Government Rules: ಜೂನ್ ಒಂದರಿಂದ ಸರ್ಕಾರದ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ; ಸಾರ್ವಜನಿಕರಿಗೆ ಲಾಭನೋ ನಷ್ಟನೋ? ಇಲ್ಲಿದೆ ನೋಡಿ ಮಾಹಿತಿ!

Government Rules: ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುವಂತಹ ಕೆಲಸವನ್ನು ಅಥವಾ ಹಳೆಯ ನಿಯಮಗಳನ್ನು ಬದಲಾವಣೆ ಮಾಡುವಂತಹ ಕೆಲಸವನ್ನು ಮಾಡಿಕೊಂಡು ಹೋಗುತ್ತದೆ. ಇದನ್ನು ಸರ್ಕಾರ ಪ್ರತಿ ತಿಂಗಳ ಆರಂಭದ ದಿನಾಂಕದಂದು ಮಾಡುತ್ತದೆ ಅನ್ನೋದನ್ನ ನೀವು ನೆನಪಿಟ್ಟುಕೊಳ್ಳಬೇಕಾಗುತ್ತದೆ. ನೀನು ಈಗ ಜೂನ್ ಒಂದು ಪ್ರಾರಂಭ ಆಗುವುದಕ್ಕೆ ಹೊರಟಿದ್ದೇವೆ. ಹೊಸ ತಿಂಗಳ ಆರಂಭಕ್ಕಿಂತ ಮುಂಚೆ ಸರ್ಕಾರ ಯಾವೆಲ್ಲಾ ಕ್ಷೇತ್ರಗಳಲ್ಲಿ ನಿಯಮಗಳ ಬದಲಾವಣೆಯನ್ನು ಜಾರಿಗೆ ತರಲಿದೆ ಎನ್ನುವಂತಹ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ಹಾಗಿದ್ರೆ ಬನ್ನಿ ಜೂನ್ ತಿಂಗಳಿಂದ ಸರ್ಕಾರ ಯಾವೆಲ್ಲಾ ನಿಯಮಗಳನ್ನು ಅಥವಾ ಯೋಜನೆಗಳನ್ನು ಬದಲಾಯಿಸಲಿದೆ ಎನ್ನುವಂತಹ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಬದಲಾಗಲಿರುವಂತಹ ನಿಯಮಗಳು!

ಡ್ರೈವಿಂಗ್ ಲೈಸೆನ್ಸ್ ನಿಯಮ

ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಆರ್‌ಟಿಓ ಕಚೇರಿಗೆ ಸುತ್ತಬೇಕಾದ ಅಗತ್ಯವಿಲ್ಲ ನೀವು ಡ್ರೈವಿಂಗ್ ಕಲಿಯುವಂತಹ ಖಾಸಗಿ ಡ್ರೈವಿಂಗ್ ತರಬೇತಿ ಕೇಂದ್ರಗಳಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬಹುದಾಗಿದೆ. ಈ ಅರ್ಹತೆಗಳನ್ನು ಪರೀಕ್ಷಿಸುವಂತಹ ಅಧಿಕಾರವನ್ನು ಕೂಡ ಈ ಕೇಂದ್ರಗಳ ಅಧಿಕಾರಿಗಳಿಗೆ ನೀಡಲಾಗುತ್ತದೆ. ದಂಡದ ಬಗ್ಗೆ ಕೂಡ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ವೇಗದ ಮಿತಿಮೀರಿ ಚಾಲನೆ ನಡೆಸಿದರೆ ಸಾವಿರ ರೂಪಾಯಿಗಳಿಂದ 2000ಗಳವರೆಗೆ ಫೈನ್. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಅಪ್ರಾಪ್ತ ವಯಸ್ಸಿನ ಬಾಲಕರು ವಾಹನವನ್ನು ಚಲಾಯಿಸುತ್ತಿದ್ದರೆ 25,000 ದಂಡ ಕಟ್ಟಬೇಕಾಗುತ್ತದೆ. ವಾಹನ ಮಾಲೀಕರ ರಿಜಿಸ್ಟ್ರೇಷನ್ ಕ್ಯಾನ್ಸಲ್ ಮಾಡಲಾಗುತ್ತದೆ ಹಾಗೂ ಆ ವಯಸ್ಸಿನ ಹುಡುಗನಿಗೆ 25 ವರ್ಷದವರೆಗೂ ಡ್ರೈವಿಂಗ್ ಲೈಸೆನ್ಸ್ ನೀಡಲಾಗುವುದಿಲ್ಲ.

ಆಧಾರ್ ಕಾರ್ಡ್

ಜೂನ್ 14ರ ವರೆಗೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಆನ್ಲೈನ್ ಮೂಲಕವೇ ಸುಲಭವಾಗಿ ಮಾಡಬಹುದಾಗಿದೆ. ಆಫ್ ಲೈನ್ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವಂತಹ ಕೆಲಸಕ್ಕೆ ಕೈ ಹಾಕುವುದಾದರೆ ಕನಿಷ್ಠ ಪಕ್ಷ 50 ರೂಪಾಯಿಗಳು ಶುಲ್ಕವನ್ನು ನೀಡಬೇಕಾಗುತ್ತದೆ.

ಎಲ್ ಪಿ ಜಿ ಸಿಲಿಂಡರ್ ಬೆಲೆ

ತೈಲ ಹಾಗೂ ನ್ಯಾಚುರಲ್ ಗ್ಯಾಸ್ ಕಂಪನಿಗಳು ಜೂನ್ ಒಂದರಿಂದ ಎಲ್ಪಿಜಿ ಸಿಲಿಂಡರ್ ಗ್ಯಾಸ್ ಬೆಲೆ ಮೇಲೆ ಬೆಲೆಯನ್ನು ಕಡಿಮೆ ಮಾಡಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಡೀಸೆಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಕೂಡ ನಾವು ಬದಲಾವಣೆಯನ್ನು ನಿರೀಕ್ಷೆ ಮಾಡಬಹುದಾಗಿದೆ.

ಜೂನ್ ತಿಂಗಳ ಬ್ಯಾಂಕ್ ರಜಾದಿನಗಳು

ಜೂನ್ ತಿಂಗಳಿನಲ್ಲಿ ಒಟ್ಟಾರೆಯಾಗಿ 10 ಬ್ಯಾಂಕಿಂಗ್ ರಜೆ ಗಳಿವೆ ಎಂಬುದಾಗಿ ತಿಳಿದು ಬಂದಿದೆ. ಇವುಗಳಲ್ಲಿ ನಾಲ್ಕು ಭಾನುವಾರ ಹಾಗೂ ಎರಡು ಸೆಕೆಂಡ್ ಹಾಗೂ ನಾಲ್ಕನೇ ಶನಿವಾರಗಳನ್ನು ಕೂಡ ನೀವು ಸೇರಿಸಿಕೊಳ್ಳಬೇಕಾಗಿರುತ್ತದೆ.

Comments are closed.