Government Scheme: ಇನ್ನು ಬರಲ್ಲ ದುಡ್ಡು; ಕರ್ನಾಟಕ ಸರ್ಕಾರದ ಈ ಮೂರು ಗ್ಯಾರಂಟಿಗಳು ಮುಗಿದುಹೋಗುತ್ತವೆ? ಜನರಲ್ಲಿ ಮೂಡಿದೆ ಆತಂಕ!

Government Scheme: ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆದರೆ ಇತ್ತೀಚಿನ ವರದಿಗಳಲ್ಲಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಸರ್ಕಾರ ಮೂರು ಪ್ರಮುಖ ಗ್ಯಾರಂಟಿ ಯೋಜನೆಗಳನ್ನ ಸ್ಥಗಿತಗೊಳಿಸುವಂತಹ ಯೋಚನೆ ಮಾಡುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಮೂರು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತಹ ನಿರ್ಧಾರಕ್ಕೆ ಬಂದಿದ್ಯಾ ಸಿದ್ದರಾಮಯ್ಯ ಸರ್ಕಾರ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಜಾರಿಗೆ ತಂದಿರುವಂತಹ ಗ್ಯಾರಂಟಿ ಯೋಜನೆಗಳನ್ನು ಪೂರೈಸುವುದಕ್ಕಾಗಿ ವಾರ್ಷಿಕವಾಗಿ 3.27 ಲಕ್ಷ ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿಗೆ ಬಂದಿದೆ. ಕೇವಲ ಫ್ರೀ ಬಸ್ ಗಾಗಿ 4000 ಕೋಟಿ ರೂಪಾಯಿಗಳನ್ನು ಸರ್ಕಾರ ಎತ್ತಿಟ್ಟಿದೆ. ಮಾಹಿತಿಯ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸರಿಯಾದ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಫಲಿತಾಂಶವನ್ನು ಪಡೆದುಕೊಳ್ಳದೆ ಹೋದಲ್ಲಿ ಸಾಕಷ್ಟು ಯೋಜನೆಗಳು ಅರ್ಧಕ್ಕೆ ಮೋಟಕುಗೋಳ್ಳಲಿವೆ ಎಂಬ ಮಾಹಿತಿ ಕೇಳಿ ಬಂದಿದೆ.

ಸದ್ಯದ ಮಟ್ಟಿಗೆ ನೋಡುವುದಾದರೆ ಒಂದು ವರ್ಷಕ್ಕೆ ಬಡ ಕುಟುಂಬಕ್ಕೆ ಈ ಯೋಜನೆಗಳನ್ನು ಪೂರೈಸುವುದಕ್ಕೆ 50ರಿಂದ 55,000 ಹಣವನ್ನು ಕಾಂಗ್ರೆಸ್ ಸರ್ಕಾರ ಖರ್ಚು ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗಾಗಿ ಆರ್ಥಿಕ ಸಹಾಯವನ್ನು ನೀಡುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಪರಿಸ್ಥಿತಿಯನ್ನು ಕೂಡ ತಂದುಕೊಂಡಿದೆ ಎಂದು ಹೇಳಬಹುದಾಗಿದೆ.

ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಖಂಡಿತವಾಗಿ ಇರುವಂತಹ ಬಹುತೇಕ ಯೋಜನೆಗಳು ನಿಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಅನ್ನ ಭಾಗ್ಯ ಯೋಜನೆ ಮುಂದುವರೆಯುವಂತಹ ಸಾಧ್ಯತೆ ಇದ್ದು ಹಣದ ಬದಲಾಗಿ ಅಕ್ಕಿಯನ್ನು ನೀಡುವ ಯೋಜನೆಯನ್ನು ಕೂಡ ಮುಂದಿನ ದಿನಗಳಲ್ಲಿ ಬದಲಾಯಿಸಬಹುದಾಗಿದೆ. ಇನ್ನುಳಿದಂತೆ ಗೃಹ ಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವ ನಿಧಿ ಯೋಜನೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಮಾಡಬಹುದಾಗಿದೆ. ಇದಕ್ಕೂ ಮುಗಿಲಾಗಿ ಒಂದು ವೇಳೆ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ಕೆಲವೊಂದು ಮಾಹಿತಿಯ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಸಾಧ್ಯತೆ ಕೂಡ ಇದೆ ಎಂಬುದಾಗಿ ಕೆಲವು ಮಾಹಿತಿಗಳು ಹೇಳುತ್ತಿವೆ.

ಹೀಗಾಗಿ ಮುಂದಿನ ಲೋಕಸಭಾ ಚುನಾವಣೆ ಎನ್ನುವುದು ಕೇವಲ ಹೊಸ ಯೋಜನೆಗಳ ಸ್ಥಗಿತಗೊಳ್ಳುವಿಕೆ ಮಾತ್ರವಲ್ಲದೆ ರಾಜ್ಯದ ಮುಖ್ಯಮಂತ್ರಿ ಅವರನ್ನು ಅವರ ಅಧಿಕಾರದಿಂದ ಕೆಳಗಿಳಿಸುವಂತಹ ಬದಲಾವಣೆಯನ್ನು ಕೂಡ ಮಾಡಬಹುದಾಗಿದೆ ಎನ್ನುವುದಾಗಿ ಮೂಲಗಳು ತಿಳಿಸಿವೆ. ಇದೆಲ್ಲದಕ್ಕೂ ಉತ್ತರ ಲೋಕಸಭಾ ಚುನಾವಣೆಯ ಫಲಿತಾಂಶವೇ ನೀಡಬೇಕಾಗಿದೆ.

Comments are closed.