Shukra: ಶುಕ್ರನಿಂದ ರಾಜಯೋಗ; ಈ ಮೂರು ರಾಶಿಯವರು ಎಂಥಾ ಅದೃಷ್ಟಪಡೆಯುತ್ತಾರೆ ಗೊತ್ತೆ? ನಿಮ್ಮ ರಾಶಿಯೂ ಇದ್ಯಾ ಚೆಕ್ ಮಾಡಿ!

Shukra: ಗ್ರಹಗಳ ಪರಿಚಲನೆಯಿಂದಾಗಿ ಅವುಗಳ ನೇರ ಪರಿಣಾಮ ರಾಶಿಯವರ ಮೇಲೆ ಬೀಳುತ್ತದೆ. ಅದೇ ರೀತಿಯಲ್ಲಿ ಈಗ ಶುಭಕಾರಕ ಆಗಿರುವಂತಹ ಶುಕ್ರ ಮಿಥುನ ರಾಶಿಯಲ್ಲಿ ಉಗಮಿಸಿದ್ದಾನೆ. ಇದರಿಂದಾಗಿ ವಿಶೇಷವಾಗಿ ಮೂರು ರಾಶಿಯವರ ಮೇಲೆ ಶುಭ ಪರಿಣಾಮ ಉಂಟಾಗಲಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಆ ಅದೃಷ್ಟವಂತ ಮೂರು ರಾಶಿಯವರು ಯಾರೆಲ್ಲಾ ಎಂಬುದನ್ನು ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ.

ವೃಷಭ ರಾಶಿ

ಮಾಡುವಂತ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಶುಕ್ರನ ಆಶೀರ್ವಾದದಿಂದಾಗಿ ವೃಷಭ ರಾಶಿಯವರು ಲಾಭವನ್ನು ಸಂಪಾದನೆ ಮಾಡಲಿದ್ದಾರೆ ಹಾಗೂ ಪ್ರತಿಯೊಂದು ಕೆಲಸಗಳು ಕೂಡ ಯಶಸ್ವಿಯಾಗಲಿವೆ. ಪ್ರತಿಯೊಂದು ಸಂದರ್ಭದಲ್ಲಿ ಕೂಡ ವೃಷಭ ರಾಶಿಯವರಿಗೆ ಈ ವಿಶೇಷವಾದ ಯೋಗದ ಅದೃಷ್ಟ ಎನ್ನುವುದು ಕಾಪಾಡಲಿದೆ. ಇರುವಂತಹ ಪ್ರತಿಯೊಂದು ಸಮಸ್ಯೆಗಳು ಕೂಡ ದೂರವಾಗಲಿವೆ. ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೂ ಕೂಡ ಸಾಕಷ್ಟು ಉದ್ಯೋಗದ ಅವಕಾಶಗಳು ಹುಡುಕಿಕೊಂಡು ಬರಲಿವೆ. ಈಗಾಗಲೇ ಉದ್ಯೋಗದಲ್ಲಿ ಇರುವವರಿಗೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವುದಕ್ಕೆ ಹಾಗೂ ಪ್ರಮೋಷನ್ಗಾಗಿ ಕೂಡ ಸಾಕಷ್ಟು ಅವಕಾಶಗಳು ಸಿಗಲಿವೆ. ವ್ಯಕ್ತಿತ್ವದಲ್ಲಿ ಸಾಕಷ್ಟು ಪಾಸಿಟಿವ್ ಬೆಳವಣಿಗೆಗಳು ಕಂಡು ಬರಲಿವೆ. ಸಾಕಷ್ಟು ಸಮಯಗಳಿಂದ ನಿಮಗೆ ಬರಬೇಕಾಗಿರುವಂತಹ ಹಣ ಕೂಡ ಸಿಗಲಿದ್ದು ಒಂದಕ್ಕಿಂತ ಹೆಚ್ಚಿನ ಆದಾಯದ ಮೂಲಗಳು ಈ ಸಂದರ್ಭದಲ್ಲಿ ಸೃಷ್ಟಿಯಾಗಲಿವೆ. ಯಾವುದೇ ರೀತಿಯ ಆರ್ಥಿಕ ಸಂಕಷ್ಟ ನಿಮ್ಮನ್ನು ಕಾಡುವುದಿಲ್ಲ.

ಧನು ರಾಶಿ

ಈ ಸಂದರ್ಭದಲ್ಲಿ ಧನು ರಾಶಿಯವರ ಪ್ರೀತಿಗೆ ಮನೆಯವರು ಒಪ್ಪಿ ಮದುವೆ ಮಾಡಿಸಿಕೊಡುವುದಕ್ಕೆ ಒಪ್ಪಿಕೊಳ್ಳಲಿದ್ದಾರೆ. ಧನು ರಾಶಿಯ ದಂಪತಿಗಳಿಗೆ ಈ ಸಂದರ್ಭದಲ್ಲಿ ಪ್ರಾಪ್ತಿಯಾಗಲಿದೆ. ಈ ಸಂದರ್ಭದಲ್ಲಿ ಧನುರಾಶಿಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುವಂತಹ ಅವಕಾಶವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೂಡ ಶುಭ ಸುದ್ದಿ ಕೇಳಿ ಬರುವ ಸಾಧ್ಯತೆ ಹೆಚ್ಚಾಗಿದೆ. ವಿದೇಶಕ್ಕೆ ಹೋಗಬೇಕು ಎನ್ನುವಂತಹ ಧನುರಾಶಿಯವರ ಕನಸು ಈ ಸಂದರ್ಭದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಈಡೇರಲಿದೆ. ಧನು ರಾಶಿಯವರ ಸಾಕಷ್ಟು ಕನಸುಗಳು ಈ ಸಂದರ್ಭದಲ್ಲಿ ಈಡೇರಲಿವೆ.

ಸಿಂಹ ರಾಶಿ

ಸಿಂಹ ರಾಶಿಯವರ ಕೆಲಸಗಳಲ್ಲಿ ಗೆಲುವು ನಿಶ್ಚಿತವಾಗಿದೆ ಹಾಗೂ ವ್ಯಾಪಾರದಲ್ಲಿ ಕೂಡ ಕೈತುಂಬ ಲಾಭ ಸಂಪಾದನೆ ಆಗಲಿದೆ. ಶುಕ್ರನ ಆಶೀರ್ವಾದದಿಂದಾಗಿ ಕೂಡ ಸಿಂಹ ರಾಶಿಯವರು ಪ್ರತಿಯೊಂದು ಕ್ಷೇತ್ರಗಳಲ್ಲಿ ಗೆಲುವನ್ನು ಸಂಪಾದನೆ ಮಾಡಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ನಿಮಗೆ ನಿಮ್ಮನ್ನು ಸಾಬೀತುಪಡಿಸಿಕೊಳ್ಳುವುದಕ್ಕೆ ಸಿಗಲಿದೆ. ಸಿಗುವಂತಹ ಸಾಕಷ್ಟು ಅವಕಾಶಗಳ ಕಾರಣದಿಂದಾಗಿ ನೀವು ವ್ಯಾಪಾರದಲ್ಲಿ ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭವನ್ನು ಸಂಪಾದನೆ ಮಾಡಲಿದ್ದೀರಿ ಹಾಗೂ ಆ ವ್ಯಾಪಾರವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡಲಿದ್ದೀರಿ. ಆರ್ಥಿಕ ಸಮಸ್ಯೆಯ ವಿಚಾರಕ್ಕೆ ಬಂದರೆ ನೀವು ಯಾವುದೇ ರೀತಿಯ ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾದ ಅಗತ್ಯ ಇರುವುದಿಲ್ಲ. ಧೈರ್ಯವಂತರಾಗಿರುವಂತಹ ಸಿಂಹ ರಾಶಿಯವರ ಆತ್ಮವಿಶ್ವಾಸ ಕೂಡ ಹೆಚ್ಚುವುದರಿಂದಾಗಿ ಪ್ರತಿಯೊಂದು ಕೆಲಸದಲ್ಲಿ ಗೆಲುವು ನಿಶ್ಚಿತವಾಗಿದೆ.

Comments are closed.