ATM Scam: ಈ ಎಟಿಎಂ ನಲ್ಲಿ ನೀವ್ ಪಿನ್ ನಂಬರ್ ಹಾಕಿದ್ರೆ ಮತ್ಯಾರೋ ಹಣ ವಿತ್ ಡ್ರಾ ಮಾಡ್ತಾರೆ; ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿರೋ ಹಣ ಖಾಲಿ ಆಗುತ್ತೆ, ಹಾಗಾದ್ರೆ ಏನ್ ಮಾಡ್ಬೇಕು ಗೊತ್ತಾ?

ATM Scam: ಕೆಲಸಕ್ಕೆ ಹೋಗುವಂತ ಪ್ರತಿಯೊಬ್ಬರು ಕೂಡ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆಗೆ ಅವಿನ ಭಾವ ಅವಿಭಾಜ್ಯ ಸಂಬಂಧವನ್ನು ಹೊಂದಿರುತ್ತಾರೆ. ಹೌದು ಪ್ರತಿಯೊಬ್ರು ಕೂಡ ತಾವು ದುಡಿದಿರುವಂತಹ ಹಣವನ್ನು ಪ್ರತಿ ತಿಂಗಳು ಉಳಿತಾಯಕ್ಕಾಗಿ ಬ್ಯಾಂಕಿನ ಖಾತೆಗೆ ಜಮಾ ಮಾಡುವಂತಹ ಪ್ರಕ್ರಿಯೆ ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್ ಅಕೌಂಟ್ ಮಾಡುವಂತಹ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಇನ್ನು ತಮ್ಮ ಅಗತ್ಯತೆಗೆ ಕ್ಯಾಶ್ ಹಣವನ್ನು ಡ್ರಾ ಮಾಡಿಕೊಳ್ಳಬೇಕು ಎನ್ನುವಂತಹ ಸಂದರ್ಭದಲ್ಲಿ ಬ್ಯಾಂಕಿನಿಂದ ನೀಡಲಾಗಿರುವಂತಹ ಎಟಿಎಂ ಕಾರ್ಡ್ ಅನ್ನು ಎಟಿಎಂ ಮಷೀನ್ ಗಳಿಗೆ ಹೋಗಿ ಪಿನ್ ನಂಬರ್ ಹಾಕಿ ತಮಗೆ ಬೇಕಾಗಿರುವಷ್ಟು ಹಣವನ್ನ ಲಿಮಿಟ್ ಗೆ ತಕ್ಕಂತೆ ಹಣವನ್ನು ಡ್ರಾ ಮಾಡಿಕೊಳ್ಳುತ್ತಾರೆ. ಇದು ಪ್ರಕ್ರಿಯೆ ನೋಡೋದಕ್ಕೆ ಸುಲಭವಾಗಿ ಆದರೆ ಇದರಿಂದಲೂ ಕೂಡ ಕೆಲವು ಖದೀಮರು ಹಣವನ್ನು ಲಪಟಾಯಿಸುವಂತ ಕೆಲಸವನ್ನು ಮಾಡ್ತಾ ಇದ್ದಾರೆ ಅನ್ನೋದನ್ನ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ.

ಎಟಿಎಂ ಸ್ಕ್ಯಾಮ್ ಗೆ ಹಣ ಕಳ್ಕೋಬೇಡಿ!

ಇತ್ತೀಚಿನ ದಿನಗಳಲ್ಲಿ ಖದೀಮರು ಮಾಡುತ್ತಿರುವಂತಹ ಕೆಲವೊಂದು ಕೆಲಸಗಳಿಂದಾಗಿ ಎಟಿಎಂಗೆ ಹಣವನ್ನು ಡ್ರಾ ಮಾಡಿಕೊಳ್ಳಲು ಹೋಗುವಂತಹ ಸಾಮಾನ್ಯರು ಹಣವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿದೆ ಎನ್ನುವಂತಹ ಮಾಹಿತಿ ಕೇಳಿ ಬಂದಿದೆ. ಅರೆ ಇದೇನಿದು ಅಷ್ಟೊಂದು ಸುಲಭವಾಗಿ ಬೇರೆಯವರು ನಮ್ಮ ಎಟಿಎಂ ಕಾರ್ಡ್ ನಿಂದ ಹಣ ಹೇಗೆ ಪಡೆದುಕೊಳ್ಳುತ್ತಾರೆ ಅನ್ನೋದಾಗಿ ನೀವು ಯೋಚನೆ ಮಾಡುತ್ತಿರಬಹುದು ಬನ್ನಿ ಅದರ ಬಗ್ಗೆ ಕೂಡ ನಿಮಗೆ ಮಾಹಿತಿಯನ್ನು ತಿಳಿಸುತ್ತೇವೆ.

ಇತ್ತೀಚಿನ ದಿನಗಳಲ್ಲಿ ಜನರು ಎಟಿಎಂ ಮಷೀನ್ ಇರುವಂತಹ ಸ್ಥಳಕ್ಕೆ ಹೋದಾಗ ಅಲ್ಲಿ ಎಟಿಎಂ ಕಾರ್ಡ್ ಅನ್ನು ಹಾಕಿದ ನಂತರ ಪಿನ್ ಕೋಡ್ ಅನ್ನು ಪ್ರೆಸ್ ಮಾಡಿದ ನಂತರ ಎಟಿಎಂ ಕಾರ್ಡ್ ಮಷೀನ್ ನಲ್ಲಿ ಸ್ಟಕ್ ಆಗುವಂತಹ ಅಂದರೆ ಸಿಕ್ಕಿ ಬೀಳುವಂತಹ ಕೆಲಸ ಆಗ್ತಾ ಇದೆ. ಇದರ ಹಿಂದೆ ಖದೀಮರು ಈ ಕೆಲಸವನ್ನು ಮಾಡ್ತಾ ಇದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ಸಂದರ್ಭದಲ್ಲಿ ಗಾಬರಿಗೊಳ್ಳುವಂತಹ ಜನರು ಹತ್ತಿರದ ಬ್ಯಾಂಕಿಗೆ ಹೋಗಿ ಈ ವಿಷಯವನ್ನು ಮುಟ್ಟಿಸುವಂತಹ ಕೆಲಸವನ್ನು ಮಾಡೋಕೆ ಹೋದ ಸಂದರ್ಭದಲ್ಲಿ ಖದೀಮರು ಹಣವನ್ನು ಎಟಿಎಂ ಕಾರ್ಡ್ ಮೂಲಕ ಪಡೆದುಕೊಳ್ಳುವಂತಹ ಕೆಲಸವನ್ನು ಮಾಡ್ತಾ ಇದ್ದಾರೆ ಎಂಬುದಾಗಿ ವ್ಯಾಪಕವಾಗಿ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬರುತ್ತದೆ.

ಇದೇ ಕಾರಣಕ್ಕಾಗಿ ಯಾವುದೇ ಕಾರಣಕ್ಕೂ ನೀವು ಒಂಟಿಯಾಗಿರುವಂತಹ ಎಟಿಎಂ ಮಷೀನ್ ಇರುವಂತಹ ಸ್ಥಳದಲ್ಲಿ ಹೋಗಿ ಎಟಿಎಂ ಮೂಲಕ ಹಣವನ್ನು ಡ್ರಾ ಮಾಡುವ ಕೆಲಸವನ್ನು ಮಾಡೋಕೆ ಹೋಗ್ಬೇಡಿ. ಇದರಿಂದಾಗಿ ಈ ರೀತಿಯ ಪರಿಸ್ಥಿತಿ ನಿಮಗೂ ಕೂಡ ಒದಗಿ ಬರಬಹುದಾಗಿದೆ ಹಾಗೂ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗುವ ಸಾಧ್ಯತೆ ಕೂಡ ಇದೆ.

Comments are closed.