kannada Serials: ಈ ವಾರ ಧಾರವಾಹಿಗಳಲ್ಲಿ ಟಾಪ್ 5 ಟಿ ಆರ್ ಪಿ ಪಡೆದುಕೊಂಡಿರುವ ಧಾರವಾಹಿಗಳು; ನಿಮ್ಮ ನೆಚ್ಚಿನ ದಾರಾವಾಹಿಗೆ ಎಷ್ತನೇ ಸ್ಥಾನ ನೋಡಿ!

kannada Serials: ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆಯ ಧಾರವಾಹಿಗಳು ಸಾಕಷ್ಟು ವೇಗವಾಗಿ ಕನ್ನಡದ ಪ್ರೇಕ್ಷಕರನ್ನು ಕಳೆದುಕೊಳ್ಳುವುದಕ್ಕೆ ಯಶಸ್ವಿಯಾಗುತ್ತಿದ್ದು ದಿನೇ ದಿನೇ ಧಾರವಾಹಿಗಳ ಪ್ರೇಕ್ಷಕರ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ. ವಿಶೇಷವಾಗಿ ನಾವು ಮಾತನಾಡುವುದಕ್ಕೆ ಹೊರಟಿರೋದು ಈ ವಾರ ಟಿ ಆರ್ ಪಿ ವಿಚಾರದಲ್ಲಿ ಮೊದಲ 5 ಸ್ಥಾನಗಳನ್ನು ಪಡೆದುಕೊಂಡಿರುವಂತಹ ಕನ್ನಡ ಕಿರುತೆರೆಯ ಧಾರವಾಹಿಗಳು ಯಾವುವು ಎಂಬುದನ್ನು ನಿಮಗೆ ತಿಳಿಸಲು. ಹಾಗಿದ್ರೆ ಬನ್ನಿ ಯಾವುವು ಎಂಬುದನ್ನು ತಿಳಿಯೋಣ.

  • ಐದನೇ ಸ್ಥಾನದಲ್ಲಿ ಇರುವಂತಹ ಧಾರವಾಹಿ ಸೀತಾರಾಮ ಧಾರವಾಹಿ. ಈ ಧಾರವಾಹಿಯಲ್ಲಿ ಸದ್ಯಕ್ಕೆ ಸೀತ ಹಾಗೂ ರಾಮನ ಎಂಗೇಜ್ಮೆಂಟ್ ನಡೆದಿದೆ. ಇನ್ನೊಂದು ಕಡೆ ಅಂಜಲಿ ಗೆ ರಾಮು ತಾಳಿ ಕಟ್ಟಿದ್ದಾನೆ ಎಂಬುದಾಗಿ ಕೂಡ ರುದ್ರ ಪ್ರತಾಪ್ ಹೇಳಿಕೊಂಡಿದ್ದಾನೆ. ಭಾರ್ಗವಿಗೂ ಕೂಡ ಈ ಮದುವೆ ಬಗ್ಗೆ ಸಾಕಷ್ಟು ಅಂಜಿಕೆ ಮನಸ್ಸಿನಲ್ಲಿ ಕಾಡುತ್ತಿದೆ. ಮುಂದಿನ ಸಂಚಿಕೆಯಲ್ಲಿ ಏನಾಗುತ್ತದೆ ಅಂತ ಕಾದು ನೋಡಬೇಕಾಗಿದೆ.
  • ಜೀ ಕನ್ನಡ ವಾಹಿನಿಯ ಮತ್ತೊಂದು ಸೂಪರ್ ಹಿಟ್ ಧಾರವಾಹಿ ಆಗಿರುವಂತಹ ಅಮೃತದಾರೆ ನಾಲ್ಕನೇ ಸ್ಥಾನದಲ್ಲಿದೆ. ಅಮೃತದಾರೆ ಧಾರವಾಹಿಯಲ್ಲಿ ಕಥೆಯ ಬಗ್ಗೆ ಮಾತನಾಡುವುದಾದರೆ ಭೂಮಿಕ ಹಾಗೂ ಗೌತಮಿ ಇಬ್ಬರು ಕೂಡ ಒಂದಾಗಬಾರದು ಎನ್ನುವ ಕಾರಣಕ್ಕಾಗಿ ಶಕುಂತಲಾ ಸಾಕಾಷ್ಟು ಪ್ರಯತ್ನ ಮಾಡ್ತಾ ಇದ್ರು ಕೂಡ ಪ್ರತಿಯೊಂದು ಪ್ರಯತ್ನ ಕೂಡ ವಿಫಲವಾಗುತ್ತಿದೆ. ಭೂಮಿಕ ಹಾಗೂ ಗೌತಮ್ ನಡುವಿನ ಪ್ರೀತಿ ಮಾತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದಕ್ಕೆ ಯಶಸ್ವಿಯಾಗುತ್ತಿದೆ ಎಂದು ಹೇಳಬಹುದು.
  • ಇತ್ತೀಚಿಗೆ ಅಷ್ಟೇ ಪ್ರಾರಂಭ ಆಗಿರುವಂತಹ ಜೀ ಕನ್ನಡ ವಾಹಿನಿಯ ಮತ್ತೊಂದು ಧಾರವಾಹಿ ಆಗಿರುವಂತಹ ಶ್ರಾವಣಿ ಸುಬ್ರಮಣ್ಯ ಮೂರನೇ ಸ್ಥಾನದಲ್ಲಿದೆ. ಶ್ರಾವಣಿ ತನ್ನ ಮಾತನ್ನು ಅಪ್ಪ ವೀರೇಂದ್ರ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾನೆ ಎನ್ನುವ ಖುಷಿಯಲ್ಲಿ ಇದ್ದಾಳೆ. ಇದೇ ಕಾರಣಕ್ಕಾಗಿ ವೀರೇಂದ್ರ ಕೆಲಸಗಾರರಿಗೂ ಕೂಡ ಬೋನಸ್ ಕೊಡೋದಕ್ಕೆ ನಿರ್ಧರಿಸಿದ್ದಾನೆ. ಹೊಸದಾಗಿ ಪ್ರಾರಂಭವಾಗಿದ್ದರೂ ಕೂಡ ಶ್ರಾವಣಿ ಸುಬ್ರಮಣ್ಯ ಧಾರವಾಹಿ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದಕ್ಕೆ ಯಶಸ್ವಿಯಾಗಿದೆ ಅನ್ನೋದಕ್ಕೆ ಇದು ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಉದಾಹರಣೆಯಾಗಿದೆ.
  • ಈ ಲಿಸ್ಟಿನಲ್ಲಿ ಜೀ ಕನ್ನಡ ವಾಹಿನಿಯ ಧಾರವಾಹಿಗಳ ಪ್ರಾಬಲ್ಯತೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ ಯಾಕೆಂದರೆ ಎರಡನೇ ಸ್ಥಾನದಲ್ಲಿ ಕೂಡ ಜೀ ಕನ್ನಡ ವಾಹಿನಿಯ ಮತ್ತೊಂದು ಜನಪ್ರಿಯ ಧಾರವಾಹಿ ಆಗಿರುವಂತಹ ಲಕ್ಷ್ಮಿ ನಿವಾಸ ಕಾಣಿಸಿಕೊಳ್ಳುತ್ತಿದೆ. ಈ ದಾರವಾಹಿಯಲ್ಲಿ ಎರಡು ಕಥೆಗಳು ಪ್ರೇಕ್ಷಕರ ಗಮನ ಸೆಳೆಯುವುದಕ್ಕೆ ಯಶಸ್ವಿಯಾಗಿದೆ. ಮೊದಲನೇದಾಗಿ ಜಯಂತ್ ಹಾಗೂ ಜಾನ್ವಿಯ ಕಥೆ ಹಾಗೂ ಇನ್ನೊಂದು ಕಡೆ ಭಾವನ ಹಾಗೂ ಸಿದ್ದೇಗೌಡರ ಕಥೆ. ಎರಡು ಕಥೆಗಳನ್ನು ಕೂಡ ಸಮಾನಂತರವಾಗಿ ಈ ಧಾರವಾಹಿ ಮುಂದೆ ತೆಗೆದುಕೊಂಡು ಹೋಗುತ್ತಿದ್ದು ಪ್ರೇಕ್ಷಕರು ಇದನ್ನ ನೋಡಲು ಪ್ರತಿದಿನ ಸಂಜೆ ಟಿವಿ ಯ ಮುಂದೆ ಬಂದು ಕುಳಿತುಕೊಳ್ಳುತ್ತಿದ್ದಾರೆ.
  • ಮೊದಲನೇ ಸ್ಥಾನದಲ್ಲಿ ಕೂಡ ಜೀ ಕನ್ನಡ ವಾಹಿನಿಯ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ಧಾರವಾಹಿ ಆಗಿರುವಂತಹ ಪುಟ್ಟಕ್ಕನ ಮಕ್ಕಳ ಧಾರವಾಹಿ ಕಾಣಿಸಿಕೊಳ್ಳುತ್ತಿದೆ. ಸಹನಾಳನ್ನು ಹುಡುಕುವಂತಹ ನಿಟ್ಟಿನಲ್ಲಿ ಗಂಟಿ ಜೊತೆಗೆ ಬೆಂಗಳೂರು ಪೂರ್ತಿ ಪುಟ್ಟಕ್ಕ ಸುತ್ತಿ ಬಂದಿದ್ದಾಳೆ. ಮಗಳು ಇಲ್ಲ ಎನ್ನುವುದನ್ನು ಅವಳಿಂದ ಆರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗೂ ಆಕೆ ಖಂಡಿತವಾಗಿ ಬದುಕಿದ್ದಾಳೆ ಅನ್ನುವಂತಹ ನಂಬಿಕೆ ಕೂಡ ಆಕೆಯಲ್ಲಿದೆ. ಇದು ನೋಡುಗರ ನಿರೀಕ್ಷೆ ಹಾಗೂ ಕಾತುರತೆಯನ್ನು ಕೂಡ ಹೆಚ್ಚಿಸಿದ್ದು ಇದೇ ಕಾರಣಕ್ಕಾಗಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

Comments are closed.