Car: ಕೈಗೆಟಕುವ ಬೆಲೆಯಲ್ಲಿ ದಿನಬಳಕೆಗೆ, ಉತ್ತಮ ಮೈಲೇಜ್ ನೀಡುವ ಕಾರುಗಳು ಇವುಗಳೇ ನೋಡಿ; ಖರೀದಿಮಾಡೋದಕ್ಕೆ ಮುಗಿ ಬಿದ್ದ ಜನ!

Car: ಒಂದು ವೇಳೆ ನೀವು ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವಂತಹ ದಿನ ಬಳಕೆಯ ಕಾರುಗಳನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿದರೆ ಬನ್ನಿ ಆ ಕ್ಯಾಟಗರಿಯಲ್ಲಿ ಯಾವೆಲ್ಲ ಕಾರುಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನ ತಿಳಿಯೋಣ.

Maruti Suzuki Celerio:

ಈ ಕಾರು 1.0 ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ಸಿ ಎನ್ ಜಿ ಆಪ್ಶನನ್ನು ಕೂಡ ನೀವು ಈ ಕಾರಿನಲ್ಲಿ ಪಡೆದುಕೊಳ್ಳಬಹುದಾಗಿದೆ. ಪೆಟ್ರೋಲಲ್ಲಿ ನೀವು ಈ ಕಾರಿನಲ್ಲಿ 25 ರಿಂದ 26.68 ಕಿಲೋಮೀಟರ್ಗಳ ಮೈಲೇಜ್ ಪಡೆದುಕೊಳ್ಳಬಹುದಾಗಿದೆ ಹಾಗೂ ಸಿಎನ್ಜಿನಲ್ಲಿ 34.43 ಪ್ರತಿ ಕೆಜಿ ಮೈಲೇಜ್ ಪಡೆದುಕೊಳ್ಳಬಹುದಾಗಿದೆ. 5.37 ರಿಂದ 7.09 ಲಕ್ಷಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದನ್ನ ಖರೀದಿ ಮಾಡಬಹುದಾಗಿದೆ. ಏಳು ಇಂಚಿನ ಟಚ್ ಸ್ಕ್ರೀನ್ ಸಿಸ್ಟಮನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದ್ದು ಐದು ಜನರು ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ. ಕೀಲೆಸ್ ಎಂಟ್ರಿ, ಮ್ಯಾನುವಲ್ ಎ ಸಿ, ಡುಯಲ್ ಫ್ರೆಂಟ್ ಏರ್ ಬ್ಯಾಗ್ಸ್, ABS EBD ನಂತಹ ಸೇಫ್ಟಿ ಕ್ರಮಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.

Tata Tiago:

ಟಾಟಾ ಸಂಸ್ಥೆಯ ಈ ಕಾರಿನಲ್ಲಿ ನೀವು 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕಾಣಬಹುದಾಗಿದೆ. ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಕೂಡ ಇದರಲ್ಲಿ ಕನೆಕ್ಟೆಡ್ ಆಗಿದೆ. ಎಂಟು ಸ್ಪೀಕರ್ ಸೌಂಡ್ ಸಿಸ್ಟಮ್ ಹಾಗೂ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಫೀಚರ್ ಗಳನ್ನು ಕಾಣಬಹುದಾಗಿದೆ. ABS EBD ಡುಯಲ್ ಫ್ರೆಂಟ್ ಏರ್ ಬ್ಯಾಗ್ ಸೇರಿದಂತೆ ಸಾಕಷ್ಟು ಸೇಫ್ಟಿ ಫೀಚರ್ ಇದರಲ್ಲಿದೆ. ಇದು ನಿಮಗೆ ಪೆಟ್ರೋಲ್ ಹಾಗೂ ಸಿಎನ್‌ಜಿ ಎರಡರಲ್ಲಿ ಕೂಡ ಆಪ್ಷನ್ ಸಿಗುತ್ತದೆ. ಐದು ಸ್ಪೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಆಪ್ಷನ್ ಗಳ ಜೊತೆಗೂ ಕೂಡ ಸಿಗುತ್ತದೆ. ಪೆಟ್ರೋಲ್ ನಲ್ಲಿ ನಿಮಗೆ 19 ರಿಂದ 20 km ಗಳ ಮೈಲೇಜ್ ಸರಾಸರಿಯಲ್ಲಿ ನೀಡುತ್ತದೆ. CNG ನಲ್ಲಿ 26 ರಿಂದ 28 ಕಿಲೋಮೀಟರ್ಗಳ ಸರಾಸರಿ ಮೈಲೇಜ್ ಅನ್ನು ಪಡೆದುಕೊಳ್ಳಬಹುದಾಗಿದೆ. 5.65 ರಿಂದ 8.9 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಈ ಕಾರನ್ನು ಖರೀದಿ ಮಾಡಬಹುದಾಗಿದೆ.

Renault Kiger:

ಇದರಲ್ಲಿ ಎಂಟು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ ಏಳು ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಯನ್ನು ಕೂಡ ನೀವು ಗಮನಿಸಬಹುದಾಗಿದೆ. ಸ್ಟಾಪ್ ಸ್ಟಾರ್ಟ್ ಪುಶ್ ಬಟನ್ ಆಪ್ಶನ್ ಹಾಗೂ ವಯರ್ಲೆಸ್ ಚಾರ್ಜರ್ ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ ನಾಲ್ಕು ಏರ್ ಬ್ಯಾಗ್ ಗಳು ಹಾಗೂ ಎಬಿಎಸ್ ಇಬಿಡಿ ಕೂಡ ಅಳವಡಿಸಲಾಗಿದೆ. 1.0 ಲೀ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಹಾಗೂ 1.0l ಟರ್ಬೊ ಪೆಟ್ರೋಲ್ ಇಂಜಿನ್ ಆಪ್ಷನ್ ಅನ್ನು ಕೂಡ ನೀವು ಇದರಲ್ಲಿ ಪಡೆದುಕೊಳ್ಳಬಹುದು. ಮೂರು ಡ್ರೈವಿಂಗ್ ಮೋಡ್ ಗಳನ್ನು ನೀವು ಇದರಲ್ಲಿ ಕಾಣಬಹುದಾಗಿದೆ. 18 ರಿಂದ 20 km ಗಳ ಮೈಲೇಜ್ ಅನ್ನೋ ಪ್ರತಿ ಲೀಟರ್ಗೆ ನೀಡುತ್ತದೆ. 6 ರಿಂದ 11 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಈ ಕಾರನ್ನು ಖರೀದಿ ಮಾಡಬಹುದಾಗಿದೆ.

Comments are closed.