HSRP: HSRP ನಂಬರ್ ಪ್ಲೇಟ್ ಅಳವಡಿಕೆ ಬಗ್ಗೆ ಬಂತು ನೋಡಿ ಹೊಸ ಅಪ್ಡೇಟ್; ಕರ್ನಾಟಕದಲ್ಲಿದ್ದವರು ತಿಳಿಯಲೇಬೇಕು!

HSRP: HSRP ನಂಬರ್ ಪ್ಲೇಟ್ ಅನ್ನು ಪ್ರತಿಯೊಬ್ಬರೂ ಕೂಡ ರಾಜ್ಯದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದಾಗಿ ಈಗಾಗಲೇ ಸಾರಿಗೆ ಇಲಾಖೆಯ ಅಧಿಕೃತ ಘೋಷಣೆ ಬಂದು ಸಾಕಷ್ಟು ಸಮಯಗಳೇ ಕಳೆದಿವೆ. ನಿಮಗೆಲ್ಲರಿಗೂ ತಿಳಿದಿರಬಹುದು ಮೇ 31 HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳುವುದಕ್ಕೆ ಕೊನೆಯ ದಿನಾಂಕ ಎಂಬುದಾಗಿ ನಿಗದಿಪಡಿಸಲಾಗಿತ್ತು. ಆದರೆ ಈಗ ದಿನಾಂಕ ಮುಗಿದು ಜೂನ್ ತಿಂಗಳು ಕೂಡ ಪ್ರಾರಂಭವಾಗಿದೆ. ನಮ್ಮ ರಾಜ್ಯದಲ್ಲಿ ಇರುವಂತಹ ಎರಡು ಕೋಟಿ ಒಟ್ಟಾರೆ ವಾಹನಗಳಲ್ಲಿ ಕೇವಲ 20 ಪ್ರತಿಶತಕ್ಕಿಂತಲೂ ಕಡಿಮೆ ಅಂದರೆ ಸರಿ ಸುಮಾರು 35 ಲಕ್ಷ ವಾಹನಗಳ ರಿಜಿಸ್ಟ್ರೇಷನ್ ಮಾತ್ರ ಆಗಿದೆ ಎಂಬುದಾಗಿ ತಿಳಿದು ಬಂದಿದೆ.

ಜೂನ್ ತಿಂಗಳ ನಂತರವೂ ಕೂಡ ಮತ್ತೆ ವಾಹನ ಮಾಲೀಕರಿಗೆ HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತಿದೆ. ಜೂನ್ 14ರ ತನಕ ಕೂಡ ಯಾವುದೇ ಕಾರಣಕ್ಕೂ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಇರುವವರು ಬಳಿ ಟ್ರಾಫಿಕ್ ಪೊಲೀಸರು ಯಾವುದೇ ರೀತಿಯ ದಂಡವನ್ನ ವಸೂಲು ಮಾಡುವ ಹಾಗಿಲ್ಲ ಎಂಬ ಆದೇಶವನ್ನು ಕೂಡ ಈಗಾಗಲೇ ಹೈಕೋರ್ಟ್ ನೀಡಿದೆ. ಇನ್ನು ಈ ಸಂದರ್ಭದಲ್ಲಿ ನೀವು ರಿಜಿಸ್ಟರ್ ಮಾಡಿಕೊಂಡಿರುವಂತಹ ರಿಸಿಟ್ ಅನ್ನು ತೋರಿಸಿದರೆ ಕೂಡ ಟ್ರಾಫಿಕ್ ಪೊಲೀಸರಿಂದ ನೀವು ಮುಂದಿನ ದಿನಗಳಲ್ಲಿ ಬಚಾವ್ ಆಗಬಹುದಾದಂತಹ ಅವಕಾಶ ಕೂಡ ಇದೆ. ಕೋರ್ಟ್ ಆದೇಶದ ಸಮಯ ಮುಗಿದ ನಂತರ ಮುಂದಿನ ದಿನಗಳಲ್ಲಿ 2019ರ ಒಳಗೆ ಖರೀದಿ ಮಾಡಲಾಗಿರುವಂತಹ ವಾಹನಗಳ ಮೇಲೆ HSRP ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅನ್ನು ನೀವು ಅಳವಡಿಸಿಕೊಳ್ಳ ಬೇಕಾಗಿರುವುದು ಕಡ್ಡಾಯವಾಗಿದ್ದು ಇಲ್ಲವಾದಲ್ಲಿ ದಂಡ ವಿಧಿಸುವಂತಹ ಸಾಧ್ಯತೆ ಹೆಚ್ಚಾಗಿದೆ.

ವಿಶೇಷ ಎನ್ನುವ ರೀತಿಯಲ್ಲಿ ನೀವು ಮುಂದಿನ ದಿನಗಳಲ್ಲಿ ಕನಿಷ್ಠಪಕ್ಷ ರಿಜಿಸ್ಟರ್ ಮಾಡಿಕೊಂಡಿದ್ದೀರಿ ಎನ್ನುವಂತಹ ರಸೀದಿಯನ್ನು ತೋರಿಸಿದರೆ ಸಾಕು ಟ್ರಾಫಿಕ್ ಪೊಲೀಸರು ನಿಮ್ಮನ್ನು ಸುಮ್ಮನೆ ಬಿಡಬಹುದೆಂಬುದಾಗಿ ಸುದ್ದಿ ಕೇಳಿ ಬಂದಿದ್ದು ಯಾವ ರೀತಿಯಲ್ಲಿ ನಂಬರ್ ಪ್ಲೇಟ್ ಮಾಡಿಕೊಳ್ಳಬೇಕು ಎನ್ನುವಂತಹ ವಿಧಾನವನ್ನು ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

HSRP ನಂಬರ್ ಪ್ಲೇಟ್ ಅನ್ನು ರಿಜಿಸ್ಟರ್ ಮಾಡಿಕೊಳ್ಳುವ ವಿಧಾನ!

  • transport.karnataka. gov. in ಅಧಿಕೃತ ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕ HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಕೊಳ್ಳುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ನಿಮ್ಮ ವಾಹನದ ಕಂಪನಿ ಯಾವುದು ಆಯ್ಕೆ ಮಾಡಿ ಅದರ ಬಗ್ಗೆ ಇರುವಂತಹ ಸಂಪೂರ್ಣ ಮಾಹಿತಿಯನ್ನು ನೀವು ಅಲ್ಲಿ ನಮೂದಿಸಬೇಕಾಗುತ್ತದೆ.
  • ನಿಮ್ಮ ಹತ್ತಿರದ ನಿಮ್ಮ ಕಾರಿನ ಡೀಲರ್ಶಿಪ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ಹಾಗೂ ಕೊನೆದಾಗಿ ಹಣ ಪಾವತಿಯನ್ನು ಮಾಡಬೇಕಾಗುತ್ತದೆ.
  • ಇದಾದ ನಂತರ ನಿಮ್ಮ ಶೋರೂಮ್ ಗೆ ಹೋಗಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವುದಕ್ಕೆ ನಿಮಗೆ ಸೂಕ್ತವಾಗಿರುವಂತಹ ದಿನಾಂಕವನ್ನು ಆಯ್ಕೆ ಮಾಡಿದರೆ ಅಲ್ಲಿ ಬರುವಂತಹ ನಂಬರ್ ಪ್ಲೇಟ್ ಅನ್ನು ನೀವು ಅಳವಡಿಸಿಕೊಂಡು ಬರಬಹುದಾಗಿದೆ.

Comments are closed.