Gold Limit: ಮದುವೆ ಟೈಮ್ನಲ್ಲಿ ಅಪ್ಪ ಕೊಟ್ಟಿದ್ದಾದ್ರೂ ಸರಿ, ಮನೆಯಲ್ಲಿ ಚಿನ್ನ ಇಟ್ಟುಕೊಳ್ಳುವುದಕ್ಕೆ ಸರ್ಕಾರದ ಲಿಮಿಟ್; ಇದಕ್ಕಿಂತ ಹೆಚ್ಚು ಚಿನ್ನ ನಿಮ್ಮಲ್ಲಿದ್ರೆ ಏನಾಗತ್ತೆ ಗೊತ್ತಾ?

Gold Limit: ಭಾರತ ದೇಶದಲ್ಲಿ ಅತ್ಯಂತ ಪ್ರಮುಖವಾದ ಹಾಗೂ ದುಬಾರಿಯಾಗಿರುವಂತಹ ಲೋಹ ಅಂದ್ರೆ ಅದು ಚಿನ್ನ ಎಂದು ಹೇಳಬಹುದಾಗಿದೆ. ಇನ್ನು ಚಿನ್ನವನ್ನು ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಕೂಡ ಜಾಗತಿಕವಾಗಿ ಭಾರತ ದೇಶ ಸಾಕಷ್ಟು ಎತ್ತರದ ಸ್ಥಾನದಲ್ಲಿದೆ. ಕೇವಲ ನಮ್ಮ ವೈಯಕ್ತಿಕವಾಗಿ ಮಾತ್ರವಲ್ಲದೆ ದೇಶದ ಹಿತಾಸಕ್ತಿಯ ದೃಷ್ಟಿಯಿಂದಲೂ ಕೂಡ ಚಿನ್ನ ಸಾಕಷ್ಟು ರೀತಿಯಲ್ಲಿ ಸಹಾಯವನ್ನು ಮಾಡುತ್ತದೆ. ಬೇರೆ ದೇಶಗಳ ಜೊತೆಗೆ ಟ್ರೇಡಿಂಗ್ ಮಾಡುವ ಸಂದರ್ಭದಲ್ಲಿ ಚಿನ್ನವನ್ನು ಕೂಡ ಕರೆನ್ಸಿ ರೂಪದಲ್ಲಿ ಕಾಣಲಾಗುತ್ತದೆ ಹಾಗೂ ಅವುಗಳನ್ನು ಕೂಡ ಎಕ್ಸ್ಚೇಂಜ್ ರೂಪದಲ್ಲಿ ಬಳಸಲಾಗುತ್ತದೆ. ಸದ್ಯಕ್ಕೆ 10 ಗ್ರಾಂ ಚಿನ್ನದ ಬೆಲೆ ಭಾರತದ ಮಾರುಕಟ್ಟೆಯಲ್ಲಿ 70,000ಗಳನ್ನ ಮೀರಿದೆ ಎನ್ನುವ ರೀತಿಯಲ್ಲಿ ಸುದ್ದಿ ಕೇಳಿ ಬರುತ್ತಿದೆ.

ಹಬ್ಬ ಹರಿದಿನಗಳ ಸಂದರ್ಭದಲ್ಲಿ ನಮ್ಮ ಭಾರತೀಯರು ಚಿನ್ನವನ್ನು ಖರೀದಿಸುವುದು ಅತ್ಯಂತ ಶುಭ ಎಂಬುದಾಗಿ ಪರಿಗಣಿಸುತ್ತಾರೆ ಹಾಗೂ ಹಬ್ಬದ ದಿನದಲ್ಲಿ ಅದರಲ್ಲೂ ವಿಶೇಷವಾಗಿ ಅಕ್ಷಯ ತೃತೀಯ ದಿನದಂದು ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುವಂತಹ ಕೆಲಸವನ್ನು ಮಾಡುತ್ತಾರೆ. ಆದರೆ ಒಂದು ಮನೆಯಲ್ಲಿ ಎಷ್ಟು ಚಿನ್ನವನ್ನ ಇಟ್ಕೊಳ್ಳೋದು ಸರ್ಕಾರದ ಪ್ರಕಾರ ಲಿಮಿಟ್ ಇದೆ ಎನ್ನುದರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ. ಇವತ್ತಿನ ಈ ಲೇಖನದ ಮೂಲಕ ನಾವು ಇದೇ ವಿಚಾರವನ್ನು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.

ಮನೆಯಲ್ಲಿ ಚಿನ್ನ ಇಡೋದಕ್ಕೆ ಇರುವಂತಹ ಸರ್ಕಾರದ ಲಿಮಿಟ್ ಏನು ಗೊತ್ತಾ?

ಸಾಮಾನ್ಯವಾಗಿ ಹಣಕ್ಕೆ ಇರುವ ರೀತಿಯಲ್ಲಿ ಚಿನ್ನಕ್ಕೂ ಕೂಡ ಸರ್ಕಾರದ ಕಡೆಯಿಂದ ಕೆಲವೊಂದು ನಿರ್ದಿಷ್ಟ ನಿಯಮಗಳಿವೆ. ಅದೇನೆಂದರೆ ಚಿನ್ನವನ್ನು ನೀವು ಎಷ್ಟು ಬೇಕಾದ್ರೂ ಕೂಡ ಮನೆಯಲ್ಲಿ ಇಟ್ಟುಕೊಳ್ಳಬಹುದು ಆದರೆ ಅದನ್ನು ಖರೀದಿಸುವುದಕ್ಕೆ ಹಣ ಎಲ್ಲಿಂದ ಬಂದು ಎನ್ನುವಂತಹ ಸಂಪನ್ಮೂಲದ ದಾಖಲೆಗಳನ್ನು ಅಧಿಕಾರಿಗಳಿಗೆ ಒದಗಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

ಈ ಸಂದರ್ಭದಲ್ಲಿ ಕೂಡ ಯಾವುದೇ ತೆರಿಗೆ ಅಥವಾ ಖರೀದಿಸಿರುವಂತಹ ದಾಖಲೆಗಳನ್ನು ತೋರಿಸಿಕೊಳ್ಳದೆ ಮನೆಯಲ್ಲಿ ಇಟ್ಟುಕೊಳ್ಳಬಹುದಾದಂತಹ ಚಿನ್ನದ ಲಿಮಿಟ್ ಬಗ್ಗೆ ಮಾತನಾಡುವುದಾದರೆ ಮದುವೆ ಆಗಿರುವಂತಹ ಮಹಿಳೆಯರು 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು ಹಾಗೂ ಮದುವೆ ಆಗಿರುವಂತಹ ಅವಿವಾಹಿತ ಮಹಿಳೆಯರು 250 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು. ಪುರುಷರಿಗೆ ಕೇವಲ 100 ಗ್ರಾಂ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಹ ಅವಕಾಶವನ್ನು ನೀಡಲಾಗಿದೆ.

ಚಿನ್ನವನ್ನು ಕೇವಲ ಅಲಂಕಾರಿಕ ವಸ್ತುವನ್ನಾಗಿ ಮಾತೃವ ಅಲ್ಲದೆ ಅದನ್ನು ಕಷ್ಟ ಕಾಲದಲ್ಲಿ ಅಡವಿಟ್ಟು ಹಣವನ್ನು ಪಡೆದುಕೊಳ್ಳಬಹುದಾದಂತಹ ಆಪತ್ಬಾಂಧವ ಎನ್ನುವುದಾಗಿ ಕೂಡ ಮಧ್ಯಮ ಹಾಗೂ ಬಡವರ್ಗದ ಕುಟುಂಬದಲ್ಲಿ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಕೂಡ ಹಣವನ್ನು ಹೂಡಿಕೆ ಮಾಡುವ ಸಂದರ್ಭದಲ್ಲಿ ನೀವು ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡಿದರೆ ಖಂಡಿತವಾಗಿ ಒಂದಲ್ಲ ಒಂದು ಸಮಯದಲ್ಲಿ ಅದು ಲಾಭದಾಯಕ ರಿಟರ್ನ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.