BSNL: ಜಿಯೋಗೆ ಬೆವರು ಇಳಿಸಿದ BSNL ಹೊಸ ರೀಚಾರ್ಜ್ ಪ್ಲಾನ್; ಹಳ್ಳಿಯವರಿಗಂತೂ ಫುಲ್ ಖುಷ್!

BSNL: ಭಾರತ ದೇಶದ ಟೆಲಿಕಾಂ ಇಂಡಸ್ಟ್ರಿಯಲ್ ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದ ಪ್ಲೇಯರ್ಗಳು ಕೂಡ ಇರೋದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಅದರಲ್ಲಿ ವಿಶೇಷವಾಗಿ ಜಿಯೋ ಸಂಸ್ಥೆಯ ಆಗಮನದಿಂದಾಗಿ ಭಾರತ ದೇಶದ ಟೆಲಿಕಾಂ ಇಂಡಸ್ಟ್ರಿಯ ಕಾರ್ಯ ಚಟುವಟಿಕೆಗಳು ದೀರ್ಘಕಾಲದವರೆಗೆ ಈಗ ಬದಲಾಗಿದೆ ಎಂದು ಹೇಳಬಹುದಾಗಿದೆ. ಯಾಕೆಂದ್ರೆ ಕಡಿಮೆ ಬೆಲೆಯ ಟೆಲಿಕಾಂ ಹಾಗೂ ಇಂಟರ್ನೆಟ್ ಸೇವೆಗಳನ್ನು ನೀಡುವ ಮೂಲಕ JIO ಈಗ ಭಾರತ ದೇಶದ ಟೆಲಿಕಾಂ ಇಂಡಸ್ಟ್ರಿಯ ಐತಿಹಾಸದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಕಂಪನಿಯಾಗಿದೆ. ಇನ್ನು ಒಂದು ಕಾಲದಲ್ಲಿ ರಾಜನಾಗಿ ಮಿಂಚಿ ಮೆರೆದಿದ್ದ ಸರ್ಕಾರಿ ಟೆಲಿಕಾಂ ಕಂಪನಿ ಆಗಿರುವ BSNL ಈಗ ಮತ್ತೆ ತನ್ನ ಗ್ರಾಹಕರನ ಮರಳಿ ಪಡೆಯುವುದಕ್ಕೆ ಬೇಕಾಗಿರುವಂತಹ ಪ್ರತಿಯೊಂದು ಜನಪ್ರಿಯ ಯೋಜನೆಗಳನ್ನು ಕೂಡ ಜಾರಿಗೆ ತರುವಂತಹ ಕೆಲಸವನ್ನು ಮಾಡುತ್ತಿದೆ. ಇನ್ನು ಈಗ ಹೊಸದಾಗಿ BSNL ಸಂಸ್ಥೆ ಜಾರಿಗೆ ತರುತ್ತಿರುವಂತಹ ಎರಡು ಹೊಸ ಯೋಜನೆಗಳ ಬಗ್ಗೆ ನಿಮಗೆ ಹೇಳೋದಕ್ಕೆ ಹೊರಟಿದ್ದು ಖಂಡಿತವಾಗಿ BSNL ಗ್ರಾಹಕರಿಗೆ ಈ ಯೋಜನೆಗಳು ಕಡಿಮೆ ಸಮಯದಲ್ಲಿ ಇಷ್ಟ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

BSNL 397 ರೂಪಾಯಿಗಳ ರಿಚಾರ್ಜ್ ಪ್ಲಾನ್!

BSNL ಸಂಸ್ಥೆ ಹೊಸದಾಗಿ ಪರಿಚಯಿಸಿರುವಂತಹ STV397 ರೂಪಾಯಿ ರಿಚಾರ್ಜ್ ಪ್ಲಾನ್ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಈ ರಿಚಾರ್ಜ್ ಪ್ಲಾನ್ 150 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ ಹಾಗೂ ಇದರಲ್ಲಿ ಕೇವಲ 30 ದಿನಗಳ ಕಾಲ ಮಾತ್ರ ನೀವು ಪ್ರತಿದಿನ ಅನಿಯಮಿತ ಕಾಲಿಂಗ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ 30 ದಿನಗಳ ಕಾಲ ಪ್ರತಿದಿನ ಎರಡು ಜಿಬಿ ಇಂಟರ್ನೆಟ್ ಡೇಟಾದಂತೆ ಒಟ್ಟಾರೆಯಾಗಿ 60gb ಇಂಟರ್ನೆಟ್ ಡೇಟಾ ಪಡೆದುಕೊಳ್ಳಬಹುದಾಗಿದೆ. 30 ದಿನಗಳವರೆಗೆ ಪ್ರತಿದಿನ 100 ಉಚಿತ ಎಸ್ಎಂಎಸ್ ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇನ್ನು 30 ದಿನಗಳ ನಂತರ 150 ದಿನಗಳ ವರೆಗೆ ನಿಮ್ಮ ಸಿಮ್ ಕಾರ್ಡ್ ಆಕ್ಟಿವ್ ಆಗಿರುತ್ತದೆ ಹಾಗೂ ಹೊರಗಿನಿಂದ ನಿಮ್ಮ ಮೊಬೈಲ್ ನಂಬರ್ ಗೆ ಬರುವಂತಹ ಕಾಲ್ ಗಳನ್ನು ನೀವು ರಿಸೀವ್ ಮಾಡಬಹುದಾಗಿದೆ.

BSNL ಸಂಸ್ಥೆಯ 699 ರೂಪಾಯಿಗಳ ರಿಚಾರ್ಜ್ ಪ್ಲಾನ್!

BSNL ಸಂಸ್ಥೆ ಇದೇ ರೀತಿಯಲ್ಲಿ ತನ್ನ ಗ್ರಾಹಕರಿಗೆ 699 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ಜಾರಿಗೆ ತಂದಿದೆ. ಈ ಯೋಜನೆಯ ಪ್ರಕಾರ ಸಿಗುವುದು ಕೇವಲ 130 ದಿನಗಳ ವ್ಯಾಲಿಡಿಟಿ ಆದರೆ ಇದರ ಜೊತೆಗೆ 20 ದಿನಗಳ ಹೆಚ್ಚುವರಿ ಒಟ್ಟಾರೆಯಾಗಿ 150 ದಿನಗಳ ವ್ಯಾಲಿಡಿಟಿ ಅನ್ನು ಈ ರಿಚಾರ್ಜ್ ಪ್ಲಾನ್ ಜೊತೆಗೆ ನೀವು ಪಡೆದುಕೊಳ್ಳಬಹುದಾಗಿದೆ. ನಿಮಗೆ ಉಚಿತ ನೂರು ಎಸ್ಎಂಎಸ್ ಜೊತೆಗೆ ವಾಯ್ಸ್ ಕಾಲಿಂಗ್ ಸೇವೆಯನ್ನು ಕೂಡ ಪಡೆದುಕೊಳ್ಳಬಹುದು. ಇನ್ನು ಪ್ರತಿದಿನ 0.5 ಜಿಬಿ ಅಂದರೆ 500 ಎಂಬಿ ಇಂಟರ್ನೆಟ್ ಅನ್ನು ಪ್ರತಿದಿನ ಪಡೆದುಕೊಳ್ಳಬಹುದಾಗಿದೆ.

Comments are closed.