Phonepe: ಫೋನ್ ಪೇ ಯೂಸರ್ ಗಳಿಗೆ ಗುಡ್ ನ್ಯೂಸ್; ಇನ್ಮುಂದೆ ವಿದ್ಯಾರ್ಥಿಗಳಿಂದ ವಯಸ್ಸಾದವರ ವರೆಗೂ ಈ ಸೌಲಭ್ಯ ಪಡೆದುಕೊಳ್ಳಬಹುದು; ಏನದು ಗೊತ್ತಾ?

Phonepe: ನಮ್ಮ ಭಾರತ ದೇಶದ ಲೀಡಿಂಗ್ ಫಿನ್ಟೆಕ್ ಕಂಪನಿ ಆಗಿರುವಂತಹ ಫೋನ್ ಪೇ ನಿಂದ ಬಳಕೆದಾರರಿಗೆ ಸಾಕಷ್ಟು ದೊಡ್ಡ ಗುಡ್ ನ್ಯೂಸ್ ನೀಡುವುದಕ್ಕೆ ಹೊರಟಿದೆ ಎಂಬುದಾಗಿ ತಿಳಿದುಬಂದಿದ್ದು ಖಂಡಿತವಾಗಿ ಈ ಸುದ್ದಿ ಫೋನ್ ಪೇ ಬಳಕೆದಾರರಿಗೆ ನೆಮ್ಮದಿಯನ್ನು ನೀಡಲಿದೆ ಎಂದು ಹೇಳಬಹುದಾಗಿದೆ.

Phonepe ಗ್ರಾಹಕರಿಗೆ ನೀಡಿದೆ ನೋಡಿ ಗುಡ್ ನ್ಯೂಸ್!

ಇನ್ಮುಂದೆ ಕೇವಲ Phonepe ನಲ್ಲಿ ಹಣವನ್ನು ಟ್ರಾನ್ಸಾಕ್ಷನ್ ಮಾಡೋದು ಮಾತ್ರವಲ್ಲದೆ ಸಾಕಷ್ಟು ಸಾಲ ಸೌಲಭ್ಯಗಳನ್ನು ಕೂಡ ಇದು ತನ್ನ ಗ್ರಾಹಕರಿಗೆ ನೀಡುವುದಕ್ಕೆ ಹೊರಟಿದೆ ಎಂಬುದಾಗಿ ತಿಳಿದು ಬಂದಿದೆ. ಆರು ವಿಭಾಗದಲ್ಲಿ ಚೆನ್ನಾಗಿ ಗ್ರಾಹಕರಿಗೆ ಸಾಲವನ್ನು ನೀಡುವುದಕ್ಕೆ ಸಂಸ್ಥೆ ಹೊರಟಿದೆ. ಬೇರೆ ಕಂಪನಿಗಳ ಪಾರ್ಟ್ನರ್ ಶಿಪ್ ನಲ್ಲಿ Phonepe ಸಾಲವನ್ನು ನೀಡ್ತಾ ಇರೋದು. ಇಲ್ಲಿ ನೀವು ಚಿನ್ನ, ಬೈಕ್, ಹೋಮ್, ಕಾರ್ ಲೋನ್ ಗಳನ್ನು ಕೂಡ ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತಿದೆ. ಆಸ್ತಿಯ ಸಾಲವನ್ನು ಕೂಡ ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಕೆಲವು ಆರ್ಥಿಕ ಸಾಮರ್ಥ್ಯವನ್ನು ಕಡಿಮೆಯಾಗಿ ಹೊಂದಿರುವಂತಹ ವಿದ್ಯಾರ್ಥಿಗಳು ಶಿಕ್ಷಣ ಸಾಲವನ್ನು ಕೂಡ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಕಂಪನಿ ಹೇಳಿಕೊಂಡಿದೆ.

Phonepe ಅಪ್ಲಿಕೇಶನ್ ಪರಿಷತ್ತಿರುವಂತಹ ಈ ಸಾಲ ಸೌಲಭ್ಯಗಳನ್ನು ಪೂರೈಸುವುದಕ್ಕಾಗಿ ಸಾಕಷ್ಟು ಬ್ಯಾಂಕಿಂಗ್ ಸಂಸ್ಥೆಗಳು ಹಾಗೂ ಇನ್ನಿತರ ಫೈನಾನ್ಸಿಯಲ್ ಕಂಪನಿಗಳು ಕೂಡ Phonepe ಜೊತೆಗೆ ಇಲ್ಲಿ ಸೇರಿಕೊಂಡಿವೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಟಾಟಾ ಕ್ಯಾಪಿಟಲ್, ಎಲ್ ಅಂಡ್ ಟಿ ಫೈನಾನ್ಸ್, ಡಿಎಂಐ ಹೌಸಿಂಗ್ ಫೈನಾನ್ಸ್, ರುಪೇ, ಓಲ್ಡ್ ಮನಿ ಸೇರಿದಂತೆ ಒಟ್ಟಾರೆಯಾಗಿ 15 ಕಂಪನಿಗಳು Phonepe ನ ಅಪ್ಲಿಕೇಶನ್ ನಲ್ಲಿ ಲೋನ್ ಸೌಲಭ್ಯವನ್ನ ಬೇರೆ ಬೇರೆ ಕಂಪನಿಗಳಲ್ಲಿ ತಮ್ಮ ಆಯ್ಕೆಯ ಅನುಸಾರವಾಗಿ ಪಡೆದುಕೊಳ್ಳಬಹುದಾಗಿದೆ.

ಡಿಜಿಟಲ್ ವಿಧಾನದ ಮೂಲಕವೇ ಹಣವನ್ನ ಪಡೆದುಕೊಳ್ಳಬಹುದಾಗಿರುವುದರಿಂದಾಗಿ ಗ್ರಾಹಕರು ಈ ಸಮಯದಲ್ಲಿ ಹೆಚ್ಚಾಗಿ ತಿರುಗಾಟ ನಡೆಸುವ ಅವಶ್ಯಕತೆ ಇರುವುದಿಲ್ಲ. ಇನ್ನು 5 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಅನ್ನು ಕೂಡ ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಅರ್ಹತಾ ಮಾಪನದ ಒಳಗೆ ಇದ್ದರೆ ಸುಲಭವಾಗಿ ನೀವು ಕೂಡ ಇಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಮುಂದೆ ನೀವು ಸಾಲ ಪಡೆದುಕೊಳ್ಳುವುದಕ್ಕೆ ಬ್ಯಾಂಕ್ ಹಾಗೂ ಬೇರೆ ಬೇರೆ ರೀತಿಯ ಫೈನಾನ್ಸಿಯಲ್ ಸಂಸ್ಥೆಗಳ ಕಚೇರಿಗೆ ತಿರುಗಾಡಬೇಕಾದ ಅಗತ್ಯ ಇರುವುದಿಲ್ಲ. ಕೇವಲ ನಿಮ್ಮ ಮೊಬೈಲ್ ಫೋನ್ನಲ್ಲಿರುವಂತಹ ಫೋನ್ ಪೇ ಅಪ್ಲಿಕೇಶನ್ ಮೂಲಕ ನಿಮಗೆ ಬೇಕಾಗಿರುವಂತಹ ಕ್ಯಾಟಗರಿಯಲ್ಲಿ ಅಗತ್ಯವಾಗಿ ಬೇಕಾಗಿರುವಂತಹ ದಾಖಲೆಗಳನ್ನು ನೀಡುವ ಮೂಲಕ ಕೆಲವೊಂದು ಪ್ರಕ್ರಿಯೆಗಳನ್ನು ಪೂರೈಸಿ, ಕೆಲವೇ ಸಮಯದಲ್ಲಿ ಬೇಕಾಗಿರುವಂತಹ ಲೋನ್ ಹಣವನ್ನು ಪಡೆದುಕೊಳ್ಳಬಹುದಾದಂತಹ ಅವಕಾಶವನ್ನು ಮಾಡಿಕೊಟ್ಟಿದೆ.

Comments are closed.