BOB: ಬ್ಯಾಂಕ್ ಆಫ್ ಬರೋಡದಲ್ಲಿ ನಿಮ್ಮ ಅಕೌಂಟ್ ಇದೆಯಾ? ಹಾಗಿದ್ರೆ ಈ ಗುಡ್ ನ್ಯೂಸ್ ನಿಮಗಾಗಿ!

BOB: ಭಾರತ ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಮಾತನಾಡುವುದಾದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಪ್ರತಿಯೊಬ್ಬ ಗ್ರಾಹಕರು ಕೂಡ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುವ ರೀತಿಯಲ್ಲಿ ಒಪ್ಪಿಕೊಂಡಿದ್ದಾರೆ. ಯಾಕೆಂದರೆ ದುಡಿಯುವಂತಹ ಪ್ರತಿಯೊಬ್ಬ ವ್ಯಕ್ತಿ ಕೂಡ ಬ್ಯಾಂಕುಗಳಲ್ಲಿ ಸೇವಿಂಗ್ ಖಾತೆಯನ್ನು ಪ್ರಾರಂಭ ಮಾಡಿ ಅದರಲ್ಲಿ ಹಣವನ್ನು ಉಳಿತಾಯ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ. ಇಂತಹ ಬ್ಯಾಂಕುಗಳಲ್ಲಿ ಬ್ಯಾಂಕ್ ಆಫ್ ಬರೋಡ ಕೂಡ ಒಂದು ಖ್ಯಾತನಾಮ ಬ್ಯಾಂಕ್ ಆಗಿದೆ ಎನ್ನಬಹುದಾಗಿದೆ. ಇನ್ನು ಒಂದು ವೇಳೆ ನೀವು ಕೂಡ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಗ್ರಾಹಕರಾಗಿದ್ರೆ ಖಂಡಿತವಾಗಿ ಇವತ್ತಿನ ಲೇಖನದಲ್ಲಿ ಹೇಳುವುದಕ್ಕೆ ಹೊರಟಿರುವಂತಹ ಸುದ್ದಿ ನಿಮಗೆ ಗುಡ್ ನ್ಯೂಸ್ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಬಹುದಾಗಿದೆ.

ಹೌದು ಸ್ನೇಹಿತರೆ ಬ್ಯಾಂಕ್ ಆಫ್ ಬರೋಡದಲ್ಲಿ ಎರಡು ಕೋಟಿ ರೂಪಾಯಿಗಳಿಗಿಂತ ಕಡಿಮೆ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ಬಡ್ಡಿಯನ್ನು ಪರಿಷ್ಕರಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇವತ್ತಿನ ಈ ಲೇಖನದ ಮೂಲಕ ಆ ಪರಿಸ್ಕರಿಸಿರುವ ಅಂತಹ ಬಡ್ಡಿಯ ದರವನ್ನು ತಿಳಿದುಕೊಳ್ಳೋಣ.

  • ಏಳರಿಂದ 45 ದಿನಗಳ ವರೆಗಿನ ಹೂಡಿಕೆಯ ಮೇಲೆ ನಿಮಗೆ ಇಲ್ಲಿ 5 ಪ್ರತಿಶತ ಬಡ್ಡಿದರ ರಿಟರ್ನ್ ಸಿಗುತ್ತದೆ.
  • 46 ರಿಂದ 180 ದಿನಗಳ ಮೇಲಿನ ಹೂಡಿಕೆ ಮೇಲೆ ನಿಮಗೆ 5.75 ಪ್ರತಿಶತ ಬಡ್ಡಿ ದರ ಸಿಗುತ್ತೆ
  • 181 ರಿಂದ 210 ದಿನಗಳ ಹೂಡಿಕೆ ಮೇಲೆ ನಿಮಗೆ 6.5% ಬಡ್ಡಿ ದರ ಸಿಗುತ್ತೆ
  • 2001 ದಿನಗಳಿಂದ ಒಂದು ವರ್ಷಗಳ ವರೆಗಿನ ಹೂಡಿಕೆ ಮೇಲೆ ನಿಮಗೆ 7.60 ಪ್ರತಿಶತ ಬಡ್ಡಿ ದರ ಸಿಗುತ್ತದೆ.
  • ಎರಡರಿಂದ ಮೂರು ವರ್ಷಗಳ ಮೇಲೆ 6.5% ಬಡ್ಡಿ ದರ ಸಿಗುತ್ತದೆ
  • ಮೂರರಿಂದ ಐದು ವರ್ಷಗಳವರೆಗೆ ಆರು ಪ್ರತಿಶತ ಹಾಗೂ ಐದರಿಂದ ಹತ್ತು ವರ್ಷಗಳವರೆಗೆ 5 ಪ್ರತಿಶತ ಬಡ್ಡಿದರವನ್ನು ನೀವು ಇಲ್ಲಿ ಫಿಕ್ಸಿಡ್ ಡೆಪಾಸಿಟ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ದೇಶದ ಅತಿ ದೊಡ್ಡ ಗ್ರಾಹಕರನ್ನು ಹೊಂದಿರುವಂತಹ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಬ್ಯಾಂಕ್ ಆಫ್ ಬರೋಡ ಪರಿಷ್ಕರಿಸಿರುವಂತಹ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರದ ವಿವರವಾಗಿದೆ. ಇದರಲ್ಲಿ ನಿಮ್ಮ ಆರ್ಥಿಕ ಸಲಹೆಗಾರರ ಬಳಿಯಲ್ಲಿ ಸಲಹೆಯನ್ನು ಪಡೆದುಕೊಂಡು ಯಾವ ಸಮಯಾವಧಿಯ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರ ಮೂಲಕ ಹೆಚ್ಚಿನ ಲಾಭಗಳಿಸಬಹುದು ಎಂಬುದಾಗಿ ತಿಳಿದು ಅದಕ್ಕೆ ತಕ್ಕಂತೆ ಹಣವನ್ನ ಹೂಡಿಕೆ ಮಾಡುವುದು ಉತ್ತಮವಾಗಿದ್ದು ಕೈ ತುಂಬಾ ಲಾಭವನ್ನು ಕೂಡ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ವಿಶೇಷವಾಗಿ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಗ್ರಾಹಕರು ತಮ್ಮ ಭವಿಷ್ಯದಲ್ಲಿ ಈ ರೀತಿಯ ಹೂಡಿಕೆ ಮಾಡುವುದು ಉತ್ತಮ ಎಂಬುದಾಗಿ ಪರಿಗಣನೆಗೆ ತೆಗೆದುಕೊಳ್ಳಬಹುದು.

Comments are closed.