Sachin Tendulkar: ಸಚಿನ್ ತೆಂಡೂಲ್ಕರ್, ನನ್ನಾಣೆ ನಾನ್ ಈ ಜಾಹಿರಾತು ಪ್ರಚಾರ ಮಾತ್ರ ಮಾಡಲ್ಲ ಅಂದ್ರಂತೆ; ಅದಿಕ್ಕೆ ಅನ್ನೋದು ಅವ್ರನ್ ದೇವ್ರು ಅಂತ!

Sachin Tendulkar: ಕ್ರಿಕೆಟ್ ಕ್ಷೇತ್ರದ ಮಾತುಕತೆ ಬಂದಾಗ ಸಚಿನ್ ತೆಂಡೂಲ್ಕರ್ ಅವರ ವಿಚಾರ ಖಂಡಿತವಾಗಿ ಬಂದೇ ಬರುತ್ತದೆ. ಅಷ್ಟಿಲ್ಲದೇ ಅವರನ್ನ ಕ್ರಿಕೆಟ್ ದೇವರು ಅಂತ ಕರೆಯುತ್ತಾರಾ ನೀವೇ ಹೇಳಿ. ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಹೆಚ್ಚು ರನ್ ಬಾರಿಸಿರುವ ಅಂತಹ ದಾಖಲೆಯನ್ನು ಹೊಂದಿರುವಂತಹ ಸಚಿನ್ ತೆಂಡೂಲ್ಕರ್ ರವರು ನಿಜಕ್ಕೂ ಕೂಡ ಭಾರತ ದೇಶದ ಹೆಮ್ಮೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಿಕೊಳ್ಳಬಹುದಾಗಿದೆ. ಕೇವಲ ಕ್ರಿಕೆಟ್ ಬಗ್ಗೆ ಮಾತಲ್ಲದೇ ಅವರ ಗುಣ ನಡತೆಯ ವಿಚಾರದ ಬಗ್ಗೆ ಕೂಡ ಮಾತನಾಡುವುದಾದರೆ ಬೇರೆಯವರಿಗೆ ಮಾದರಿಯಾಗುವ ರೀತಿಯಲ್ಲಿ ಇರುತ್ತಾರೆ.

ಈ ಕೆಲಸ ಮಾಡೋದಿಲ್ಲ ಅಂತ ತಮ್ಮ ತಂದೆಗೆ ಪ್ರಮಾಣ ಮಾಡಿದ್ದಾರೆ ಸಚಿನ್ ತೆಂಡೂಲ್ಕರ್!

ಇತ್ತೀಚಿನ ದಿನಗಳಲ್ಲಿ ನೀವು ಸಾಕಷ್ಟು ಜಾಹೀರಾತುಗಳಲ್ಲಿ ನೋಡಬಹುದು ಕಪಿಲ್ ದೇವ್ ಸುನಿಲ್ ಗವಾಸ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ರವರಂತಹ ಖ್ಯಾತ ಕ್ರಿಕೆಟಿಗರು ತಂಬಾಕು ಜಾಹೀರಾತುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ಜಾಹೀರಾತಿಗಳಲ್ಲಿ ಕಾಣಿಸಿಕೊಳ್ಳುವುದಕ್ಕಾಗಿ ಸೆಲಬ್ರೆಟಿಗಳಿಗೆ ಕಂಪನಿಗಳು ಹೆಚ್ಚಿನ ಹಣವನ್ನು ನೀಡುತ್ತಾರೆ. ಆದರೆ ಸಚಿನ್ ತೆಂಡೂಲ್ಕರ್ ಅವರ ವಿಚಾರಕ್ಕೆ ಬರೋದಾದ್ರೆ ಇವತ್ತಿನವರೆಗೂ ಕೂಡ ಸಚಿನ್ ತೆಂಡೂಲ್ಕರ್ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿಲ್ಲ ಅನ್ನೋದು ವಿಶೇಷವಾಗಿದೆ. ಇದರ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಕೂಡ ಇದ್ದು ಬನ್ನಿ ಅದರ ಬಗ್ಗೆ ತಿಳಿದುಕೊಳ್ಳೋಣ.

ಕ್ರಿಕೆಟ್ ನಲ್ಲಿ ಆರಂಭಿಕ ದಿನಗಳಲ್ಲಿಯೇ ಜನಪ್ರಿಯತೆ ಪಡೆದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹುಡುಕಿಕೊಂಡು ಸಾಕಷ್ಟು ತಂಬಾಕು ಜಾಹಿರಾತುಗಳು ಕೂಡ ಬಂದಿದ್ವು. ಆದರೆ ಸಚಿನ್ ತೆಂಡೂಲ್ಕರ್ ಅವರಿಗೆ ಅವರ ತಂದೆ ಈ ರೀತಿಯ ಯಾವುದೇ ಜಾಹೀರಾತಿಗಳನ್ನು ಮಾಡೋದಕ್ಕೆ ಹೋಗಬೇಡ ಎಂಬುದಾಗಿ ಆಣೆ ಪಡೆದುಕೊಂಡಿದ್ರಂತೆ. ನೀನು ಸಾಕಷ್ಟು ಜನರಿಗೆ ರೋಲ್ ಮಾಡೆಲ್, ನೀನು ಮಾಡುವಂತಹ ಕೆಲಸವನ್ನೇ ಅವರು ಕೂಡ ಹಿಂಬಾಲಿಸುತ್ತಾರೆ. ಹೀಗಾಗಿ ಈ ರೀತಿ ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಹೋಗಬೇಡ ಎನ್ನುವುದಾಗಿ ನನ್ನ ತಂದೆ ಹೇಳಿದರು ಅನ್ನೋದಾಗಿ ಸಚಿನ್ ತೆಂಡೂಲ್ಕರ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಈ ರೀತಿಯಾಗಿ ಸಾಕಷ್ಟು ಆಫರ್ ಗಳು ಬಂದರೂ ಕೂಡ ನಾನು ಇದುವರೆಗೂ ಒಪ್ಪಿಕೊಂಡಿಲ್ಲ ಹಾಗೂ ಒಪ್ಪಿಕೊಳ್ಳುವುದಿಲ್ಲ ಇದು ನಾನು ನನ್ನ ತಂದೆಗೆ ನೀಡಿರುವಂತಹ ಪ್ರಮಾಣವಾಗಿದೆ ಎಂಬುದಾಗಿ ಸಚಿನ್ ಹೇಳಿಕೊಂಡಿದ್ದಾರೆ.

ಈ ಮೂಲಕ ಸಚಿನ್ ತೆಂಡೂಲ್ಕರ್ ರವರನ್ನು ಕ್ರಿಕೆಟ್ ಲೋಕದಲ್ಲಿ ಕ್ರಿಕೆಟ್ ಸೂಪರ್ ಸ್ಟಾರ್ ಗಳು ಕೂಡ ಯಾಕೆ ರೋಲ್ ಮಾಡೆಲ್ ರೀತಿಯಲ್ಲಿ ಕಾಣುತ್ತಾರೆ ಅನ್ನೋದನ್ನ ನೀವು ಅರ್ಥ ಮಾಡಿಕೊಳ್ಳಬಹುದಾಗಿದೆ. ಕ್ರಿಕೆಟ್ ಗಾಡ್ ಯಾವತ್ತಿದ್ರೂ ತನ್ನ ಅನುಯಾಯಿಗಳಿಗೆ ಒಳ್ಳೆಯ ಮಾರ್ಗದರ್ಶನವನ್ನು ನೀಡ್ತಾರೆ ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.

Comments are closed.