Health: ಮಂಡಿ ನೋವು ವರ್ಷಗಳಿಂದ ವಾಸಿ ಆಗದೇ ಹಾಗೆ ಇದ್ಯಾ? ಹಾಗಿದ್ರೆ ಈ ಸುಲಭ ಮನೆ ಮದ್ದನ್ನ ಫಾಲೋ ಮಾಡಿ, ತಕ್ಷಣ ಕಡಮೆ ಆಗತ್ತೆ!

Health: ಯೂರಿಕ್ ಆಮ್ಲದ ಕಾರಣದಿಂದಾಗಿ ಸಾಕಷ್ಟು ಜನರಿಗೆ ಮಂಡಿಗಳಲ್ಲಿ ನೋ-ವು ಕಾಣಿಸಿಕೊಳ್ಳುವಂತಹ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಯೂರಿಕ್ ಆಮ್ಲಗಳನ್ನು ಕಡಿಮೆ ಮಾಡುವಂತಹ ಆಹಾರ ವಸ್ತುಗಳ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.

ಮಂಡಿ ನೋವು ನಿವಾರಿಸಲು ಮನೆ ಮದ್ದು

ದೇಹದಲ್ಲಿ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡುವುದಕ್ಕಾಗಿ ಒಣ ದ್ರಾಕ್ಷಿಯ ಸೇವನೆ ಅತ್ಯಂತ ಪರಿಣಾಮಕಾರಿಯಾಗಿ ಸಹಾಯಮಾಡುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಇದು ಕೇವಲ ನೋ-ವಿನಿಂದ ಮಾತ್ರವಲ್ಲದೆ ಊತದಿಂದಲೂ ಕೂಡ ನಿಮ್ಮನ್ನು ಕಾಪಾಡುತ್ತದೆ. ಇನ್ನು ಮಜ್ಜಿಗೆಯನ್ನು ಕೊಡುವ ಸಂದರ್ಭದಲ್ಲಿ ಕಾಮಕಸ್ತೂರಿಯನ್ನು ಅದಕ್ಕೆ ಬೆರೆಸಿ ಕುಡಿಯುವುದು ಕೂಡ ನಿಮಗೆ ಸಹಾಯಕಾರಿಯಾಗಿದೆ. ಇದರಿಂದಾಗಿ ಮೂಳೆಯ ಪೋಷಣೆ ಕೂಡ ಇನ್ನಷ್ಟು ಹೆಚ್ಚಾಗುತ್ತದೆ.

ಕೊಬ್ಬು ರಹಿತ ಚೀಸ್ ತಿನ್ನುವುದು ಕೂಡ ನಿಮ್ಮ ದೇಹದಲ್ಲಿರುವಂತಹ ಯೂರಿಕ್ ಆಮ್ಲವನ್ನು ಕಡಿಮೆ ಮಾಡುವುದಕ್ಕೆ ರಾಮಬಾಣದ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದರ ಜೊತೆಗೆ ಅವರೆಕಾಳು ಹಾಗೂ ರಾಜ್ಮಾ ಕಾಳು ಕೂಡ ಉತ್ತಮವಾಗಿದೆ. ಅವರೆಕಾಳು ಹಾಗೂ ರಾಜ್ಮ ಸೇವನೆ ಎನ್ನುವುದು ನಿಮ್ಮ ದೇಹದಲ್ಲಿರುವಂತಹ ಯೂರಿಕ್ ಆಮ್ಲವನ್ನು ಗಣನೀಯವಾಗಿ ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಸಿಟ್ರಸ್ ಹಣ್ಣು ಕೂಡ ನಿಮ್ಮ ದೇಹದಲ್ಲಿರುವಂತಹ ಮಂಡಿ ನೋವು ತರುವಂತಹ ಯೂರಿಕ್ ಆಮ್ಲವನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ ಮಾತ್ರವಲ್ಲದೆ ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಹಣ್ಣುಗಳು ಹೆಚ್ಚಾಗಿ ಸಿಹಿಯಾಗಿರಬಾರದು ಅನ್ನೋದನ್ನ ತಿಳಿದುಕೊಳ್ಳಬೇಕು.

ಮೇಲೆ ಹೇಳಿರುವ ಮಾಹಿತಿಯು ಸಂಪೂರ್ಣ ಸಾಮಾನ್ಯ ಜ್ಞಾನ ಮತ್ತು ಹಿರಿಯರಿಂದ ಎರವಲು ಪಡೆದುಕೊಂಡಿದ್ದು. ವೈದ್ಯರ ಸಲಹೆಯನ್ನು ಸ್ವೀಕರಿಸಿ ನಂತರ ಟ್ರೀಟ್ಮೆಂಟ್ ಮಾಡಿ. ಸಿಹಿ ಕಹಿ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.

Comments are closed.