Housing Scheme: ಮನೆ ಇಲ್ಲದೆ ಇರುವವರಿಗೆ ಗುಡ್ ನ್ಯೂಸ್, ಸರ್ಕಾರವೇ ನೀಡ್ತಾ ಇದೆ ಉಚಿತ ಮನೆ; ಅರ್ಜಿ ಹಾಕೋಕೆ ಈ ಡಾಕ್ಯುಮೆಂಟ್ಸ್ ಬೇಕು!

Housing Scheme: ನಮ್ಮಲ್ಲಿ ಇವತ್ತಿಗೂ ಕೂಡ ಸಾಕಷ್ಟು ಜನರು ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವಂತಹ ಉದಾಹರಣೆಗಳು ಕೂಡ ನಮ್ಮ ಕಣ್ಣ ಮುಂದೆ ಇವೆ. ಅಂಥವರು ಇನ್ಮುಂದೆ ಯೋಚನೆ ಮಾಡಬೇಕಾದ ಅಗತ್ಯವಿಲ್ಲ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಉಚಿತ ಮನೆಗಳನ್ನು ನೀಡುವುದಕ್ಕೆ ಸಿದ್ಧವಾಗಿದೆ. ರಾಜ್ಯ ಸರ್ಕಾರದ ಈ ಯೋಜನೆಯ ಬಗ್ಗೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ರಾಜೀವ್ ಗಾಂಧಿ ವಸತಿ ಯೋಜನೆ!

ಇಂದಿನ ಸಮಯದಲ್ಲಿ ಒಂದು ಸ್ವಂತವಾದ ಮನೆಯನ್ನು ಹೊಂದುವುದು ಅಷ್ಟೊಂದು ಸುಲಭದ ಮಾತಲ್ಲ. ಮನೆಯನ್ನು ಕಟ್ಟುವುದಕ್ಕೆ ಬೇಕಾಗುವಂತಹ ವಸ್ತುಗಳ ಬೆಲೆ ಏರಿಕೆ ಕೂಡ ಆಗಿರುವುದು ಇದರಲ್ಲಿ ಪ್ರಮುಖ ವಿಚಾರವಾಗಿ ಕಾಣಿಸಿಕೊಳ್ಳುತ್ತದೆ. ಇನ್ನು ಒಂದು ಮನೆಯ ಕಟ್ಟಬೇಕು ಅಂದ್ರೆ ಸಾಕಷ್ಟು ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಈ ಹಣವನ್ನು ಖರ್ಚು ಮಾಡುವುದಕ್ಕೆ ಯಾವುದೇ ಸಾಮಾನ್ಯ ವ್ಯಕ್ತಿ ಇಂದ ಸಾಧ್ಯವಾಗುವುದಿಲ್ಲ ಅದಕ್ಕಾಗಿ ಬ್ಯಾಂಕಿನ ಲೋನ್ ಮೊರೆ ಹೋಗಬೇಕಾಗುತ್ತದೆ.

ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರ ಈಗ ಆರ್ಥಿಕವಾಗಿ ಹಿಂದುಳಿದಿರುವಂತಹ ಬಡವರ್ಗದ ಜನರಿಗೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಉಚಿತ ಮನೆಯನ್ನು ಕಟ್ಟಿಸಿ ಕೊಡುವಂತಹ ಕೆಲಸಕ್ಕೆ ಮುಂದಾಗಿದೆ. ಒಂದು ವೇಳೆ ನೀವು ಕೂಡ ಆರ್ಥಿಕವಾಗಿ ಹಿಂದುಳಿದಿರುವಂತಹ ವರ್ಗದ ಜನರಾಗಿದ್ದರೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ನೀವು ಕೂಡ ಉಚಿತ ಮನೆಯನ್ನು ಪಡೆದುಕೊಳ್ಳಬಹುದು.

ಬೇಕಾಗಿರುವ ಡಾಕ್ಯುಮೆಂಟ್ಸ್!

  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಡೀಟೇಲ್ಸ್
  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ವಸತಿ ಡೀಟೇಲ್ಸ್

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಕೇವಲ ಮಹಿಳೆಯರಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ.
  • ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ಆದಾಯ 32000 ಗಳಿಗಿಂತ ಕಡಿಮೆ ಆಗಿರಬೇಕು ಅನ್ನೋದನ್ನ ಇಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
  • ಮನೆ ಇರದೇ ಇರುವಂತಹ ಖಾಲಿ ಜಾಗವನ್ನು ಹೊಂದಿರುವಂತಹ ಹಾಗೂ ಖಾತೆಯನ್ನು ಹೊಂದಿರುವಂತಹವರಿಗೆ ಮಾತ್ರ ಈ ಯೋಜನೆ ಲಭ್ಯವಿದೆ.
  • ಇಲಾಖೆಯಿಂದ ಇದಕ್ಕಿಂತ ಮುಂಚೆ ಈ ರೀತಿಯ ಯಾವುದೇ ರೀತಿಯ ವಸತಿ ಯೋಜನೆಯ ನೀವು ಪಡೆಯುವ ಹಾಗಿರುವುದಿಲ್ಲ.

ಇವಿಷ್ಟು ದಾಖಲೆಗಳನ್ನು ಹಾಗೂ ಅರ್ಹತೆಗಳನ್ನು ನೀವು ಹೊಂದಿದ್ದರೆ ನೀವು ರಾಜೀವ್ ಗಾಂಧಿ ವಸತಿ ಯೋಜನೆ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಥವಾ ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲಿಂದ ಸಂಬಂಧಪಟ್ಟಂತಹ ಅಧಿಕಾರಿಗಳು ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಪ್ರೊಸೆಸ್ ಮಾಡುವಂತಹ ಕೆಲಸವನ್ನು ಮಾಡ್ತಾರೆ ಹಾಗೂ ಅರ್ಹ ಜನರಿಗೆ ಮಾತ್ರ ಇದನ್ನ ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ.

Comments are closed.