Budh-Shukra Yuti:ಬುಧ ಶುಕ್ರರ ಸಂಯೋಗದಿಂದಾಗಿ ಈ ಮೂರು ರಾಶಿಯವರಿಗೆ ಜಾಕ್ಪಾಟ್; ಮುಟ್ಟಿದ್ದೇಲ್ಲಾ ಚಿನ್ನಾ ಆಗೋ ಟೈಮ್!

Budh-Shukra Yuti: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಒಂದಾಗುವುದರಿಂದಾಗಿ ಅದು 12 ರಾಶಿಯವರ ಮೇಲೆ ಕೂಡ ಪರಿಣಾಮ ಬೀರುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಇವತ್ತು ಅಂದರೆ ಮೇ 31 ರಂದು ಈಗಾಗಲೇ ವೃಷಭ ರಾಶಿಯಲ್ಲಿ ಶುಕ್ರ ಇದ್ದಾನೆ ಆದರೆ ಅದೇ ಸಮಯದಲ್ಲಿ ಈಗ ಗ್ರಹಗಳ ರಾಜಕುಮಾರ ಆಗಿರುವಂತಹ ಬುಧ ವೃಷಭ ರಾಶಿಗೆ ಕಾಲಿಟ್ಟಿದ್ದಾನೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಇಲ್ಲಿ ಅಪರೂಪದ ಸಂಯೋಗ ಉಂಟಾಗಲಿದೆ ಎಂಬುದಾಗಿ ತಿಳಿದು ಬಂದಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ಒಳ್ಳೆಯದಾಗಲಿದೆ. ಹಾಗಿದ್ದರೆ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ(Aries)

ಯಾವಾಗೆಲ್ಲ ಮೇಷ ರಾಶಿಯವರಿಗೆ ಹಣದ ಅವಶ್ಯಕತೆ ಇರುತ್ತದೆಯೋ ಆ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಮೇಷ ರಾಶಿಯವರ ಕೈಗೆ ಹಣ ಬಂದು ಸೇರಿದೆ ಅಷ್ಟರಮಟ್ಟಿಗೆ ಆರ್ಥಿಕ ಸಹಾಯ ಸಿಗಲಿದೆ. ಅರ್ಧಕ್ಕೆ ನಿಂತಿರುವಂತಹ ಕೆಲಸಗಳನ್ನು ಕೂಡ ಈ ಸಂದರ್ಭದಲ್ಲಿ ಮಾಡಿ ಮುಗಿಸಬಹುದಾಗಿದೆ. ದೊಡ್ಡ ಕಂಪನಿಯಲ್ಲಿ ಕೆಲಸ ಕೂಡ ಸಿಗೋದು ಬಹುತೇಕ ಖಚಿತವಾಗಿದೆ. ಈಗಾಗಲೇ ಇರುವಂತಹ ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಕೂಡ ಸಿಗಲಿದೆ. ವಿಶೇಷವಾಗಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಇರುವಂತಹ ಜನರು ಹಣವನ್ನು ದೊಡ್ಡ ಮಟ್ಟದಲ್ಲಿ ಸಂಪಾದನೆ ಮಾಡಬಹುದಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ಇರುವವರೆಗೂ ಕೂಡ ಕೈ ತುಂಬಾ ದೊಡ್ಡ ಮಟ್ಟದ ಲಾಭ ಬಂದು ಸೇರಲಿದೆ.

ಕನ್ಯಾ ರಾಶಿ(Virgo)

ಕನ್ಯಾ ರಾಶಿ ಅವರು ಮಾಡುವಂತ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಗೆಲುವನ್ನು ಖಂಡಿತ ಪಡೆಯುತ್ತಾರೆ. ವ್ಯಾಪಾರಿಗಳು ಈ ಸಂದರ್ಭದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆಯಲಿದ್ದಾರೆ ಹಾಗೂ ತಮ್ಮ ವ್ಯಾಪಾರವನ್ನು ವಿಸ್ತಾರ ಮಾಡುವಂತಹ ಯೋಚನೆ ಕೂಡ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕನ್ಯಾ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳ ಕಡೆಗೆ ಹಾಗೂ ದೇವರ ಶುಭ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ. ದೇಶ ವಿದೇಶ ಪ್ರವಾಸ ಮಾಡುವಂತಹ ಒಳ್ಳೆಯ ಕ್ಷಣಗಳನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ.

ಮಕರ ರಾಶಿ(Capricorn)

ಮಕರ ರಾಶಿಯವರ ದಾಂಪತ್ಯ ಜೀವನದಲ್ಲಿ ಈ ಸಂದರ್ಭದಲ್ಲಿ ಶಾಂತಿ ನೆಮ್ಮದಿ ನೆಲೆಸಲಿದೆ. ಹಣಕಾಸಿನ ಸಂಕಷ್ಟದಲ್ಲಿ ಇರುವಂತಹ ಮಕರ ರಾಶಿಯವರ ಬ್ಯಾಂಕಿನಲ್ಲಿ ಬ್ಯಾಲೆನ್ಸ್ ಈಗ ಹೆಚ್ಚು ವಂತಹ ಸಮಯ ಪ್ರಾರಂಭವಾಗಿದೆ. ತಮ್ಮ ಜೀವನದಲ್ಲಿ ಮಕರ ರಾಶಿಯವರು ಅಂದುಕೊಂಡಿರುವಂತಹ ಕನಸನ್ನು ನನಸು ಮಾಡುವಂತಹ ಅವಕಾಶ ಕೂಡ ದೊರಕಲಿದೆ. ಹೊಸ ಪ್ರಾಪರ್ಟಿ ಮನೆ ಕಾರನ್ನು ಖರೀದಿ ಮಾಡುವಂತಹ ಅವಕಾಶ ಕೂಡ ಮಕರ ರಾಶಿಯವರಿಗೆ ಕಂಡು ಬರಲಿದೆ. ಹೊಸ ವ್ಯಾಪಾರವನ್ನು ಪ್ರಾರಂಭ ಮಾಡಬೇಕು ಎನ್ನುವಂತಹ ಯೋಚನೆ ಮಕರ ರಾಶಿಯವರಲ್ಲಿ ಇದ್ದರೆ ಅದನ್ನು ಪ್ರಾರಂಭ ಮಾಡುವುದಕ್ಕೆ ಇದು ಹೇಳಿ ಮಾಡಿಸಿದ ಸಮಯ ಎಂದು ಹೇಳಬಹುದಾಗಿದೆ.

Comments are closed.