸಿಸ್ ಬ್ಯಾಂಕ್ ನಲ್ಲಿ ನೀವು 10.50% ಬಡ್ಡಿಗೆ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ. ತಿಂಗಳಿಗೆ ನೀವು 25072 ರೂಪಾಯಿಗಳ ಕಂತನ್ನು ಕಟ್ಟಬೇಕಾಗುತ್ತದೆ.
  • ಯೂನಿಯನ್ ಬ್ಯಾಂಕ್ ನಲ್ಲಿ 10.55 ಪ್ರತಿಶತ ಬಡ್ಡಿಯನ್ನು ಕಟ್ಟಬೇಕಾಗುತ್ತದೆ ಹಾಗೂ ತಿಂಗಳಿಗೆ ನೀವು ಕಟ್ಟಬೇಕಾಗಿರುವಂತಹ ಕಂತಿನ ಹಣ 25109 ರೂಪಾಯಿ ಆಗಿರುತ್ತದೆ.
  • ಬ್ಯಾಂಕ್ ಆಫ್ ಬರೋಡದಲ್ಲಿ ನೀವು 10.85 ಪ್ರತಿಶತ ಬಡ್ಡಿಯನ್ನು ಕಟ್ಟಬೇಕಾಗುತ್ತದೆ ಹಾಗೂ ಪ್ರತಿ ತಿಂಗಳಿಗೆ 25,336 ರೂಪಾಯಿಗಳ ಕಂತನ್ನು ಕಟ್ಟಬೇಕು
  • ಕೆನರಾ ಬ್ಯಾಂಕ್ ನಲ್ಲಿ 11.05% ಬಡ್ಡಿ ದರಕ್ಕೆ ತಿಂಗಳಿಗೆ ರೂ.25,488 ಗಳನ್ನು ಕಂತಿನ ರೂಪದಲ್ಲಿ ಕಟ್ಟಬೇಕಾಗಿರುತ್ತದೆ.
  • ಪ್ರತಿಷ್ಠಿತ ಐಸಿಐಸಿಐ ಬ್ಯಾಂಕ್ ನಲ್ಲಿ 11.35% ಬಡ್ಡಿ ದರದ ಲೆಕ್ಕಾಚಾರದಲ್ಲಿ 25717 ರೂಪಾಯಿಗಳ ಕಂತನ್ನು ಕಟ್ಟಿಕೊಂಡು ಹೋಗಬೇಕಾಗುತ್ತದೆ.
  • ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 11.50% ಬಡ್ಡಿ ದರವನ್ನ ಲೆಕ್ಕಾಚಾರ ಹಾಕಲಾಗುತ್ತದೆ ಇದರ ಮೇರೆಗೆ ನೀವು ಏಳು ವರ್ಷಗಳಿಗೆ ಪ್ರತಿ ತಿಂಗಳು 25756 ರೂಪಾಯಿಗಳ ಕಂತನ್ನು ಕಟ್ಟಿಕೊಂಡು ಹೋಗಬೇಕು.

ಒಂದು ವೇಳೆ ನಿಮ್ಮ ಬಳಿ ಕೂಡ ಸ್ವಂತವಾದ ಮನೆ ಅಥವಾ ಪ್ರಾಪರ್ಟಿ ಇದೆ ಹಾಗೂ ನಿಮಗೆ ಈ ಸಂದರ್ಭದಲ್ಲಿ ಲೋನಿನ ಅವಶ್ಯಕತೆ ಇದೆ ಅಂದ್ರೆ ಈ ಮೇಲೆ ತಿಳಿಸಿ ಹೇಳಿರುವಂತಹ ಬ್ಯಾಂಕುಗಳಲ್ಲಿ ನೀವು ನಿಮ್ಮ ಬಡ್ಡಿದರಕ್ಕೆ ಹಾಗೂ ಕಂತಿನ ಅನ್ವಯ ನಿಮಗೆ ಬೇಕಾಗಿರುವಂತಹ loan against property ವಿಭಾಗದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

Comments are closed.