Farmers Schemes: ರೈತರಿಗಾಗಿ ಸರ್ಕಾರದ ಹೊಸ ಯೋಜನೆ; ಸಿಗತ್ತೆ ಬಡ್ಡಿರಹಿತ ಸಾಲ, ಕ್ರೆಡಿಟ್ ಸಾಲ ಇನ್ನೂ ಹಲವಾರು!

Farmers Schemes: ಯಾವುದೇ ಪಕ್ಷದ ಸರ್ಕಾರಗಳು ಬಂದ್ರೆ ಮೊದಲು ಮಾಡುವಂತಹ ಕೆಲಸ ಅಂದ್ರೆ ಅದು ದೇಶದಲ್ಲಿರುವಂತಹ ರೈತರ ಪರವಾಗಿ ಕೆಲವೊಂದು ಜನಪ್ರಿಯ ಆಗಿರುವಂತಹ ಯೋಜನೆಗಳನ್ನು ಜಾರಿಗೆ ತರುವುದು. ಮೊದಲಿನಿಂದಲೂ ಕೂಡ ರೈತರ ವಿಚಾರವಾಗಿ ಪ್ರತಿಯೊಂದು ಸರ್ಕಾರಗಳು ಕೂಡ ಅವರಿಗೆ ಕೃಷಿ ವಿಚಾರದಲ್ಲಿ ಬೇಕಾಗಿರುವಂತಹ ಪ್ರತಿಯೊಂದು ಅಗತ್ಯ ಇರುವಂತಹ ಯೋಜನೆಗಳನ್ನು ಅವರಿಗೆ ನೀಡುವಂತಹ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ.

ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ!

ಈ ಯೋಜನೆ ಮೂಲಕ ಸರ್ಕಾರ ಇದುವರೆಗೂ 2.5 ಕೋಟಿ ರೈತರಿಗೆ ಸಾಲವನ್ನು ನೀಡಿದೆ. ಕೇವಲ ನಾಲ್ಕು ಪ್ರತಿಶತ ಬಡ್ಡಿ ದರದಲ್ಲಿ ಈ ಯೋಜನೆಯ ಮೂಲಕ ರೈತರಿಗೆ ಸಾಲವನ್ನು ನೀಡಲಾಗುತ್ತಿದ್ದು 1.60 ಲಕ್ಷರೂಪಾಯಿಗಳವರಿಗೆ ಯಾವುದೇ ಗ್ಯಾರಂಟಿ ಇಲ್ಲದೆ ರೈತರಿಗೆ ಸಾಲವನ್ನು ನೀಡಲಾಗುತ್ತದೆ. ಇದರ ಜೊತೆಗೆ ಕಾಂಪ್ಲಿಮೆಂಟರಿ ಆಗಿ ಇನ್ಸುರೆನ್ಸ್ ಅನ್ನು ಕೂಡ ಸಾಲದ ಮೇಲೆ ನೀಡಲಾಗುತ್ತದೆ. ರೈತರ ಆರ್ಥಿಕ ಅಗತ್ಯತೆಗಳನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಪೂರ್ತಿ ಗೊಳಿಸಬಹುದಾಗಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಿಕೊಡಬಹುದಾಗಿದೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ!

ರೈತರಿಗಾಗಿ ಸರ್ಕಾರ ಜಾರಿಗೆ ತಂದಿರುವಂತಹ ಮತ್ತೊಂದು ಉಪಯೋಗಕರ ಯೋಜನೆ ಅಂದ್ರೆ ಅದು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ. ಈ ಯೋಜನೆಯ ಮೂಲಕ ಒಂದು ವೇಳೆ ರೈತರ ಬೆಳೆ ನಷ್ಟವಾದರೆ ಅವರಿಗೆ ಇನ್ಸೂರೆನ್ಸ್ ರೂಪದಲ್ಲಿ ಹಣವನ್ನು ಪರಿಹಾರವಾಗಿ ನೀಡುತ್ತಾರೆ. ಇದರಿಂದಾಗಿ ಬೆಳೆ ನಷ್ಟವಾದರೂ ಕೂಡ ರೈತರು ಆರ್ಥಿಕ ನಷ್ಟವನ್ನು ಅಷ್ಟೊಂದು ದೊಡ್ಡ ಮಟ್ಟದಲ್ಲಿ ತಲೆಯ ಮೇಲೆ ಹೊತ್ತುಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಸರ್ಕಾರವೇ ಈ ಯೋಜನೆಯ ಮೂಲಕ ಪರಿಹಾರ ನೀಡುವ ಜೊತೆಗೆ ಆ ಆರ್ಥಿಕ ಹೊರೆಯನ್ನು ಕೂಡ ಇಳಿಸುತ್ತದೆ. ಒಟ್ಟಾರೆಯಾಗಿ ಈ ಯೋಜನೆ ರೈತರಿಗೆ ಯಾವುದೇ ಚಿಂತೆ ಇಲ್ಲದೆ ಕೃಷಿಯನ್ನು ಮಾಡಿ ಎನ್ನುವ ರೀತಿಯಲ್ಲಿ ಧೈರ್ಯ ನೀಡುತ್ತದೆ ಎಂದು ಹೇಳಬಹುದಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ!

ಈ ಯೋಜನೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವಂತಹ ರೈತ ಪರವಾಗಿರುವಂತಹ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ರೈತರು ಕೇಂದ್ರ ಸರ್ಕಾರದಿಂದ ಈ ಯೋಜನೆ ಅಡಿಯಲ್ಲಿ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ನಾಲ್ಕು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ ಪಡೆದುಕೊಳ್ಳಲಿದ್ದಾರೆ. ಒಂದು ಚಿಕ್ಕ ಮಟ್ಟದಲ್ಲಿ ರೈತರಿಗೆ ಆರ್ಥಿಕ ಸಹಾಯವನ್ನು ಮಾಡುವಂತಹ ಕೆಲಸವನ್ನು ಯೋಜನೆಯ ಮೂಲಕ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಬಹುದಾಗಿದೆ. ಯಾಕೆಂದ್ರೆ ಕೆಲವೊಂದು ಪರಿಸ್ಥಿತಿಗಳಲ್ಲಿ ರೈತರಿಗೆ ಚಿಕ್ಕದರಿಂದ ಚಿಕ್ಕ ಆರ್ಥಿಕ ಸಹಾಯ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಉಪಯೋಗಕ್ಕೆ ಬರುವಂತಹ ಸಾಧ್ಯತೆ ಇರುತ್ತದೆ. ಈಗಾಗಲೇ ಪಿ ಎಮ್ ಕಿಸಾನ್ ಯೋಜನೆ ಅಡಿಯಲ್ಲಿ 17ನೇ ಕಂತುಗಳನ್ನು ಪೂರೈಸಲಾಗಿದ್ದು ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಯಶಸ್ವಿಯಾಗಿ ಕಾಣಿಸಿಕೊಳ್ಳಲಿದೆ ಎಂದು ಹೇಳಬಹುದಾಗಿದೆ.

Comments are closed.