Kannada Serial: ಲಕ್ಷ್ಮೀ ನಿವಾಸದಲ್ಲಿ ಎಲ್ಲರ ಫೇವರೆಟ್ ವೆಂಕಿ ಪಾತ್ರಧಾರಿಯ ನಿಜಕ್ಕೂ ಯಾರು ಗೊತ್ತಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ!

Kannada Serial: ಕಿರುತೆರೆ ವಾಹಿನಿಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಹೊಂದಿರುವಂತಹ ಧಾರವಾಹಿಗಳಲ್ಲಿ ಲಕ್ಷ್ಮಿ ಧಾರವಾಹಿ ಕೂಡ ಒಂದು ಎನ್ನಬಹುದಾಗಿದೆ. ಅದರಲ್ಲಿ ಬರುವಂತಹ ವೆಂಕಿ ಪಾತ್ರಧಾರಿಯ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಿಮಗೆ ಮಾಹಿತಿಯನ್ನು ನೀಡುವುದಕ್ಕೆ ಹೊರಟಿದ್ದೇವೆ. ಕಿರುತೆರೆಯ ಧಾರವಾಹಿಯಲ್ಲಿ ಕಾಣಿಸಿಕೊಳ್ಳುವಂತಹ ಪಾತ್ರವನ್ನು ನಿರ್ವಹಿಸುವವರ ನಿಜ ಜೀವನದ ಬಗ್ಗೆ ತಿಳಿದುಕೊಳ್ಳುವಂತಹ ಕುತೂಹಲ ಪ್ರತಿಯೊಬ್ಬರಿಗೂ ಕೂಡ ಇದ್ದೇ ಇರುತ್ತದೆ ಹೀಗಾಗಿ ವೆಂಕಿಯ ರಿಯಲ್ ಲೈಫ್ ಸ್ಟೋರಿ ಬಗ್ಗೆ ಒಂದು ಝಲಕ್ ನೋಡೋಣ ಬನ್ನಿ.

ಲಕ್ಷ್ಮಿ ನಿವಾಸ ಧಾರವಾಹಿಯ ವೆಂಕಿ ಪಾತ್ರಧಾರಿ ಯಾರು?

ಶ್ರೀನಿವಾಸ ಹಾಗೂ ಲಕ್ಷ್ಮಿ ದಂಪತಿಗಳ ಸಾಕು ಮಗನ ಪಾತ್ರ ಆಗಿರುವಂತಹ ವೆಂಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ಈ ವ್ಯಕ್ತಿಯ ಹೆಸರು ಶಾಸ್ತ್ರಿಯಾಗಿದೆ. ರಂಗಭೂಮಿ ಹಿನ್ನೆಲೆ ಇರುವಂತಹ ಈ ಕಲಾವಿದ ತಮಗೆ ನೀಡಿರುವಂತಹ ಈ ಮೂಕ ಪಾತ್ರದ ಮೂಲಕ ಧಾರವಾಹಿಯ ಅಭಿಮಾನಿಗಳ ಮನಸ್ಸನ್ನು ಗೆಲ್ಲುವುದಕ್ಕೆ ಯಶಸ್ವಿಯಾಗಿದ್ದಾರೆ. ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಮಾತು ಬಾರದ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ವೆಂಕಿಯ ನಟನೆಯನ್ನು ಮಾಡುತ್ತಿರುವಂತಹ ಶಾಸ್ತ್ರಿಯವರಿಗೆ ನಿಜಕ್ಕೂ ಮಾತು ಬರವಲ್ವೇನೋ ಅನ್ನೋ ರೀತಿಯಲ್ಲಿ ನೈಜವಾಗಿ ನಟನೆ ಮಾಡುತ್ತಾರೆ. ಶಾಸ್ತ್ರಿಯವರು ನಿಜಕ್ಕೂ ಕೂಡ ತಮಗೆ ನೀಡಿರುವಂತಹ ಪಾತ್ರವನ್ನ ಪರಕಾಯ ಪ್ರವೇಶ ಮಾಡಿದಂತೆ ನಟಿಸಿ ತೋರಿಸುತ್ತಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಲಕ್ಷ್ಮಿ ನಿವಾಸ್ ಧಾರವಾಹಿ ಕಿಂತ ಮುಂಚೆ ಶಾಸ್ತ್ರಿ ಉಘೇ ಉಘೇ ಮಾದೇಶ್ವರ, ದಾಸ ಪುರಂದರ, ನಮ್ಮ ಲಚ್ಚಿ ಸೇರಿದಂತೆ ಸಾಕಷ್ಟು ಯಶಸ್ವಿ ಧಾರವಾಹಿಗಳಲ್ಲಿ ನಟಿಸುವ ಮೂಲಕವೂ ಕೂಡ ತಮ್ಮ ಕಿರುತೆರೆಯ ನಟನೆಯ ಅವಧಿಯಲ್ಲಿ ಉತ್ತಮವಾದ ಪರ್ಫಾರ್ಮೆನ್ಸ್ ತೋರ್ಪಡಿಸಿದ್ದಾರೆ. ಇನ್ನು ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ವೆಂಕಿ ಪಾತ್ರಧಾರಿ ಆಗಿ ಕೂಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡುತ್ತಿರುವ ಬಗ್ಗೆ ಕೂಡ ಶಾಸ್ತ್ರಿ ಹೇಳಿಕೊಂಡಿದ್ದಾರೆ.

ನಿರೀಕ್ಷೆಗೂ ಮೀರಿ ವೆಂಕಿ ಪಾತ್ರಧಾರಿ ಆಗಿ ಶಾಸ್ತ್ರಿ ರವರು ತಮ್ಮ ಉತ್ತಮ ನಟನೆಯನ್ನು ತೋರ್ಪಡಿಸುತ್ತಿರುವ ವಿಚಾರದ ಬಗ್ಗೆ ಕೂಡ ಕಿರುತೆರೆಯ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವುದರ ಬಗ್ಗೆ ಕೂಡ ಶಾಸ್ತ್ರಿ ಅವರಿಗೆ ತೃಪ್ತಿ ಇದೆ ಎಂಬುದನ್ನು ಖುದ್ದಾಗಿ ಹೇಳಿಕೊಂಡಿದ್ದಾರೆ. ಇದೇ ರೀತಿಯಲ್ಲಿ ಶಾಸ್ತ್ರಿ ಅವರಿಗೆ ಇನ್ನಷ್ಟು ಧಾರವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ತಮ್ಮ ನಟನೆಯ ಸಾಮರ್ಥ್ಯವನ್ನು ಸಾಬೀತುಪಡಿಸುವಂತಹ ಅವಕಾಶ ಇನ್ನಷ್ಟು ಹೆಚ್ಚಾಗಿ ಸಿಗಲಿ ಎಂಬುದಾಗಿ ಹಾರೈಸೋಣ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇವರು ಆಕ್ಟಿವ್ ಆಗಿದ್ದು ರಂಗಭೂಮಿ ಹಿನ್ನೆಲೆಯನ್ನು ಹೊಂದಿರುವಂತಹ ಈ ಕಲಾವಿದ ನಟನೆಯಲ್ಲಿ ಇರುವಂತಹ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಕಾರಣಕ್ಕಾಗಿ ಇಷ್ಟೊಂದು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ.

Comments are closed.