Bank Loan: ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳುವವರಿಗೆ ಆರ್‌ಬಿಐನಿಂದ ಬಂತು ನೋಡಿ ಹೊಸ ಅಪ್ಡೇಟ್; ಸಾಲ ಪಡೆಯೋದು ಇನ್ನಷ್ಟು ಸುಲಭ!

Bank Loan: ತಮ್ಮ ಬೇರೆ ಬೇರೆ ಆರ್ಥಿಕ ಅಗತ್ಯತೆಗಳಿಗೆ ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಂಡಿರುವ ಅಥವಾ ಪಡೆದುಕೊಳ್ಳುವಂತಹ ಜನರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಒಂದು ಗುಡ್ ನ್ಯೂಸ್ ಹೊರ ಬಂದಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಈ ಬಾರಿ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ರೇಟ್ ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ ಕೇವಲ 6.5% ನಲ್ಲಿಯೇ ಮುಂದುವರಿಸಲಾಗಿದ್ದು ಹೀಗಾಗಿ ಹೋಂ ಲೋನ್ ಅಥವಾ ಯಾವುದೇ ರೀತಿಯ ಲೋನ್ ಮೇಲೆ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿಲ್ಲ ಎಂಬುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿರುವಂತಹ ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದಾರೆ. ಇನ್ಮೇಲೆ ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಳ್ಳುವಂತಹ ಗ್ರಾಹಕರಿಗೂ ಕೂಡ ಈ ವಿಚಾರದಲ್ಲಿ ಲಾಭವಾಗಲಿದೆ ಎಂದು ಹೇಳಬಹುದಾಗಿದೆ.

2023ರ ಫೆಬ್ರವರಿ ತಿಂಗಳಲ್ಲಿ ರೆಪೋ ರೇಟ್ ದರವನ್ನ 6.5ಕ್ಕೆ ಇರಿಸಬೇಕು ಎಂಬುದಾಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು ಹಾಗೂ ಈ ಬಾರಿ ಕೂಡ ಅದೇ ನಿರ್ಧಾರವನ್ನು ತೆಗೆದುಕೊಳ್ಳುವ ವಿಚಾರಕ್ಕೆ ಸದಸ್ಯರಿಂದ ವೋಟಿಂಗ್ ನಡೆದಿದೆ ಎಂಬುದಾಗಿ ತಿಳಿದು ಬಂದಿದ್ದು ಅದಕ್ಕಾಗಿ ಈ ರೆಪೋರೇಟ್ ದರವನ್ನ ಮತ್ತೆ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಇದರ ಬಗ್ಗೆ ಮಾತನಾಡಿರುವಂತಹ ಗವರ್ನರ್ ಬೇರೆ ಬೇರೆ ದೇಶಗಳಲ್ಲಿ ನೀವು ನೋಡಿರಬಹುದು ಆರ್ಥಿಕ ಅಸ್ತಿರತೆ ಹೆಚ್ಚಾಗಿ ಕಂಡುಬರುತ್ತದೆ ಆದರೆ ಭಾರತ ದೇಶ ಈ ವಿಚಾರದಲ್ಲಿ ತದ್ವಿರುದ್ಧವಾಗಿ ಇದ್ದು ಆರ್ಥಿಕತೆಯ ವಿಚಾರದಲ್ಲಿ ಸಾಕಷ್ಟು ಏರಿಕೆಯನ್ನು ಕಾಣುತ್ತಾ ಹೋಗುತ್ತಿದೆ. ಇದಕ್ಕಾಗಿಯೇ ನಾವು ರೆಪೋರೇಟ್ ದರವನ್ನ ಅದೇ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುವ ನಿರ್ಧಾರಕ್ಕೆ ಬಂದಿದ್ದೇವೆ ಹಾಗೂ ಹಣದುಬ್ಬರವನ್ನು ನಾಲ್ಕು ಪ್ರತಿಶತಕ್ಕೆ ಹೊಂದುವಂತಹ ಗುರಿಯನ್ನು ಹೊಂದಿದ್ದೇವೆ ಎಂಬುದಾಗಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ತಿಂಗಳ ಕಾಂತಿನ ಮೇಲೆ ರೆಪೋ ರೇಟ್ ದರ ಹೇಗೆ ಪರಿಣಾಮ ಬೀರುತ್ತೆ?

ರೆಪೋ ದರದ ಅರ್ಥ ಅಂದರೆ ರೀ ಪರಿಚೇಸಿಂಗ್ ಆಪ್ಷನ್. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ವರ್ಷ ಸಾಲರೂಪದಲ್ಲಿ ಸಾಕಷ್ಟು ಹಣವನ್ನು ಪಡೆಯುತ್ತದೆ ಹಾಗೂ ಅದನ್ನ ಇಲ್ಲಿ ಸಾಲರೂಪದಲ್ಲಿ ಜನರಿಗೆ ನೀಡುತ್ತದೆ. ಬ್ಯಾಂಕುಗಳಿಗೆ ಸಾಲವನ್ನು ನೀಡುವ ಸಂದರ್ಭದಲ್ಲಿ ಅದರ ಮೇಲೆ ಇಂತಿಷ್ಟು ಬಡ್ಡಿಯನ್ನು ಹಾಕುತ್ತದೆ ಅದನ್ನೇ ರೆಪೋ ದರ ಎಂಬುದಾಗಿ ಕರೆಯಲಾಗುತ್ತದೆ. ಇದೇ ಕಾರಣಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ರೀತಿ ಬ್ಯಾಂಕುಗಳಿಗೆ ಬಡ್ಡಿಯ ಮೇಲೆ ಹಣವನ್ನು ನೀಡುವ ಸಂದರ್ಭದಲ್ಲಿ ಒಂದು ವೇಳೆ ಬಡ್ಡಿಯನ್ನು ಹೆಚ್ಚಿಸಿದರೆ ಬ್ಯಾಂಕುಗಳು ಕೂಡ ಗ್ರಾಹಕರಿಗೆ ಲೋನ್ ನೀಡುವ ಸಂದರ್ಭದಲ್ಲಿ ಬಡ್ಡಿಯನ್ನು ಹೆಚ್ಚಿಸಬೇಕಾಗುತ್ತದೆ. ಹೀಗಾಗಿ ಹೋಂ ಲೋನ್ ಅಥವಾ ಬೇರೆ ಬೇರೆ ರೀತಿಯ ಸಾಲವನ್ನು ಪಡೆದುಕೊಂಡಿರುವಂತಹ ಗ್ರಾಹಕರ ಈಎಂಐ ನಲ್ಲಿ ಹೆಚ್ಚಳ ಕಂಡುಬರಲಿದೆ ಹಾಗೂ ಇದು ಬಡ್ಡಿಯಿಂದ ಬರುತ್ತದೆ ಎಂದು ನೀವು ಈ ಮೂಲಕ ತಿಳಿದುಕೊಳ್ಳಬೇಕಾಗಿದೆ.

Comments are closed.