Fisheries Department: ಇಂತವರಿಗೆ ಸಿಗುತ್ತೆ ಬಡ್ಡಿ ರಹಿತ ಸಾಲ; ಈಗಲೇ ಅರ್ಜಿ ಹಾಕಿ,ಕೆಲವೇ ದಿನಗಳು ಮಾತ್ರ ಬಾಕಿ!

Fisheries Department: ಮಹಿಳೆಯರನ್ನು ಆರ್ಥಿಕವಾಗಿ ಸಮಾಜದ ಮುನ್ನೆಲೆಗೆ ತರಬೇಕು ಎನ್ನುವುದಕ್ಕಾಗಿ ಸರ್ಕಾರ ಸಾಕಷ್ಟ ಯೋಜನೆಗಳನ್ನು ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ತಂದಿರುವುದನ್ನ ನೀವೆಲ್ಲರೂ ನೋಡಿದ್ದೀರಿ. ಅವುಗಳಲ್ಲಿ ಶಕ್ತಿ ಯೋಜನೆ ಗ್ರಹಲಕ್ಷ್ಮಿ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ನೀವು ಜೀವಂತ ಉದಾಹರಣೆಯಾಗಿ ಎದುರಿಗೆ ನೋಡಬಹುದಾಗಿದೆ. ಇನ್ನು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎನ್ನುವ ಕಾರಣಕ್ಕಾಗಿ ಮೀನುಗಾರಿಕೆ ಇಲಾಖೆಯಿಂದ ಬಡ್ಡಿ ರಹಿತ ಸಾಲವನ್ನು ನೀಡುವುದಕ್ಕೆ ಸಿದ್ಧಪಡಿಸಲಾಗಿದೆ.

ಮೀನುಗಾರಿಕೆ ಇಲಾಖೆಯಿಂದ ಬಡ್ಡಿ ರಹಿತ ಸಾಲ!

ಮೀನುಗಾರಿಕಾ ಇಲಾಖೆಯಿಂದ ಮಹಿಳೆಯರಿಗೆ 3 ಲಕ್ಷ ರೂಪಾಯಿಗಳ ವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲವನ್ನು ನೀಡುವಂತಹ ಯೋಜನೆಯನ್ನು ಈ ಮೂಲಕ ತಿಳಿಸಲಾಗಿದೆ. ಈ ಸಾಲವನ್ನು ಮಹಿಳೆಯರು ಪಡೆದುಕೊಳ್ಳುವುದಕ್ಕಿಂತ ಮುಂಚೆ ಕೆಲವೊಂದು ಅರ್ಹತೆಗಳನ್ನು ಅವರು ಕಡ್ಡಾಯವಾಗಿ ಹೊಂದಿರಬೇಕಾಗಿರುವುದು ಪ್ರಮುಖವಾಗಿ ಹಾಗಿದ್ದರೆ ಬನ್ನಿ ಆ ಅರ್ಹತೆಗಳು ಯಾವುವು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಸಾಲ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು!

  • ಈ ಸಾಲವನ್ನು ಪಡೆದುಕೊಳ್ಳಲು ಮಹಿಳೆಯರು ಅರ್ಜಿ ಸಲ್ಲಿಸುವುದಕ್ಕಿಂತ ಮುಂಚೆ ಅವರು ಕಡ್ಡಾಯವಾಗಿ ಮೀನುಗಾರರಾಗಿರಬೇಕು ಅನ್ನೋದನ್ನ ಖಚಿತಗೊಳಿಸಿಕೊಳ್ಳಬೇಕು.
  • ಎಲ್ಲಕ್ಕಿಂತ ಪ್ರಮುಖವಾಗಿ ಮೀನುಗಾರರ ಸಹಕಾರ ಸಂಘದ ಸದಸ್ಯರಾಗಬೇಕಾಗಿರೋದು ಅತ್ಯಂತ ಪ್ರಮುಖವಾಗಿದೆ.

ಇನ್ನು ಈ ಸಾಲವನ್ನು ಯಾವ ಕೆಲಸಕ್ಕಾಗಿ ಅವರು ಬಳಸಿಕೊಳ್ಳಬೇಕಾಗಿದೆ ಅನ್ನೋದನ್ನ ಕೂಡ ಇಲ್ಲಿ ಅವರು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ. ಒಂದು ವೇಳೆ ಅವರ ಮೀನುಗಾರಿಕೆಯ ದೋಣಿಯ ರಿಪೇರಿ ಮಾಡಬೇಕು ಎನ್ನುವುದಾಗಿದ್ರೆ ಆ ರಿಪೇರಿ ಮಾಡುವಂಥ ಕೆಲಸಕ್ಕಾಗಿ ಈ ಸಾಲದ ಹಣವನ್ನು ಬಳಸಿಕೊಳ್ಳಬಹುದಾಗಿದೆ. ಇನ್ನು ಮೀನುಗಾರಿಕೆಯ ಬಲೆಗಳ ದುರಸ್ತಿ ಹಾಗೂ ಇನ್ನಿತರ ಖರ್ಚುಗಳಿಗಾಗಿ ಕೂಡ ಈ ಸಾಲದ ಹಣವನ್ನು ಬಳಸಿಕೊಳ್ಳಬಹುದಾಗಿದೆ. ಅಲಂಕಾರಿಕ ಮೀನುಗಳ ಉತ್ಪಾದನೆಗಾಗಿ ಕೂಡ ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ. ಮೀನುಗಳ ಉತ್ಪಾದನೆ ಹಾಗೂ ಮಾರಾಟ ಸೇರಿದಂತೆ ಸಾಕಷ್ಟು ಕೆಲಸಗಳಿಗಾಗಿ ಈ ಹಣವನ್ನು ಬಳಸಿಕೊಳ್ಳಬಹುದು. ಇದರ ಮೂಲಕ ಅವರು ತಮಗೆ ಬೇಕಾಗಿರುವಂತಹ ಕೆಲಸಗಳನ್ನು ಈ ಸಾಲ ರೂಪದ ಹಣದ ಮೂಲಕ ಮಾಡಿಕೊಳ್ಳಬಹುದಾಗಿದ್ದು ಇದರ ಮೂಲಕ ಕೆಲಸವನ್ನು ಪ್ರಾರಂಭಿಸಿ ಹಣವನ್ನು ಗಳಿಸಬಹುದಾದಂತಹ ಅವಕಾಶವನ್ನ ಮೀನುಗಾರಿಕೆ ವರ್ಗಕ್ಕೆ ಸೇರಿರುವಂತಹ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ.

ಮೀನುಗಾರಿಕೆ ವರ್ಗಕ್ಕೆ ಸೇರಿರುವಂತಹ ಮಹಿಳೆಯರು ಮಾತ್ರ ಈ ಸಾಲ ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತಾರೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ. 3 ಲಕ್ಷ ರೂಪಾಯಿಗಳ ವರೆಗೂ ಕೂಡ ನೀವು ಯಾವುದೇ ಗ್ಯಾರೆಂಟಿ ಇಲ್ಲದೆ ಸಾಲವನ್ನು ಪಡೆದುಕೊಳ್ಳುವಂತಹ ಹಾಗೂ ಅತ್ಯಂತ ಕಡಿಮೆ ಬಡ್ಡಿದರಕ್ಕೆ ಈ ಸಾಲವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಸಿಕ್ಕಿರುವಂತಹ ಅವಕಾಶವನ್ನು ಮೀನುಗಾರಿಕೆ ವರ್ಗಕ್ಕೆ ಸೇರಿರುವಂತಹ ಮಹಿಳೆಯರು ತಮ್ಮ ಮೀನುಗಾರಿಕೆಯ ಅಭಿವೃದ್ಧಿಗಾಗಿ ಬಳಸಿಕೊಳ್ಳಬಹುದಾಗಿದ್ದು, ಇದರಿಂದ ಇನ್ನಷ್ಟು ಹೆಚ್ಚಿನ ಆದಾಯವನ್ನು ನೀವು ಪಡೆದುಕೊಳ್ಳುವುದಕ್ಕಾಗಿ ಬೇಕಾಗಿರುವಂತಹ ಪ್ರತಿಯೊಂದು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ ಹಾಗೂ ಹೊಸ ಉಪಕರಣಗಳನ್ನು ಖರೀದಿ ಮಾಡಬಹುದಾಗಿದೆ.

Comments are closed.