HSRP: HSRP ನಂಬರ್ ಪ್ಲೇಟ್ ಹಾಕದೇ ಇರೋರಿಗೆ ಸರ್ಕಾರದಿಂದ ಬಂತು ನೋಡಿ ಹೊಸ ಅಪ್ಡೇಟ್!

HSRP: HSRP ನಂಬರ್ ಪ್ಲೇಟ್ ಅನ್ನು ನೀವೆಲ್ಲರೂ ತಿಳಿದುಕೊಂಡಿರುವ ಹಾಗೆ ಮೇ 31ರ ಒಳಗೆ ಪ್ರತಿಯೊಬ್ಬರೂ ಕೂಡ ತಮ್ಮ ವಾಹನಗಳಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಮೂಲಕ ಅಳವಡಿಸಿಕೊಳ್ಳಬೇಕು ಎನ್ನುವುದಾಗಿ ಸಾರಿಗೆ ಇಲಾಖೆ ಈಗಾಗಲೇ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಮೇ 31 ಇನ್ನೇನು ಕೆಲವೇ ದಿನಗಳಲ್ಲಿ ಸಮೀಪಿಸಲಿದೆ. ಆದರೆ ರಾಜ್ಯದಲ್ಲಿ 80 ಪ್ರತಿಶತಕ್ಕೂ ಹೆಚ್ಚಿನ ವಾಹನಗಳಿಗೆ ಇನ್ನೂ ಕೂಡ ನಂಬರ್ ಪ್ಲೇಟ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಲ್ಲ ಎಂಬುದಾಗಿ ಮಾಹಿತಿಗಳು ತಿಳಿದು ಬಂದಿದೆ.

ಈಗಾಗಲೇ ಮೂರು ಬಾರಿ ದಿನಾಂಕವನ್ನು ಮುಂದುವರಿಸಿಕೊಂಡು ಬಂದಿದ್ದು ಸರ್ಕಾರ ಈ ಬಾರಿ ಕೂಡ ಅದೇ ಕೆಲಸವನ್ನು ಮಾಡುತ್ತಾ ಇಲ್ವಾ ಅನ್ನೋದೇ ಅನುಮಾನವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಕೇಳಿ ಬಂದಿರುವ ಮಾಹಿತಿಯ ಪ್ರಕಾರ ಸಾರಿಗೆ ಇಲಾಖೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಹೋದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮವನ್ನು ಕೈ ತೆಗೆದುಕೊಳ್ಳುವುದು ಮಾತ್ರವಲ್ಲದೆ ಸಾವಿರದಿಂದ ಎರಡು ಸಾವಿರ ರೂಪಾಯಿಗಳವರೆಗೆ ದಂಡವನ್ನು ಕೂಡ ವಿಧಿಸುತ್ತದೆ ಎನ್ನುವುದಾಗಿ ಕೇಳಿ ಬಂದಿತ್ತು. ಆದರೆ ಈಗ ಈ ವಿಚಾರದಲ್ಲಿ ಹೊಸ ಅಪ್ಡೇಟ್ ಕೇಳಿಬಂದಿದ್ದು, ಬನ್ನಿ ಅದರ ಪ್ರಕಾರ HSRP ನಂಬರ್ ಪ್ಲೇಟ್ ಬಗ್ಗೆ ಯಾವ ಅಪ್ಡೇಟ್ ಹೊರ ಬಂದಿದೆ ಎನ್ನುವಂತಹ ಮಾಹಿತಿಯನ್ನು ಪಡೆದುಕೊಳ್ಳೋಣ.

HSRP ನಂಬರ್ ಪ್ಲೇಟ್ ಬಗ್ಗೆ ಹೊರಗೆ ಬಂತು ನೋಡಿ ಹೊಸ ಅಪ್ಡೇಟ್!

ದೆಹಲಿಯಲ್ಲಿ ಈಗಾಗಲೇ ಈ ರೀತಿ HSRP ನಂಬರ್ ಪ್ಲೇಟ್ ಅನ್ನು ನಿಗದಿತ ಸಮಯದವರೆಗೆ ಹಾಕಿಸಿಕೊಳ್ಳದೆ ಇದ್ದವರಿಗೆ ಬರೋಬ್ಬರಿ 10,000ಗಳವರೆಗೆ ದಂಡವನ್ನು ಹಾಕಿಸುವಂತಹ ಕೆಲಸವನ್ನು ಮಾಡಲಾಗುತ್ತದೆ ಎನ್ನುವಂತಹ ನಿಯಮದ ಬಗ್ಗೆ ತಿಳಿದು ಬಂದಿದೆ. ಇನ್ನು ಈ ನಿಯಮ ಮೊದಲ ಬಾರಿಗೆ ಜಾರಿಗೆ ಬಂದಿರುವುದು ಕೂಡ ದೆಹಲಿಯಲ್ಲಿ ಅಂತ ನೀವು ಈ ಮೂಲಕ ತಿಳಿದುಕೊಳ್ಳಬಹುದು. HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ನಿರ್ಬಂಧಿಸುವಂತಹ ಕೆಲಸವನ್ನು ಕೂಡ ಈಗಾಗಲೇ ದೇಶದ ರಾಜಧಾನಿಯಲ್ಲಿ ಮಾಡಲಾಗುತ್ತಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಈ ನಿಯಮ ಕರ್ನಾಟಕ ರಾಜ್ಯದಲ್ಲಿ ಕೂಡ ನೀವು ಕಾಣಬಹುದಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ವಶಪಡಿಸಿಕೊಳ್ಳುವ ಕೆಲಸವನ್ನು ದೆಹಲಿಯಲ್ಲಿ ಮಾಡ್ತಾ ಇದ್ದು ಮುಂದಿನ ದಿನಗಳಲ್ಲಿ ಅಂದರೆ ಮೇ 31ರ ನಂತರ ಕರ್ನಾಟಕ ರಾಜ್ಯದಲ್ಲಿ ಕೂಡ ಇದೇ ರೀತಿಯ ನಿಯಮಗಳನ್ನು ಅಥವಾ ಪ್ರೊಸೆಸ್ ಅನ್ನು ಅಧಿಕಾರಿಗಳು ಮಾಡಬಹುದೆಂಬುದಾಗಿ ನಿರೀಕ್ಷಿಸಲಾಗಿದೆ.

ಹೀಗಾಗಿ ಮೇ 31ರವರೆಗೆ ಕಾಯುವ ಬದಲು ಇವತ್ತೇ ನಿಮ್ಮ ವಾಹನ 2019 ರ ಒಳಗೆ ಖರೀದಿಸಿದ್ದಾಗಿದ್ದಲ್ಲಿ ಕೂಡಲೇ ಸಾರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು ನೀವು ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಈ ಶಿಕ್ಷೆಗಳಿಂದ ಪಾರಾಗುವುದನ್ನ ನೋಡಿಕೊಳ್ಳಿ.

Comments are closed.