Free Bus: ಉಚಿತವಾಗಿ ಕೆಎಸ್ಆರ್ಟಿಸಿ ಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿರುವಂತಹ ಮಹಿಳೆಯರಿಗೆ ಹೊಸ ನಿಯಮ!

Free Bus: ರಾಜ್ಯ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಮಹಿಳೆಯರು ಶಕ್ತಿ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿಯೊಂದು ಕಡೆಗಳಲ್ಲಿ ಕೂಡ ಉಚಿತವಾಗಿ ಬಸ್ ಪ್ರಯಾಣ ಮಾಡುವಂತಹ ಅವಕಾಶವನ್ನು ಹೊಂದಿದ್ದಾರೆ. ಇತ್ತೀಚಿಗಷ್ಟೇ ಕೆಎಸ್ಆರ್ಟಿಸಿ ನಿಗಮದ ಪ್ರಮುಖರು ಈ ಸಂದರ್ಭದಲ್ಲಿ ಇರುವಂತಹ ದೊಡ್ಡ ಸಮಸ್ಯೆಯನ್ನು ನಿವಾರಣೆ ಮಾಡುವ ಕಾರಣಕ್ಕಾಗಿ ಒಂದು ಹೊಸ ನಿಯಮವನ್ನು ಜಾರಿಗೆ ತಂದಿರುವಂತಹ ವಿಚಾರದ ಬಗ್ಗೆ ಘೋಷಣೆ ಮಾಡಿದ್ದಾರೆ. ಕೆಎಸ್ಆರ್ಟಿಸಿ ಮೂಲಕ ಉಚಿತ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರು ಈ ವಿಚಾರವನ್ನು ಪ್ರಮುಖವಾಗಿ ತಿಳಿದುಕೊಳ್ಳಬೇಕು ಇಲ್ಲವಾದರೆ ಆಮೇಲೆ ಪಶ್ಚಾತ್ತಾಪ ಪಡಬೇಕಾಗುತ್ತದೆ.

ಉಚಿತ ಬಸ್ ಪ್ರಯಾಣವನ್ನು ಮಾಡುವಂತಹ ಮಹಿಳೆಯರಿಗೆ ಕೆಎಸ್ಆರ್ಟಿಸಿಯಿಂದ ಹೊಸ ನಿಯಮ!

ಉಚಿತ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರ ನಿರ್ಲಕ್ಷದಿಂದಾಗಿ ಬಸ್ ಕಂಡಕ್ಟರ್ಗಳು ಸಾಕಷ್ಟು ಸಮಸ್ಯೆಯನ್ನು ಕಂಡುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು, ಇದೇ ಕಾರಣಕ್ಕಾಗಿ ಕೆಎಸ್ಆರ್ಟಿಸಿ ನಿಗಮ ಒಂದು ವೇಳೆ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಪಿಂಕ್ ಟಿಕೆಟ್ ಅನ್ನು ಕಳೆದುಕೊಂಡರೆ ಅದಕ್ಕಾಗಿ ಅವರು ಹತ್ತು ರೂಪಾಯಿಗಳ ದಂಡವನ್ನು ಕಟ್ಟಬೇಕಾಗುತ್ತದೆ ಎಂಬುದಾಗಿ ನಿಯಮವನ್ನು ಜಾರಿಗೆ ತರಲಾಗಿದೆ.

ಒಂದು ವೇಳೆ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿರುವಂತಹ ಮಹಿಳೆಯರಿಗೆ ಟಿಕೆಟ್ ನೀಡುವ ಸಂದರ್ಭದಲ್ಲಿ ಟಿಕೆಟ್ ಮಷೀನ್ ಹಾಳಾದರೆ ಆ ಸಂದರ್ಭದಲ್ಲಿ ಪಿಂಕ್ ಟಿಕೆಟ್ ಅನ್ನು ಮಹಿಳೆಯರಿಗೆ ನೀಡಬಹುದಾಗಿದೆ ಎಂಬುದಾಗಿ ನಿಯಮವನ್ನು ಈಗಾಗಲೇ ಜಾರಿಗೆ ತರಲಾಗಿತ್ತು. ಸಾಮಾನ್ಯ ಟಿಕಿಟ್ ನಲ್ಲಿ ಎಲ್ಲವೂ ಮೊದಲೇ ಭರ್ತಿಯಾಗಿರುತ್ತದೆ ಆದರೆ ಪಿಂಕ್ ಟಿಕೆಟ್ ನಲ್ಲಿ ಕಂಡಕ್ಟರ್ ಗಳೇ ತಮ್ಮ ಕೈಯಾರೆ ಬರೆದು ಭರ್ತಿ ಮಾಡಬೇಕು ಎನ್ನುವುದು ಕೂಡ ಸಾಕಷ್ಟು ಸಮಸ್ಯೆಯನ್ನು ತರುವಂತಹ ಪ್ರಕ್ರಿಯೆ ಆಗಿದೆ ಎನ್ನಬಹುದಾಗಿದೆ.

ಇದೇ ಕಾರಣಕ್ಕಾಗಿ ಮಹಿಳೆಯರಿಗೆ ಕಂಡಕ್ಟರ್ ಗಳು ಉಚಿತ ಬಸ್ ಪ್ರಯಾಣ ಮಾಡ್ತಾ ಇದ್ರೆ ತಮ್ಮ ಟಿಕೆಟ್ ಮಷೀನ್ ಹಾಳಾದರೆ ಪಿಂಕ್ ಟಿಕೆಟ್ ಮೂಲಕ ಬರೆದು ಕೊಡಬೇಕಾಗುತ್ತದೆ. ಪುರುಷರ ಸಾಮಾನ್ಯ ಟಿಕೆಟ್ ನಲ್ಲಿ ಅವರು ಎಲ್ಲಿಂದ ಎಲ್ಲಿಗೆ ಹೋಗ್ತಾರೆ ಅನ್ನೋದು ಅದರಲ್ಲಿ ಬರುತ್ತದೆ ಆದರೆ ಮಹಿಳೆಯರಿಗಾಗಿ ವಿಶೇಷವಾಗಿ ನೀಡುವಂತಹ ಪಿಂಕ್ ಟಿಕೆಟ್ ನಲ್ಲಿ ಬಸ್ ಕಂಡಕ್ಟರ್ ಸ್ವತಹ ಖುದ್ದಾಗಿ ತಾವೇ ಎಲ್ಲಿಂದ ಎಲ್ಲಿಗೆ ಹೋಗ್ತಾರೆ ಅನ್ನೋದನ್ನ ಬರೆದು ಕೊಡಬೇಕು. ಈ ಸಂದರ್ಭದಲ್ಲಿ ಇಂತಹ ಚೀಟಿಗಳನ್ನು ಮಹಿಳೆಯರು ಕಳೆದುಕೊಂಡರೆ ಬಸ್ ನಿರ್ವಾಹಕರು ಅಂದ್ರೆ ಕಂಡಕ್ಟರ್ಗಳು ಸಾಕಷ್ಟು ಕಷ್ಟಪಡಬೇಕಾಗಿತ್ತು ಆದರೆ ಇನ್ನು ಮುಂದೆ ಆ ರೀತಿ ಯಾವುದೇ ಕ್ರಮ ನಡೆಯೋದಿಲ್ಲ ಯಾಕೆಂದರೆ ಈ ರೀತಿಯ ಟಿಕೆಟ್ ಗಳನ್ನು ಮಹಿಳೆಯರು ಕಳೆದುಕೊಂಡರೆ ರೂ.10 ಗಳ ನಷ್ಟವನ್ನು ಭರಿಸಬೇಕಾಗಿರುತ್ತದೆ. ಈ ವಿಚಾರದ ಬಗ್ಗೆ ಉಚಿತವಾಗಿ ಕೆಎಸ್ಆರ್ಟಿಸಿ ಬಸ್ ಪ್ರಯಾಣವನ್ನು ಮಾಡುವಂತಹ ಮಹಿಳೆಯರು ಹೆಚ್ಚಿನ ನಿಗ ವಹಿಸಬೇಕಾಗಿದೆ.

Comments are closed.