Solar Subsidy: ನೀವೂ ಹಾಕ್ಸಿ ಸೋಲಾರ್ ರೂಫ್ ಟಾಪ್; ಗೃಹಜ್ಯೋತಿ ಯೋಜನೆ ಪ್ರೀ ವಿದ್ಯುತ್ ಸಿಗದವರಿಗೆ ಸರ್ಕಾರದ ಬಂಪರ್ ಆಫರ್!

Solar Subsidy: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವಂತಹ ವಿದ್ಯುತ್ ಬಳಕೆಯ ದೃಷ್ಟಿಯಲ್ಲಿ ಸೌರ ಫಲಕಗಳನ್ನು ಅಳವಡಿಸಿಕೊಂಡು ಅದರಿಂದ ವಿದ್ಯುತ್ ಬಳಕೆ ಮಾಡುವಂತಹ ಕ್ರಮ ಎಲ್ಲಾ ಕಡೆ ಹೆಚ್ಚಾಗಿದ್ದು ಅಳವಡಿಕೆ ಮಾಡುವಂತಹ ಪ್ರಕ್ರಿಯೆ ಪ್ರಾರಂಭವಾಗಲು ಹೊರಟಿದೆ. ಸೋಲಾರ್ ರೂಫ್ ಟಾಪ್ ಗಳನ್ನು ಅಳವಡಿಸುವ ಬಗ್ಗೆ ಗೈಡ್ಲೈನ್ಸ್ ಗಳನ್ನು ಕೂಡ ರಾಜ್ಯದಲ್ಲಿ ಹೊರಡಿಸಲಾಗುತ್ತಿದೆ. ಸೋಲಾರ್ ಫಲಕಗಳನ್ನು ಬಳಸುವ ಬಗ್ಗೆ ವಿದ್ಯುತ್ ಇಲಾಖೆಗಳು ಕೆಲವೊಂದು ಸೂಚನೆಗಳನ್ನು ಕೂಡ ನೀಡಿದ್ದು ಬನ್ನಿ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸೋಲಾರ್ ರೂಫ್ ಟಾಪ್ ಯೋಜನೆಗೆ ಹೊಸ ಮಾರ್ಗಸೂಚಿ ಜಾರಿ!

ಸೋಲಾರ್ ರೂಫ್ ಟಾಪ್ ಯೋಜನೆಯನ್ನು ವೇಗವಾಗಿ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ಕೂಡ ವಿದ್ಯುತ್ ಇಲಾಖೆಗಳು ಜಾರಿಗೆ ತಂದಿದೆ. ಇದಕ್ಕಾಗಿ ರಚಿಸಿರುವಂತಹ ಸಮಿತಿಗೆ ಇದರ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ. ವಿದ್ಯುತ್ ಸಂಸ್ಥೆಗಳು ಈ ವರದಿಯ ಆಧಾರದಲ್ಲಿ ಹೊರತರಲಾಗಿರುವಂತಹ ಮಾರ್ಗಸೂಚಿಗಳ ಆಧಾರದಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಸೋಲಾರ್ ರೂಫ್ ಟಾಪ್ ಬಗ್ಗೆ ಜನಸಾಮಾನ್ಯರಲ್ಲಿ ಪ್ರತಿಯೊಂದು ವಿದ್ಯುತ್ ಸಂಸ್ಥೆಗಳು ಕೂಡ ಜಾಗೃತಿಯನ್ನು ಮೂಡಿಸುವಂತಹ ಕೆಲಸವನ್ನು ಮಾಡಬೇಕು ಹಾಗೂ ಅವುಗಳ ಉಪಯೋಗವನ್ನು ತಿಳಿಯುವಂತೆ ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗಿದೆ.

1kv -3kv ಹೊರಗೆ ಇರುವಂತಹ ಸೋಲಾರ್ ಪ್ಲಾಂಟ್ ಗಳನ್ನು ಬಳಸಿಕೊಳ್ಳುವುದಕ್ಕೆ ಹೆಚ್ಚಾಗಿ ಉತ್ತೇಜಿಸಲಾಗುತ್ತಿದ್ದು ಇದರಿಂದಾಗಿ ಗ್ರಾಹಕರಿಗೆ ಕೂಡ ಲಾಭ ಆಗಲಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಇದನ್ನು ಅಳವಡಿಸಲು ಅರ್ಜಿ ಪ್ರಕ್ರಿಯೆಗಾಗಿ ಅಧಿಕೃತ ವೆಬ್ಸೈಟ್ ಅನ್ನು ಕೂಡ ರಚನೆ ಮಾಡುವುದಕ್ಕಾಗಿ ಸೂಚಿಸಲಾಗಿದೆ. ಮೇ 31 ರಿಂದ ಆರಂಭವಾಗುವಂತೆ ಅರ್ಜಿ ಪ್ರಕ್ರಿಯೆ, ವಿದ್ಯುತ್ ಖರೀದಿ ಅಗ್ರಿಮೆಂಟ್, ಸೌರ ಬಿಲ್ಲಿಂಗ್ ಸೇರಿದಂತೆ ಪ್ರತಿಯೊಂದು ಪ್ರಕ್ರಿಯೆಗಳನ್ನು ಕೂಡ ನಿಗದಿಪಡಿಸಲಾಗಿದೆ. ಇನ್ನು ಅನುಮತಿ ನೀಡಿದ ತಕ್ಷಣವೇ ಇದನ್ನು ಜಾರಿಗೊಳಿಸಬೇಕಾಗಿದೆ ಇಲ್ಲವಾದಲ್ಲಿ ವಿದ್ಯುತ್ ಸಂಸ್ಥೆಯ ಸಿಬ್ಬಂದಿಗಳ ಮೇಲೆ ಕೂಡ ಕ್ರಮವನ್ನು ಜಾರಿಗೊಳಿಸಲಾಗುತ್ತದೆ. ಮೀಟರ್ ಪರೀಕ್ಷೆ ಒಂದೇ ಸ್ಥಳದಲ್ಲಿ ನಡೆಯಬೇಕು ಹಾಗೂ ಪ್ರತಿಯೊಂದು ವಿದ್ಯುತ್ ಸಂಸ್ಥೆಗಳು ಪಿಪಿಎ ಮಾದರಿಯ ಏಕರೂಪದ ವಿಧಾನವನ್ನು ಅನುಸರಿಸಬೇಕಾಗಿದೆ.

ಗೃಹ ಜ್ಯೋತಿ ಯೋಜನೆಯನ್ನು ಹೊಂದಿಲ್ಲದ ಗ್ರಾಹಕರು ಟಾರ್ಗೆಟ್!

ಇತ್ತೀಚಿಗಷ್ಟೇ ಪಿಎಂ ಸೂರ್ಯ ಘರ್ ಯೋಜನೆ ಅಡಿಯಲ್ಲಿ 12,061 ಅರ್ಜಿಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ ಎನ್ನುವಂತಹ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಇನ್ನು ಇದಕ್ಕೆ ಅರ್ಜಿ ಸಲ್ಲಿಸಲು ಸಮಸ್ಯೆ ಎದುರಿಸುತ್ತಿರುವವರ ಸಮಸ್ಯೆನ ನಿವಾರಿಸಲು ಸಂಬಂಧ ಪಟ್ಟ ಇಲಾಖೆಗಳಿಗೆ ಈಗಾಗಲೇ ಸೂಚಿಸಲಾಗಿದೆ. ಇನ್ನು ಈ ಯೋಜನೆ ಅಡಿಯಲ್ಲಿ ಸೌರ ಚಾವಣಿಗಳನ್ನ ಅಳವಡಿಸುವುದಕ್ಕಾಗಿ ಗೃಹಜ್ಯೋತಿ ಯೋಜನೆಯನ್ನು ಹೊಂದಿರದೆ ಇರುವಂತಹ ಗ್ರಾಹಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವಂತಹ ಮಾಹಿತಿಯನ್ನು ಕೂಡ ಸಂಸ್ಥೆಯ ಪ್ರಮುಖ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಈ ಯೋಜನೆ ಅಡಿಯಲ್ಲಿ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಎಲ್ಲಾ ವಿದ್ಯುತ್ ಇಲಾಖೆಗಳು ಸಾಮಾನ್ಯ ಜನರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಹಾಗೂ ಇದರಿಂದಾಗಿ ವಿದ್ಯುತ್ ಬಳಕೆಯ ಖರ್ಚು ಕೂಡ ಕಡಿಮೆಯಾಗುತ್ತದೆ ಹಾಗೂ ದಕ್ಷ ವಿದ್ಯುತ್ ಪೂರೈಕೆ ಕೂಡ ನಡೆಯುತ್ತದೆ.

Comments are closed.