Post Office Scheme: ಪೋಸ್ಟ್ ಆಫೀಸ್ನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನೀವು ಡಿಪಾಸಿಟ್ ಇಟ್ತ ಹಣ ದುಪ್ಪಟ್ಟಾಗತ್ತೆ!

Post Office Scheme: ಭವಿಷ್ಯಕ್ಕಾಗಿ ನೀವು ಇವತ್ತೇ ಹಣವನ್ನು ಹೂಡಿಕೆ ಮಾಡಿ ಸರಿಯಾದ ರೀತಿಯಲ್ಲಿ ಯೋಚನೆಯನ್ನು ಹಾಕಿಕೊಂಡರೆ ಖಂಡಿತವಾಗಿ ನಿಮ್ಮ ಭವಿಷ್ಯ ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿರುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಪೋಸ್ಟ್ ಆಫೀಸ್ನಲ್ಲಿ ಯಾವ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆದುಕೊಳ್ಳ ಬಹುದು ಎನ್ನುವಂತಹ ವಿಚಾರವನ್ನು ಕೂಡ ನೀವು ಪೋಸ್ಟ್ ಆಫೀಸ್ನ ಅಧಿಕಾರಿಗಳ ಬಳಿ ಹೋಗಿ ಕೇಳಿ ತಿಳಿದುಕೊಳ್ಳಬೇಕಾಗಿರುತ್ತದೆ. ನಮ್ಮ ಅನಿಸಿಕೆ ಪ್ರಕಾರ ತಿಳಿದು ಬಂದಿರುವ ಮಾಹಿತಿ ಆಡಿಯಲ್ಲಿ ಪೋಸ್ಟ್ ಆಫೀಸ್ನ ಫಿಕ್ಸೆಡ್ ಡೆಪಾಸಿಟ್ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುವುದೇ ನಿಮಗೆ ದೀರ್ಘಕಾಲಿಕ ಹೂಡಿಕೆಯಲ್ಲಿ ಉತ್ತಮ ರಿಟರ್ನ್ಸ್ ಸಿಗುವಂತೆ ಮಾಡುತ್ತದೆ.

ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಯೋಜನೆ!

ಪೋಸ್ಟ್ ಆಫೀಸ್ನ ಫಿಕ್ಸೆಡ್ ಡೆಪಾಸಿಟ್ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುವುದು ದೀರ್ಘಕಾಲಿಕ ಹೂಡಿಕೆಯ ವಿಚಾರದಲ್ಲಿ ಸಾಕಷ್ಟು ಸುರಕ್ಷಿತ ಹಾಗೂ ಲಾಭದಾಯಕವಾಗಿರಲಿದೆ. ವಾರ್ಷಿಕ ಶೇಕಡ 7.50% ಬಡ್ಡಿಯನ್ನು ನಿಮಗೆ ಈ ಯೋಜನೆಯ ಮೇಲೆ ರಿಟರ್ನ್ ರೂಪದಲ್ಲಿ ನೀಡಲಾಗುತ್ತದೆ. ಇನ್ನು ನಿಮಗೆ ಇನ್ಕಮ್ ಟ್ಯಾಕ್ಸ್ ಆಕ್ಟ್ 80 c ಪ್ರಕಾರ ನೀವು ಇದರ ತೆರಿಗೆಯಲ್ಲಿ ಕೂಡ ರಿಯಾಯಿತಿಯನ್ನು ಪಡೆದುಕೊಳ್ಳುತ್ತೀರಿ. ಹಿರಿಯರು ಕೂಡ ಇದರಲ್ಲಿ ಖಾತೆಯನ್ನು ತಡೆಯಬಹುದಾಗಿದೆ ಹಾಗೂ ಮಕ್ಕಳ ಹೆಸರಿನಲ್ಲಿ ಪೋಷಕರು ಕೂಡ ಖಾತೆಯನ್ನು ಓಪನ್ ಮಾಡಬಹುದಾಗಿದೆ.

ಎಷ್ಟು ಹಣವನ್ನು ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ?

  • ಒಂದು ವೇಳೆ ನೀವು ಪೋಸ್ಟ್ ಆಫೀಸ್ನ ಫಿಕ್ಸೆಡ್ ಡೆಪಾಸಿಟ್ ಯೋಜನೆ ಅಡಿಯಲ್ಲಿ 1 ಲಕ್ಷ ಹಣವನ್ನು ಐದು ವರ್ಷಗಳ ಕಾಲ ಠೇವಣಿ ಇಟ್ಟರೆ ನೀವು 7.50 ಪ್ರತಿಶತ ಬಡ್ಡಿ ದರದಲ್ಲಿ 44995 ರೂಪಾಯಿಗಳ ಹೆಚ್ಚುವರಿ ಬಡ್ಡಿಯನ್ನು ಪಡೆದುಕೊಳ್ಳುತ್ತೀರಿ.
  • ಒಂದು ವೇಳೆ ನೀವು ಐದು ವರ್ಷಗಳ ಕಾಲ ಎರಡು ಲಕ್ಷ ರೂಪಾಯಿ ಹಣವನ್ನ ಫಿಕ್ಸ್ಡ್ ಡೆಪಾಸಿಟ್ ಯೋಜನೆಯಲ್ಲಿ ಠೇವಣಿ ಇಟ್ಟರೆ 7.50 ಪ್ರತಿಶತ ಬಡ್ಡಿ ದರದ ಲೆಕ್ಕಾಚಾರದಲ್ಲಿ ನೀವು ಹೆಚ್ಚುವರಿಯಾಗಿ 89, 990 ರೂಪಾಯಿ ಬಡ್ಡಿ ಹಣವನ್ನು ಪಡೆದುಕೊಳ್ಳುವಂತಹ ಅವಕಾಶವನ್ನ ಹೊಂದಿದ್ದೀರಿ.

ಈ ರೀತಿಯಲ್ಲಿ ನೀವು ಪೋಸ್ಟ್ ಆಫೀಸ್ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಖಂಡಿತವಾಗಿ ಕೈತುಂಬ ಹಣವನ್ನು ಲಾಭ ರೂಪದಲ್ಲಿ ಸಂಪಾದನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ನೀವು ನಿಮ್ಮ ಹಾಗೂ ನಿಮ್ಮ ಕುಟುಂಬದ ಭವಿಷ್ಯದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡ್ತಾ ಇದ್ರೆ ಖಂಡಿತವಾಗಿ ಪೋಸ್ಟ್ ಆಫೀಸ್ನ ಈ ಅತ್ಯಂತ ಹೆಚ್ಚು ಬಡ್ಡಿಯನ್ನು ನೀಡುವಂತಹ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನಿಮ್ಮ ಭವಿಷ್ಯವನ್ನು ಭದ್ರಗೊಳಿಸಬಹುದಾಗಿದೆ. ಜೀವನದ ಪ್ರತಿಯೊಂದು ಪ್ರಮುಖ ಘಟ್ಟಗಳಲ್ಲಿ ಕೂಡ ಹಣಕಾಸು ನಿಮ್ಮ ಸಹಾಯಕ ಬರುತ್ತದೆ ಹಾಗೂ ಅವುಗಳನ್ನು ಸರಿಯಾದ ರೀತಿಯಲ್ಲಿ ಸರಿಯಾದ ಕಡೆಯಲ್ಲಿ ಹೂಡಿಕೆ ಮಾಡುವುದು ನಿಮ್ಮ ಜವಾಬ್ದಾರಿಯ ಆಗಿರುತ್ತದೆ.

Comments are closed.