Team India: ಗಂಭೀರ್ ಇಂಡಿಯಾ ಟೀಮ್ನ ಕೋಚ್ ಆಗೋ ಬಗ್ಗೆ ಐಪಿಎಲ್ ಓನರ್ ಹೇಳಿದ್ದೇನು? ಆದ್ರೆ ಅಭಿಮಾನಿಗಳ ಲೆಕ್ಕಾಚಾರವೇ ಬೇರೆ!

Team India: ಈಗಾಗಲೇ ಈ ಜೂನ್ ತಿಂಗಳು ರಾಹುಲ್ ದ್ರಾವಿಡ್ ರವರು ಟೀಮ್ ಇಂಡಿಯಾದ ಗೋಚಾಗಿ ಕಾರ್ಯನಿರ್ವಹಿಸಲು ಕೊನೆಯ ತಿಂಗಳು ಎಂಬುದಾಗಿ ನಿಮಗೆಲ್ಲರಿಗೂ ತಿಳಿದಿದ್ದು ಹೊಸದಾಗಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ಯಾರು ಆಯ್ಕೆ ಆಗಬಹುದು ಎನ್ನುವಂತಹ ಕುತೂಹಲಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಯೊಬ್ಬರಲ್ಲಿ ಕೂಡ ಇತ್ತು. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಓಡಾಡುತ್ತಿರುವಂತಹ ಸುದ್ದಿ ಹಾಗೂ ಮಾಹಿತಿಗಳ ಪ್ರಕಾರ ಭಾರತ ಕ್ರಿಕೆಟ್ ತಂಡದ 2011ರ ವಿಶ್ವಕಪ್ ಹೀರೋ ಹಾಗೂ ಸದ್ಯದ ಮಟ್ಟಿಗೆ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿರುವಂತಹ ಗೌತಮ್ ಗಂಭೀರ್ ರವರು ಈ ಬಾರಿ ಟೀಮ್ ಇಂಡಿಯಾದ ಕೋಚ್ ಆಗಿ ಆಯ್ಕೆಯಾಗುವಂತಹ ಸಾಧ್ಯತೆ ಹೆಚ್ಚಾಗಿದೆ ಅನ್ನುವಂತಹ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ.

ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಈ ಬಾರಿ ಚಾಂಪಿಯನ್ ಮಾಡೋ ವಿಚಾರದಲ್ಲಿ ಗೌತಮ್ ಗಂಭೀರ್ ರವರ ಕೊಡುಗೆ ಸಾಕಷ್ಟು ಮಹತ್ವದ್ದಾಗಿದೆ ಎಂಬುದನ್ನು ಕೂಡ ಇಡೀ ತಂಡವೇ ಒಪ್ಪಿಕೊಂಡಿದೆ. ಪ್ರಮುಖವಾಗಿ ಐಪಿಎಲ್ ತಂಡದ ಒಬ್ಬ ಟಾಪ್ ಲೆವೆಲ್ ಮಾಲೀಕರು ಗೌತಮ್ ಗಂಭೀರ್ ರವರು ಈ ಬಾರಿ ಕೋಚ್ ಆಗೋದು ಬಹುತೇಕ ಖಚಿತ ಎಂಬ ಮಾತುಗಳನ್ನು ಆಡಿರೋದು ಕೂಡ ಎಲ್ಲಾ ಗೊಂದಲಗಳನ್ನು ನಿವಾರಣೆ ಮಾಡುವಂತಹ ಕೆಲಸವನ್ನು ಮಾಡಿದೆ ಎಂದು ಹೇಳಬಹುದಾಗಿದೆ.

ಇನ್ನು ಗೌತಮ್ ಗಂಭೀರ್ ರವರು ಅತ್ಯಂತ ವೈಯಕ್ತಿಕ ಬಳಗದಲ್ಲಿ ತಾವು ರಾಹುಲ್ ದ್ರಾವಿಡ್ ಅವರಿಂದ ತೆರವಾಗಿರುವಂತಹ ಭಾರತೀಯ ಕ್ರಿಕೆಟ್ ತಂಡದ ಕೋಚ್ ಸ್ಥಾನವನ್ನು ತುಂಬುವುದಕ್ಕೆ ಸಾಕಷ್ಟು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಎನ್ನುವುದಕ್ಕೆ ಕೂಡ ಮಾಹಿತಿಗಳು ಲಭ್ಯವಾಗುತ್ತಿದೆ. ಹೀಗಾಗಿ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತ ಇದ್ದರೆ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಕ್ಯಾಂಪೈನ್ ನಂತರ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ಗೌತಮ್ ಗಂಭೀರ್ ರವರು ಅಧಿಕಾರ ಹಾಗೂ ಜವಾಬ್ದಾರಿಯನ್ನು ಸ್ವೀಕರಿಸುವುದು ಬಹುತೇಕ ನಿಶ್ಚಿತವಾಗಿದೆ ಎಂದು ಹೇಳಬಹುದಾಗಿದೆ.

ಸಾಕಷ್ಟು ಅಗ್ರೆಸ್ಸಿವ್ ಆಟಗಾರ ಆಗಿರುವಂತಹ ಗೌತಮ್ ಗಂಭೀರ್ ತಮ್ಮ ಕೋಚಿಂಗ್ನಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಇನ್ನಷ್ಟು ಹೆಚ್ಚಿನ ಸಾಧನೆಗಳನ್ನು ಮಾಡುವುದಕ್ಕೆ ಪ್ರೇರೇಪಣೆ ಆಗಲಿ ಹಾಗೂ ಅವರ ಅಧಿಕಾರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡ ಸಾಕಷ್ಟು ಐಸಿಸಿ ಟ್ರೋಫಿಗಳನ್ನು ಗೆದ್ದು ಸಾಧನೆಯ ಶಿಖರವನ್ನು ಏರಲಿ ಎಂಬುದಾಗಿ ಹಾರೈಸೋಣ. ಇನ್ನು ಗೌತಮ ಗಂಭೀರ ಅವರ ಆಯ್ಕೆಯ ಬಗ್ಗೆ ಕೂಡ ಕೆಲವರು ಪ್ರಶ್ನೆಯನ್ನು ಎತ್ತುವ ಕೆಲಸವನ್ನು ಮಾಡ್ತಾ ಇದ್ದಾರೆ. ಗೌತಮ್ ಗಂಭೀರ್ ರವರನ್ನು ಕೋಚ್ ಆಗಿ ಆಯ್ಕೆ ಮಾಡುವಂತಹ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ಕೂಡ ನೀವು ವ್ಯಕ್ತಪಡಿಸಬಹುದಾಗಿದೆ.

Comments are closed.