EV Scooters: ಮತ್ತೆ ಸಿಗಲ್ಲ ಇಷ್ಟು ಕಡಿಮೆ ಬೆಲೆ ಎಲೆಕ್ಟ್ರಿಕ್ ಸ್ಕೂಟರ್ ಗಳು; ನೀವು ಕೂಡ ಖರೀದಿಸಿ ಮನೆಗೆ ತರಬಹುದು!

EV Scooters: ನಮ್ಮ ಭಾರತ ದೇಶದಲ್ಲಿ ದ್ವಿಚಕ್ರ ವಾಹನಗಳನ್ನು ಓಡಿಸುವಂತಹ ಬಹುತೇಕ ಹೆಚ್ಚಿನ ಕುಟುಂಬಗಳು ಮಧ್ಯಮ ಅಥವಾ ಬಡವರ್ಗದಿಂದ ಬಂದಿರುತ್ತಾರೆ. ಹೀಗಾಗಿ ಅವರು ಯಾವುದೇ ರೀತಿಯ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡುವುದಕ್ಕಿಂತ ಮುಂಚೆ ಅವುಗಳ ಬೆಲೆಯ ಬಗ್ಗೆ ಹೆಚ್ಚಿನ ಗಮನವಹಿಸುತ್ತಾರೆ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಗ್ಗೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ಎಲೆಕ್ಟ್ರಿಕ್ ಸ್ಕೂಟರ್ ಗಳು!

Ola S1 X

ಇದು ನಿಮಗೆ ಸಾಕಷ್ಟು ವೆರಿಎಂಟ್ ಗಳಲ್ಲಿ ಸಿಗುತ್ತದೆ ಮಾತ್ರವಲ್ಲದೆ ಇದರಲ್ಲಿ 2kwh ಸಾಮರ್ಥ್ಯದ ಬ್ಯಾಟರಿ ಅನ್ನು ಕೂಡ ಅಳವಡಿಸಲಾಗಿದೆ. ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ ಸಾಕು 90 ಕಿಲೋಮೀಟರ್ಗಳ ರೇಂಜ್ ಅನ್ನು ನಿಮಗೆ ಈ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತದೆ. ಇನ್ನು ಇದರ ಬೆಲೆ ಬಗ್ಗೆ ಮಾತನಾಡುವುದಾದರೆ 74, 999 ರೂಪಾಯಿ ಆಗಿದೆ. ಇದೇ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಸಿಗುವಂತಹ 3kwh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವಂತಹ ಎಲೆಕ್ಟ್ರಿಕ್ ಸ್ಕೂಟರ್ ವೇರಿಯಂಟ್ ನಿಮಗೆ ಮಾರುಕಟ್ಟೆಯಲ್ಲಿ 89, 999 ರೂಪಾಯಿಗಳ ಬೆಲೆಯಲ್ಲಿ ಸಿಗಲಿದೆ ಹಾಗೂ ಇದು ನಿಮಗೆ 151 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ ಎಂದು ಹೇಳಬಹುದಾಗಿದೆ. 90 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನಲ್ಲಿ ಕೂಡ ಇದು ಓಡುತ್ತದೆ. 4kwh ಸಾಮರ್ಥ್ಯದ ಬ್ಯಾಟರಿ ಹೊಂದಿರುವಂತಹ ಎಲೆಕ್ಟ್ರಿಕ್ ಸ್ಕೂಟರ್ ವೇರಿಯಂಟ್ ನ ಬೆಲೆ 99999 ರೂಪಾಯಿ ಆಗಿದ್ದು ಇದು ನಿಮಗೆ 190 ಕಿಲೋಮೀಟರ್ ಮೈಲೇಜ್ ನೀಡುತ್ತೆ

Bajaj Chetak 2901

ಜೂನ್ ತಿಂಗಳಿನಲ್ಲಿ ಭಾರತದ ಮಾರುಕಟ್ಟೆಗೆ ಭಾರತೀಯ ಜನರ ಎಮೋಷನ್ ಆಗಿರುವಂತಹ ಬಜಾಜ್ ಚೇತನ್ ಎಲೆಕ್ಟ್ರಿಕ್ ರೂಪಾಂತರದಲ್ಲಿ ಲಾಂಚ್ ಆಗ್ತಾ ಇದೆ. ಇದರ ಬ್ಯಾಟರಿ ಸಾಮರ್ಥ್ಯ 2.88kwh ಆಗಿದ್ದು ಇದು ಫುಲ್ ಚಾರ್ಜ್ ನಲ್ಲಿ ನಿಮಗೆ 128 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ. ಇದರ ಬೆಲೆ ರೂ.95,998 ರೂಪಾಯಿ ಆಗಿದೆ. ಗಂಟೆಗೆ 63 ಕಿಲೋಮೀಟರ್ಗಳ ಸ್ಪೀಡ್ ನಲ್ಲಿ ಚಲಿಸುವಂತಹ ಸಾಮರ್ಥ್ಯವನ್ನು ಹೊಂದಿದೆ. ವಿವಿಧ ಬಣ್ಣಗಳಲ್ಲಿ ಕೂಡ ನಿಮಗೆ ಖರೀದಿಸುವಂತಹ ಆಪ್ಷನ್ ಅನ್ನು ನೀಡಲಾಗಿದೆ. ಜೂನ್ 15ನೇ ತಾರೀಖಿನಿಂದ ಇದರ ಡೆಲಿವರಿ ಪ್ರಾರಂಭವಾಗಲಿದೆ ಎನ್ನುವಂತಹ ಮಾಹಿತಿ ಕೂಡ ಈಗಾಗಲೇ ದೊರಕಿದೆ.

Ather Rizta

ಈ ಪ್ರತಿಷ್ಠಿತ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ನೀವು 7 ಬಣ್ಣಗಳಲ್ಲಿ ಖರೀದಿಸುವಂತಹ ಆಪ್ಷನ್ ಗಳನ್ನು ಕಂಪನಿ ನೀಡಿದೆ. 2.9kwh ಸಾಮರ್ಥ್ಯವನ್ನು ಹೊಂದಿರುವಂತಹ ವೇರಿಯಂಟ್ ನಿಮಗೆ 123 ಕಿಲೋಮೀಟರ್ಗಳು ಹಾಗೂ 3.7kwh ಹೊಂದಿರುವಂತಹ ಬ್ಯಾಟರಿ ನಿಮಗೆ 160 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ. 1.10 ರಿಂದ 1.45 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದನ್ನ ನೀವು ಖರೀದಿ ಮಾಡಬಹುದಾಗಿದೆ. ಏಳು ಇಂಚಿನ ಎಲ್ಇಡಿ ಸ್ಕ್ರೀನ್ ಜೊತೆಗೆ ಇದನ್ನು ನೀವು 80 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನಲ್ಲಿ ಚಲಾಯಿಸಬಹುದಾಗಿದೆ. ಇದು ಫುಲ್ ಚಾರ್ಜ್ ಆಗೋದಕ್ಕೆ ನಾಲ್ಕು ಗಂಟೆಗಳ ಆಸು ಪಾಸಿನಲ್ಲಿ ಸಮಯ ಬೇಕಾಗುತ್ತದೆ. ಡಿಸ್ಕ್ ಬ್ರೇಕ್ ಅನ್ನು ಕೂಡ ನಿಮಗೆ ಇದರಲ್ಲಿ ಒದಗಿಸಲಾಗುತ್ತದೆ.

Comments are closed.