Tirupati: ಜೂನ್ ತಿಂಗಳಿನಲ್ಲಿ ತಿಮ್ಮಪ್ಪನ ದರ್ಶನಕ್ಕೆ ಹೋಗೋದಿಕ್ಕೆ ಈ ಐದು ದಿನಗಳು ಬೆಸ್ಟ್; ಇಂದೇ ಬುಕ್ಕಿಂಗ್ ಮಾಡ್ಕೊಳ್ಳಿ!

Tirupati: ಕೋಟ್ಯಾಂತರ ಭಕ್ತಾ ಅಭಿಮಾನಿಗಳನ್ನು ಹೊಂದಿರುವಂತಹ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗೋದು ಅಭಿಮಾನಿಗಳಲ್ಲಿ ಜೀವನದ ಮೊಟ್ಟಮೊದಲ ಕನಸು ಎಂದು ಹೇಳಬಹುದಾಗಿದೆ. ಯಾಕೆಂದರೆ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತಾಭಿಮಾನಿಗಳು ಹರಿದು ಬರುತ್ತಾರೆ. ಇನ್ನು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಹೋಗುವುದಕ್ಕೆ ಸರಿಯಾದ ಸಮಯ ಯಾವುದು ಕೊಡಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ಬನ್ನಿ ಇವತ್ತಿನ ಈ ಲೇಖನದ ಮೂಲಕ ಆ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳುವುದಕ್ಕೆ ಸರಿಯಾದ ಸಮಯ ಹಾಗೂ ವಿಶೇಷ ಪೂಜೆಗಳ ವಿವರ!

ಮೊದಲನೇದಾಗಿ ಜೂನ್ 1 ರಿಂದ 5ನೇ ತಾರೀಖಿನವರೆಗೆ ಟಿಟಿಡಿ ನಿಂದ ಜಪಾಲಿ ತೀರ್ಥದ ಅಂಜನಾದ್ರಿ ಆಕಾಶ ಗಂಗೆ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ನಡೆಸುವ ಬಗ್ಗೆ ಈಗಾಗಲೇ ತಯಾರಿ ನಡೆಸಿಕೊಳ್ಳುತ್ತಿದ್ದು ಅಭಿಮಾನಿಗಳಿಗೆ ವ್ಯವಸ್ಥೆಯನ್ನು ಮಾಡುತ್ತಿದೆ. ಇದೇ ಕಾರಣಕ್ಕಾಗಿ ಇಲ್ಲಿ ಅಂಜನಾ ದೇವಿಗೆ ಹಾಗೂ ಬಾಲಾಂಜನೇಯ ಸ್ವಾಮಿಗೆ ವಿಶೇಷವಾದ ಅಭಿಷೇಕದ ಪೂಜೆ ನಡೆಯಲಿದೆ. ಇನ್ನು ಇಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣೆ ಮಾಡುವಂತಹ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳುವುದಕ್ಕೆ ಟಿಟಿಡಿ ನಿರ್ಧರಿಸಿದೆ ಎಂಬುದಾಗಿ ತಿಳಿದು ಬಂದಿದೆ.

ಅಂಜನಾದೇವಿ ಹಾಗೂ ಬಾಲಾಂಜನೇಯ ದೇವಸ್ಥಾನದಲ್ಲಿ ಜೂನ್ ಒಂದರಿಂದ ಐದನೇ ತಾರೀಖಿನವರೆಗೆ ಐದು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 8:30 ರಿಂದ 10 ಗಂಟೆಯವರೆಗೆ ಬೆಳಿಗ್ಗೆ ಪ್ರತಿದಿನ ಅಭಿಷೇಕ ನಡೆಯಲಿದೆ. ಜೂನ್ ಒಂದನೇ ದಿನಾಂಕ ಮಲ್ಲಿಗೆ ಅಭಿಷೇಕ, ಜೂನ್ 2 ರಂದು ವೀಳ್ಯದೆಲೆ ಅಭಿಷೇಕ, ಮೂರನೇ ತಾರೀಕಿನಂದು ಕೆಂಪುಗನ್ನರ್ ಹಾಗೂ ಕನಕಾಂಬರ ಅಭಿಷೇಕ, ಜೂನ್ ನಾಲ್ಕನೇ ದಿನಾಂಕದಂದು ಕೆಮೋಮೈಲ್ ಅಭಿಷೇಕ ಹಾಗೂ ಜೂನ್ 5 ನೇ ದಿನಾಂಕದಂದು ಸಿಂಧೂರ ಅಭಿಷೇಕವನ್ನು ಮಾಡುವ ಬಗ್ಗೆ ಟಿಟಿಡಿ ಅಧಿಕೃತ ಮಾಹಿತಿ ನೀಡಿದೆ.

10:00ಯ ಸಮಯಕ್ಕೆ ಹನುಮಾನ್ ಜನ್ಮ ವೃತ್ತಾಂತವನ್ನು ಹೇಳುವಂತಹ ಕಾರ್ಯಕ್ರಮ ಪ್ರಾರಂಭವಾಗಲಿದೆ. ಇದಾದ ನಂತರ 2 ರಿಂದ 3 ಗಂಟೆವರೆಗೆ ಜಪಾಲಿಯಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಜೂನ್ ಒಂದನೇ ದಿನಾಂಕದಂದು ಹರಿಕಥೆ, ಎರಡನೇ ತಾರೀಕಿನಂದು ಸಂಕೀರ್ತನೆಗಳು ಹಾಗೂ ಜೂನ್ ಮೂರನೇ ದಿನಾಂಕದಂದು ಪುರಂದರದಾಸರ ಸಂಕೀರ್ತನೆಗಳು ಹಾಗೂ ಜೂನ್ ನಾಲ್ಕನೇ ದಿನಾಂಕದಂದು ಹಿಂದೂ ಪ್ರಚಾರದ ಪರಿಷತ್ ಭಜನೆ, ಕೊನೆಯ ದಿನಾಂಕದಂದು ಅನ್ನಮಾಚಾರ್ಯ ಪ್ರಾಜೆಕ್ಟ್ ಕಲಾವಿದರಿಂದ ಹರಿಕಥೆಯನ್ನು ಪರ್ಫಾರ್ಮ್ ಮಾಡಲಾಗುತ್ತದೆ. ಕಾಲೇಜ್ ವಿದ್ಯಾರ್ಥಿಗಳಿಂದ ಹಾಗೂ ಎಸ್ ವಿ ಸಂಗೀತ ತಂಡದಿಂದ ನೃತ್ಯ ಕಾರ್ಯಕ್ರಮಗಳನ್ನು ಪ್ರತಿದಿನ ಸಂಜೆ 4 ರಿಂದ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಪ್ರತಿದಿನ ಮೂರರಿಂದ ನಾಲ್ಕು ಗಂಟೆಯವರೆಗೆ ಹನುಮಂತನ ಜನ್ಮದ ಕಥೆಯ ಬಗ್ಗೆ ವೇದ ವಿದ್ವಾಂಸರಿಂದ ರಸವತ್ತಾದಂತಹ ಮಾಹಿತಿಗಳನ್ನ ಒದಗಿಸಲಾಗುತ್ತದೆ.

Comments are closed.