Tortoise Finger Ring: ಜೀವನದ ದಿಕ್ಕನ್ನೇ ಬದಲಾಯಿಸುತ್ತೆ ಈ ಪುಟ್ಟ ಉಂಗುರ; ಹಣ, ಆರೋಗ್ಯ ಯಾವ್ದಕ್ಕೂ ಕೊರತೆ ಇರಲ್ಲ ನೋಡಿ!

Tortoise Finger Ring: ನಮ್ಮ ಪುರಾಣ ಶಾಸ್ತ್ರಗಳಲ್ಲಿ ಸಾಕಷ್ಟು ಆಚರಣೆಗಳನ್ನು ಹಾಗೂ ವಿಚಾರಗಳನ್ನು ನಾವು ನಮ್ಮ ಅದೃಷ್ಟಕ್ಕಾಗಿ ಬಳಸಿಕೊಂಡು ಬಂದಿದ್ದೇವೆ. ಅದೇ ರೀತಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಹಾ ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿರುವಂತಹ ಕೂರ್ಮಾವತಾರ ಅಂದರೆ ಆಮೆ ಅವತಾರ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದ್ದಾಗಿದೆ. ಇನ್ನು ಆಮೆಯ ಉಂಗುರವನ್ನು ಧರಿಸುವುದು ಕೂಡ ಅತ್ಯಂತ ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಇದು ನೇರವಾಗಿ ನಿಮ್ಮ ಅದೃಷ್ಟ ಹಾಗೂ ಸಂಪತ್ತಿನ ವಿಚಾರಕ್ಕೆ ಸಂಬಂಧಪಟ್ಟಿದೆ ಎಂಬುದಾಗಿ ಹೇಳಲಾಗುತ್ತದೆ. ಫೆಂಗ್ ಶೂಯಿಯ ಪ್ರಕಾರ ಅದೃಷ್ಟ ಹಾಗೂ ಧೀರ್ಘಕಾಲದ ಆಯಸ್ಸು ಸಿದ್ಧಿಯಾಗಲು ಇದನ್ನು ಧರಿಸಬೇಕು ಎಂಬುದಾಗಿ ಪರಿಗಣಿಸಲಾಗುತ್ತದೆ. ಆದರೆ ಇದನ್ನು ಧರಿಸುವ ಮೊದಲು ಕೆಲವು ನಿಯಮಗಳನ್ನು ಪರಿಪಾಲಿಸಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ.

ಆಮೆ ಉಂಗುರವನ್ನು ಧರಿಸುವ ಸರಿಯಾದ ವಿಧಾನ!

ಆಮೆಯ ಉಂಗುರವನ್ನು ಸರಿಯಾಗಿ ಧರಿಸಿದರೆ ಮಾತ್ರ ಜೀವನದಲ್ಲಿ ನೀವು ಅಂದುಕೊಂಡಂತಹ ಸಕಾರಾತ್ಮಕ ಬದಲಾವಣೆಗಳು ವೇಗವಾಗಿ ನಡೆಯುತ್ತವೆ. ಇನ್ನು ಇದನ್ನು ತೋರು ಬೆರಳಿಗೆ ಧರಿಸುವುದು ಅತ್ಯಂತ ಶುಭ ಎಂಬುದಾಗಿ ವಾಸ್ತು ಶಾಸ್ತ್ರದ ಪ್ರಕಾರ ಪರಿಗಣಿಸಲಾಗುತ್ತದೆ. ಇನ್ನು ಆಮೆ ಉಂಗುರವನ್ನು ಧರಿಸುವುದು ಅಥವಾ ಖರೀದಿಸುವುದನ್ನ ಲಕ್ಷ್ಮಿಯ ಪ್ರಿಯವಾದ ದಿನವಾಗಿರುವಂತಹ ಶುಕ್ರವಾರದ ದಿನದಂದು ಮಾಡಿ.

ಆಮೆಯ ಮುಖ ಎನ್ನುವುದು ಧರಿಸಿರುವವರ ಕಡೆಗೆ ತಿರುಗಿ ಕೊಂಡಿರಬೇಕು. ಇನ್ನು ಇದನ್ನು ಪಂಚ ಧಾತು ಅಷ್ಟ ಧಾತು ಮತ್ತು ಬೆಳ್ಳಿಯ ಬಳಕೆಯ ಜೊತೆಗೆ ಮಾತ್ರ ಧರಿಸುವುದನ್ನು ಅಭ್ಯಾಸ ಮಾಡಿ ಬೇರೆ ಯಾವುದೇ ರೀತಿಯ ಲೋಹಗಳ ಜೊತೆಗೆ ಇದನ್ನು ಧರಿಸಬೇಡಿ ನಮಗೆ ಕೆಟ್ಟ ಪರಿಣಾಮ ಬೀರಬಹುದಾಗಿದೆ. ಇನ್ನು ಇದನ್ನು ಧರಿಸುವುದಕ್ಕಿಂತ ಮುಂಚೆ ಲಕ್ಷ್ಮೀದೇವಿಯ ಎದುರು ಇದರ ಪೂಜೆ ಮಾಡಿ ಹಸಿ ಹಾಲಿನಲ್ಲಿ ತೊಳೆದು ನಂತರ ಇದನ್ನು ದೇವರಲ್ಲಿ ನಿಮ್ಮ ಇಷ್ಟಾರ್ಥಗಳ ಬಗ್ಗೆ ಪ್ರಾರ್ಥನೆ ಮಾಡಿ ನಂತರ ಧರಿಸುವುದರಿಂದಾಗಿ ನಿಮಗೆ ಮನಸ್ಸಿನಲ್ಲಿರುವ ಪ್ರತಿಯೊಂದು ಇಷ್ಟಾರ್ಥಗಳು ಕೂಡ ನೆರವೇರುತ್ತವೆ. ಪದೇಪದೇ ಆನೆಯ ಉಂಗುರವನ್ನು ತೆಗೆಯುವುದಕ್ಕೆ ಹೋಗುವುದನ್ನ ಕೂಡ ನಿಲ್ಲಿಸಬೇಕಾಗಿರುತ್ತದೆ.

ಇದನ್ನು ಧರಿಸುವುದರಿಂದ ಆಗುವ ಪ್ರಯೋಜನಗಳು!

ಇದು ಒಂದು ವೇಳೆ ನೀವು ವ್ಯಾಪಾರವನ್ನು ಮಾಡ್ತಾ ಇದ್ರೆ ಅದರಲ್ಲಿ ಲಾಭ ತರುವ ಸಕಾರಾತ್ಮಕ ಪರಿಣಾಮಗಳನ್ನು ಕೂಡ ತರುತ್ತದೆ. ಸರಿಯಾದ ಮಾರ್ಗದಲ್ಲಿ ನಿಮ್ಮನ್ನು ಚಲಿಸುವಂತೆ ಮಾಡುತ್ತದೆ ಹಾಗೂ ಹಿಂದಿಗಿಂತಲೂ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವಂತೆ ಕೂಡ ಇದು ನಿಮ್ಮನ್ನ ಉತ್ತಮ ದಾರಿಗೆ ಕರೆದುಕೊಂಡು ಹೋಗುತ್ತದೆ. ಆಮೆಯ ಉಂಗುರ ವಿಷ್ಣುವಿನ ಅವತಾರ ಆಗಿರುವ ಕಾರಣದಿಂದಾಗಿ ಮಹಾ ವಿಷ್ಣು ಹಾಗು ಲಕ್ಷ್ಮಿ ಆಶೀರ್ವಾದ ಕೂಡ ನಿಮ್ಮ ಮೇಲೆ ಇರುತ್ತದೆ. ನಿಮ್ಮ ಜೀವನದಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ಕೂಡ ಇದು ತರುತ್ತದೆ.

Comments are closed.