SBI FD: SBI ಫಿಕ್ಸೆಡ್ ಡೆಪಾಸಿಟ್ ಬಡ್ಡಿದರವನ್ನು ಹೆಚ್ಚಿಸಿದೆ; ಸರ್ವೋತ್ತಮ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಬಡ್ಡಿದರ ಎಷ್ಟಾಗಿದೆ ಗೊತ್ತಾ? ಹೂಡಿಕೆ ಮಾದೊಕೆ ಇದೇ ಬೆಸ್ಟ್ ಟೈಮ್!

SBI FD: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಅತ್ಯಂತ ದೊಡ್ಡ ಹಾಗೂ ಅತ್ಯಂತ ಹೆಚ್ಚಿನ ಗ್ರಾಹಕರನ್ನು ಹೊಂದಿರುವಂತಹ ಸಂಸ್ಥೆಯಾಗಿದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ತೋರ್ಪಡಿಸಿರುವ ರೀತಿಯಲ್ಲಿ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳ ಮೇಲಿನ ಬಡ್ಡಿದರವನ್ನು ಹೆಚ್ಚು ಗೊಳಿಸಲಾಗಿದೆ ಎಂಬುದಾಗಿ ತಿಳಿಸಿದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವರ್ಷದಲ್ಲಿ ಜಾರಿಗೆ ತಂದಿರುವ ಸರ್ವೋತ್ತಮ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಮೇಲೆ ಕೂಡ ಬಡ್ಡಿದರವನ್ನು ಹೆಚ್ಚಿಸಿರುವ ಮಾಹಿತಿ ತಿಳಿದು ಬಂದಿದ್ದು ಇದರಲ್ಲಿ ಹೂಡಿಕೆ ಮಾಡಿರುವಂತಹ ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿದರವನ್ನು ನಿರೀಕ್ಷೆ ಮಾಡಬಹುದಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸರ್ವೋತ್ತಮ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಬಡ್ಡಿ ದರದ ವಿವರ.

ಸರ್ವೋತ್ತಮ್ ಫಿಕ್ಸಿಡ್ ಡೆಪಾಸಿಟ್ ಯೋಜನೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದು ವರ್ಷದ ಅವಧಿಗೆ 7.10 ಪ್ರತಿಶತ ಬಡ್ಡಿ ದರ ಹಾಗೂ ಎರಡು ವರ್ಷದ ಅವಧಿಗೆ 7.4% ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಇನ್ನು ಪ್ರತಿಬಾರಿಯಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಕೂಡ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರದ ಭರವಸೆಯನ್ನು ಪೂರ್ತಿಗೊಳಿಸಿದೆ. ಈ ಬಡ್ಡಿ ದರದ ಮೇಲೆ ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿದರವನ್ನು ನೀಡಲಾಗುತ್ತದೆ.

ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಿರುವ ಮಾಹಿತಿಯ ಪ್ರಕಾರ ಒಂದು ವರ್ಷಕ್ಕೆ 30 ಬಿಪಿಎಸ್ ಕಾರ್ಡ್ ರೇಟ್ ಹಾಗೂ 40 ಬಿಪಿಎಸ್ ಕಾರ್ಡ್ ರೇಟ್ ಎರಡು ವರ್ಷಕ್ಕೆ ಎಂಬುದನ್ನು ಕೂಡ ಇಲ್ಲಿ ನಿಗದಿಪಡಿಸಲಾಗಿದೆ. ಸರ್ವೋತ್ತಮ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಭಾರತೀಯ ನಿವಾಸಿಗಳು ಹಣವನ್ನು ಹೂಡಿಕೆ ಮಾಡಬಹುದಾಗಿದೆ ಆದರೆ ಬೇರೆ ದೇಶದಲ್ಲಿ ವಾಸ ಮಾಡುತ್ತಿರುವಂತಹ ಭಾರತೀಯರಿಗೆ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವಂತಹ ಅವಕಾಶವನ್ನು ನೀಡಲಾಗುವುದಿಲ್ಲ. ಇನ್ನು ಈ ಯೋಜನೆಯಲ್ಲಿ ಸಮಯಕ್ಕಿಂತ ಮುಂಚೆ ಹಣವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಹಾಗೂ ಮೆಚುರಿಟಿ ಸಮಯದ ನಂತರ ಮತ್ತೆ ಈ ಯೋಜನೆಯನ್ನು ಮುಂದುವರಿಸುವಂತಹ ಅವಕಾಶ ಕೂಡ ಇಲ್ಲ ಎಂಬುದಾಗಿ ತಿಳಿದು ಬಂದಿದೆ. ಮೆಚುರಿಟಿ ಆಗಿರುವಂತಹ ಹಣವನ್ನು ಗ್ರಾಹಕರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಹಾಗೂ ಈ ಹಣದ ಮೇಲೆ ಟಿಡಿಎಸ್ ಟ್ಯಾಕ್ಸ್ ಅನ್ನು ನಿಯಮಗಳಿಗೆ ಅನುಸಾರವಾಗಿ ಕಡಿತಗೊಳಿಸಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಬಡ್ಡಿ ದರಗಳು!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್ ತನ್ನ ಗ್ರಾಹಕರಿಗೆ ಏಳು ದಿನದಿಂದ ಹತ್ತು ವರ್ಷಗಳವರೆಗಿನ ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಮೇಲೆ 3.50 ರಿಂದ 7.10% ಬಡ್ಡಿದರವನ್ನು ನಿಗದಿಪಡಿಸಿದೆ. ಇದರ ಜೊತೆಗೆ ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿ ದರವನ್ನು ಈ ಯೋಜನೆಗಳ ಮೇಲೆ ನೀಡಲಾಗುತ್ತದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಗೆ ಹೋಗಿ ನೀವು ಏಳು ದಿನಗಳಿಂದ 10 ವರ್ಷಗಳವರೆಗಿನ ಬೇರೆ ಬೇರೆ ಸಮಯಾವಧಿಗೆ ಎಷ್ಟು ಪ್ರತಿಶತ ಬಡ್ಡಿದರವನ್ನು ನಿಗದಿಪಡಿಸಲಾಗಿದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

Comments are closed.