Hospital: ಕೇವಲ 20 ರೂಪಾಯಿಗೆ ಟ್ರೀಟ್ಮೆಂಟ್; ಅದೂ ಪ್ರೈವೇಟ್ ಹಾಸ್ಪಿಟಲ್ ನಲ್ಲಿ; ನಿಮಗೂ ಯೂಸ್ ಆಗ್ಬೌದು ಎಲ್ಲಿದೆ ನೋಡಿ!

Hospital: ಬಡವರಿಗೆ ಚಿಕಿತ್ಸೆ ನೀಡುವುದು ಪುಣ್ಯದ ಕೆಲಸ ಎಂಬುದಾಗಿ ಹೇಳಲಾಗುತ್ತದೆ ಆದರೆ ಆ ರೀತಿ ಮಾಡುವಂತ ಜನರು ಅಥವಾ ಆಸ್ಪತ್ರೆ ಈ ಕಾಲದಲ್ಲಿ ಸಿಗೋದು ಕಷ್ಟ ಎಂದು ಹೇಳಬಹುದು. ಆದರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋಕೆ ಹೊರಟಿರೋದು ಮೈಸೂರಿನಲ್ಲಿರುವಂತಹ ಜೈನ್ ಹಾಸ್ಪಿಟಲ್ ಬಗ್ಗೆ. ಇಲ್ಲಿ ಕೇವಲ 20 ರೂ. ಗಳ ಕೌಂಟರ್ ಫೀಸ್ ಪಡೆದುಕೊಳ್ಳುವ ಮೂಲಕ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಕೇವಲ 20 ರೂಪಾಯಿಯಲ್ಲಿ ಬಡವರಿಗೆ ಚಿಕಿತ್ಸೆ!

ಕಳೆದ 9 ವರ್ಷಗಳಿಂದಲೂ ಕೂಡ ಜೈನ್ ಆಸ್ಪತ್ರೆಯಲ್ಲಿ ಬಡವ ಶ್ರೀಮಂತ ಎನ್ನುವಂತಹ ಭೇದಭಾವ ಇಲ್ಲದೆ ಪ್ರತಿಯೊಬ್ಬರಿಗೂ ಕೂಡ 20 ರೂಪಾಯಿಗಳ ಕೌಂಟರ್ ಫೀಸ್ನಲ್ಲಿ ಚಿಕಿತ್ಸೆಯನ್ನು ನೀಡಿಕೊಂಡು ಬರಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಇಷ್ಟೊಂದು ಕಡಿಮೆ ಬೆಲೆಗೆ ಚಿಕಿತ್ಸೆ ಹಾಗೂ ತಪಾಸಣೆ ನಡೆಸುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರ ಮನಸ್ಸು ಗೆದ್ದಿದೆ ಎಂದು ಹೇಳಬಹುದಾಗಿದೆ.

ಇಂದಿನ ಕಾಲದಲ್ಲಿ ನೀವು ಗಮನಿಸಬಹುದು ಎಲ್ಲಿ ನೋಡಿದರೂ ಕೂಡ ಆರೋಗ್ಯ ಎನ್ನುವುದು ಮಹಾಭಾಗ್ಯ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಆಸ್ಪತ್ರೆಗೆ ಹೋದಾಗ ಇದನ್ನ ಹೆಚ್ಚಾಗಿ ವ್ಯಾಪಾರದ ದೃಷ್ಟಿಕೋನದಿಂದಲೇ ನೋಡ್ತಾ ಇರುವುದರಿಂದ ಪ್ರತಿಯೊಬ್ಬರು ಕೂಡ ಅಳತೆಗು ಮೀರಿ ಹಣವನ್ನು ಖರ್ಚು ಮಾಡಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಕೈ ತುಂಬಾ ಹಣ ಇದ್ರೆ ಮಾತ್ರ ಆಸ್ಪತ್ರೆಗೆ ಹೋಗಬೇಕು ಇಲ್ಲ ಅಂದ್ರೆ ಮನೆಯಲ್ಲೇ ಕೂರಬೇಕು ಎನ್ನುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ ಅನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದರ ಬೆನ್ನಲ್ಲಿ ಈಗ ಈ ರೀತಿ ಉಚಿತವಾಗಿ ಚಿಕಿತ್ಸೆ ನೀಡುವವರು ಈ ಕಾಲದಲ್ಲಿ ಕೂಡ ಇದ್ದಾರೆ ಅನ್ನೋದನ್ನ ನಂಬಲು ಕೂಡ ಸಾಧ್ಯವಾಗ್ತಾ ಇಲ್ಲ ಅಂತ ಹೇಳಬಹುದಾಗಿದೆ.

ಅದರಲ್ಲೂ ವಿಶೇಷವಾಗಿ ಹೇಳಬೇಕು ಅಂತ ಅಂದ್ರೆ ಬಡವರಿಗೆ ಈ ರೀತಿಯ ಉಚಿತ ಆರೋಗ್ಯ ತಪಾಸಣೆಯ ಹಾಗೂ ಚಿಕಿತ್ಸೆ ಅವಕಾಶ ಮಾಡಿಕೊಡುತ್ತಿರುವಂತಹ ಮೈಸೂರಿನ ಜೈನ ಹಾಸ್ಪಿಟಲ್ ನ ಸೇವಾ ತತ್ಪರತೆ ಮನೋಭಾವನೆಗೆ ನಾವೆಲ್ಲರೂ ನಿಜಕ್ಕೂ ಕೂಡ ಸಲಾಂ ಹೇಳಲೇಬೇಕಾಗಿದೆ. ಈ ಕಲಿಯುಗದಲ್ಲಿ ಕೂಡ ಈ ರೀತಿಯ ಕೆಲಸವಲ್ಲ ಮಾಡ್ತಾ ಇರೋದು ನಿಜಕ್ಕೂ ಕೂಡ ಮಾನವೀಯತೆ ಇನ್ನೂ ಉಳಿದುಕೊಂಡಿದೆ ಸಮಾಜದಲ್ಲಿ ಎಂದು ಹೇಳಬಹುದಾಗಿದೆ.

ಈ ಆಸ್ಪತ್ರೆ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 4 ರಿಂದ 6 ಗಂಟೆಗಳವರೆಗೆ ಚಿಕಿತ್ಸೆಗೆ ಬರುವಂತಹ ರೋಗಿಗಳಿಗೆ ಚಿಕಿತ್ಸೆ ಮಾಡುವಂತಹ ಕೆಲಸವನ್ನು ಮಾಡಿಕೊಂಡು ಬಂದಿದೆ. ಇಲ್ಲಿ ಜ್ವರ ಬಿಪಿ ಶುಗರ್ ಹಾಗೂ ಚರ್ಮಕ್ಕೆ ಸಂಬಂಧಪಟ್ಟಂತಹ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಕೆಲಸವನ್ನು ಮಾಡಿಕೊಡಲಾಗುತ್ತದೆ ಎನ್ನುವುದಾಗಿ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

Comments are closed.