Jio Plan: ಬೆಳ್ ಬೆಳಿಗ್ಗೆ ಅಂಬಾನಿ ಅವರಿಂದ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್; ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್

Jio Plan: JIO ಸಂಸ್ಥೆ ಭಾರತದ ಟೆಲಿಕಾಂ ಕ್ಷೇತ್ರದ ಭವಿಷ್ಯವನ್ನೇ ಸದಾ ಕಾಲಕ್ಕೆ ಬದಲಾಯಿಸಿದಂತಹ ಕಂಪನಿಯಾಗಿದೆ ಎಂದು ತಪ್ಪಾಗಲಾರದು. ಇಡೀ ವಿಶ್ವದಲ್ಲಿ ಈಗ ಭಾರತೀಯರ ಅತ್ಯಂತ ಕಡಿಮೆ ಬೆಲೆಗೆ ಇಂಟರ್ನೆಟ್ ಅನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ನಿಜವಾದ ಕಾರಣ ನಮ್ಮೆಲ್ಲರ ನೆಚ್ಚಿನ ಮುಕೇಶ್ ಅಂಬಾನಿ ಎಂದು ಹೇಳಬಹುದಾಗಿದೆ. ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವಂತಹ ಮುಕೇಶ್ ಅಂಬಾನಿ ಇಡೀ ಏಷ್ಯಾದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಕೂಡ ಕಾಣಿಸಿಕೊಳ್ಳುತ್ತಾರೆ.

ಇನ್ನು JIO ಗ್ರಾಹಕರಿಗೆ ರಿಲಯನ್ಸ್ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಎನಿಸುವಂತಹ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಅದೇ ರಿಚಾರ್ಜ್ ಪ್ಲಾನಿನ ಮಾಹಿತಿಯನ್ನು ನೀಡುವುದಕ್ಕೆ ಹೊರಟಿದ್ದೇವೆ.

JIO ಸಂಸ್ಥೆ ಪರಿಚಯಿಸಿದೆ ವಾರ್ಷಿಕ ರಿಚಾರ್ಜ್ ಪ್ಲಾನ್!

JIO ಸಂಸ್ಥೆ ವಾರ್ಷಿಕವಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚು ಲಾಭಗಳನ್ನು ನೀಡುವಂತಹ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ತನ ಗ್ರಾಹಕರಿಗೆ ಪರಿಚಯಿಸಿದೆ. ಹೌದು ನಾವು ಮಾತನಾಡಲು ಹೊರಟಿರೋದು 3227 ರಿಚಾರ್ಜ್ ಬಗ್ಗೆ. ಇದು ನೋಡೋದಕ್ಕೆ ಮಾತ್ರ 3000 ರೂಪಾಯಿಗಳಿಗೆ ಮೇಲ್ಪಟ್ಟಂತಹ ರಿಚಾರ್ಜ್ ಪ್ಲಾನ್ ಎನ್ನುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ ಆದರೆ ಇದರಲ್ಲಿ ನೀವು ಬರೋಬ್ಬರಿ 365 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದಾಗಿದೆ ಹೀಗಾಗಿ ದೀರ್ಘಕಾಲದ ಹೂಡಿಕೆಯ ವಿಚಾರದಲ್ಲಿ ನೋಡುವುದಾದರೆ ಈ ರಿಚಾರ್ಜ್ ಪ್ಲಾನ್ ಖಂಡಿತವಾಗಿ ನಿಮಗೆ ಸಾಕಷ್ಟು ಲಾಭದಾಯಕವಾಗಿದೆ ಎಂದು ಹೇಳಬಹುದಾಗಿದೆ.

ಇದರಲ್ಲಿ ನಿಮಗೆ ಪ್ರತಿದಿನ ಎರಡು ಜಿಬಿ ಇಂಟರ್ನೆಟ್ ಡೇಟಾದ ರೀತಿಯಲ್ಲಿ ಒಟ್ಟಾರೆಯಾಗಿ 730 GB ಇಂಟರ್ನೆಟ್ ಅನ್ನು ವ್ಯಾಲಿಡಿಟಿಯ ಸಂದರ್ಭದಲ್ಲಿ ಪಡೆದುಕೊಳ್ಳಬಹುದಾಗಿದೆ. 5G ಸ್ಪೀಡ್ ಇಂಟರ್ನೆಟ್ ಸೇವೆಯನ್ನು ನೀವು ಈ ರಿಚಾರ್ಜ್ ಪ್ಲಾನ್ ಜೊತೆಗೆ ನಿಸ್ಸಂಶಯವಾಗಿ ಪಡೆದುಕೊಳ್ಳಬಹುದಾಗಿದೆ. ಪ್ರತಿದಿನ ನೂರು ಎಸ್ಎಂಎಸ್ ಪಡೆದುಕೊಳ್ಳುವಂತಹ ಉಚಿತ ಸೇವೆಯನ್ನು ಕೂಡ ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ನಿಮಗೆ ಜಿಯೋ ಟಿವಿ ಜಿಯೋ ಸಿನಿಮಾಗಳಂತಹ ಜಿಯೋ ಸಂಸ್ಥೆಯ ಅಪ್ಲಿಕೇಶನ್ ಗಳಂತಹ ಉಚಿತ ಸಬ್ಸ್ಕ್ರಿಪ್ಷನ್ ದೊರಕಲಿದೆ. ಇನ್ನು ಮನೋರಂಜನೆಯ ಕಾರ್ಯಕ್ರಮಗಳನ್ನು ನೋಡುವ ಆಸೆಯನ್ನು ಹೊಂದಿರುವವರಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಚಂದಾದಾರಿಕೆ ಕೂಡ ಉಚಿತವಾಗಿ ದೊರಕಲಿದೆ. ಈ ಮೇಲೆ ಹೇಳಿರುವಂತಹ ಪ್ರತಿಯೊಂದು ಸೌಲಭ್ಯಗಳನ್ನು ಕೂಡ ನೀವು ಈ ವಾರ್ಷಿಕ ರಿಚಾರ್ಜ್ ಪ್ಲಾನ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಕೂಡ ಜಿಯೋ ಗ್ರಾಹಕರಾಗಿದ್ರೆ ಖಂಡಿತವಾಗಿ ಈ ವಾರ್ಷಿಕ ರಿಚಾರ್ಜ್ ಪ್ಲಾನ್ ನಿಮಗೆ ಸಾಕಷ್ಟು ರೀತಿಯಲ್ಲಿ ಹಣವನ್ನು ಉಳಿತಾಯ ಮಾಡುವಂತಹ ಕೆಲಸವನ್ನು ಮಾಡುತ್ತದೆ. ಹೀಗಾಗಿ ನಿಮಗೆ ಇದು ಲಾಭದಾಯಕವಾಗಿ ಸಾಬೀತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.