Jio:84 ದಿನಗಳ ವ್ಯಾಲಿಡಿಟಿ ಹೊಂದಿರುವ ಜಿಯೋ ರಿಚಾರ್ಜ್ ಪ್ಲಾನ್; ಇಷ್ಟ್ ಕಡಿಮೆ ಬೆಲೆಗಾ?

Jio: Jio ಸಂಸ್ಥೆಯ ಮಾರುಕಟ್ಟೆಯಲ್ಲಿ ಅನಭಿಷಕ್ತ ರಾಜನ ರೀತಿಯಲ್ಲಿ ಮೆರೆಯುತ್ತಿದೆ ಎಂದು ಹೇಳಬಹುದು. ಯಾಕೆಂದ್ರೆ ಯಾವ ದಿನದಿಂದ Jio ಟೆಲಿಕಾಂ ಇಂಡಸ್ಟ್ರಿಯ ಮಾರುಕಟ್ಟೆಗೆ ಕಾಲಿಟ್ಟಿತೋ ಅವತ್ತಿನಿಂದ ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಇರುವಂತಹ ಬೇರೆ ಕಂಪನಿಗಳು ಕೆಳಗೆ ಹೋಗಿವೆ ಎಂದು ಹೇಳಬಹುದಾಗಿದೆ. ಇನ್ನು ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನ ಗ್ರಾಹಕರಿಗೆ ನೀಡುವ ಮೂಲಕ ಜಿಯೋ ಸಂಸ್ಥೆ ಇವತ್ತು ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಟೆಲಿಕಾಂ ಕಂಪನಿ ಎಂಬಂತಹ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶೇಷ ಎನ್ನುವ ರೀತಿಯಲ್ಲಿ ಜಿಯೋ ಸಂಸ್ಥೆ ನೀಡುವಂತಹ ರಿಚಾರ್ಜ್ ಪ್ಲಾನ್ ಗಳ ಆಫರ್ ನಲ್ಲಿ ಕೇವಲ ಸಾಮಾನ್ಯ ಆಫರ್ ಮಾತ್ರವಲ್ಲದೆ ಅದರ ಜೊತೆಗೆ ಜನರು ಇಷ್ಟಪಡುವಂತಹ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ಹೊಂದಿರುವಂತಹ ಓ ಟಿ ಟಿ ಪ್ಲಾಟ್ ಫಾರ್ಮ್ಗಳ ಉಚಿತ ಚಂದಾದಾರಿಕೆ ಸೇರಿದಂತೆ ಇನ್ನೂ ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವಂತಹ ರಿಚಾರ್ಜ್ ಪ್ಲಾನ್ ಗಳನ್ನು ಕೂಡ ನಾವು ಕಾಣಬಹುದಾಗಿದ್ದು ಬನ್ನಿ ಇವತ್ತಿನ ಈ ಲೇಖನದ ಮೂಲಕ ಜಿಯೋ ಸಂಸ್ಥೆ ಪರಿಚಯಿಸಿರುವಂತಹ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ಈ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿದುಕೊಳ್ಳೋಣ.

ಜಿಯೋ ಸಂಸ್ಥೆಯ 84 ದಿನಗಳ ರಿಚಾರ್ಜ್ ಪ್ಲಾನ್!

ಹೌದು ನಾವು ಜಿಯೋ ಸಂಸ್ಥೆ ಪರಿಚಯಿಸಿರುವಂತಹ ಹೊಸ ರಿಚಾರ್ಜ್ ಪ್ಲಾನ್ ಬಗ್ಗೆ ನಿಮಗೆ ಹೇಳೋದಕ್ಕೆ ಹೊರಟಿದ್ದು ಇದರಲ್ಲಿ ನಿಮಗೆ ವಿಶೇಷವಾಗಿ ಓಟಿಟಿ ಪ್ಲಾಟ್ ಫಾರ್ಮ್ಗಳ ಉಚಿತ ಚಂದಾದಾರಿಕೆಯ ಸೌಲಭ್ಯ ಸಿಗಲಿದೆ. 84 ದಿನಗಳ ವ್ಯಾಲಿಡಿಟಿಯನ್ನು ನೀಡುವಂತಹ ಈ ರಿಚಾರ್ಜ್ ಪ್ಲಾನ್ ಮೇಲೆ 857 ರೂಪಾಯಿ ಆಗಿದೆ. ಇದರಲ್ಲಿ ನೀವು ನಿಮ್ಮ ಫೇವರೆಟ್ ಕಾರ್ಯಕ್ರಮಗಳನ್ನು ನೋಡುವಂತಹ ಅಮೆಜಾನ್ ಪ್ರೈಮ್ ಅನ್ನು ಕೂಡ ಉಚಿತವಾಗಿ ನೋಡಬಹುದಾಗಿದೆ. ಇದರಲ್ಲಿ ಉಚಿತವಾಗಿ ಕಾಲಿಂಗ್ ಸೇವೆಯನ್ನು ಕೂಡ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ಪ್ರತಿದಿನ 100 ಎಸ್ಎಂಎಸ್ ಗಳನ್ನು ಈ ಯೋಜನೆಯಲ್ಲಿ ಪಡೆದುಕೊಳ್ಳಬಹುದಾಗಿದ್ದು ಪ್ರತಿದಿನ ಎರಡು ಜಿಬಿ ಇಂಟರ್ನೆಟ್ ಡೇಟಾದಂತೆ ಒಟ್ಟಾರೆಯಾಗಿ 84 ದಿನಗಳ ವ್ಯಾಲಿಡಿಟಿ ಸಂದರ್ಭದಲ್ಲಿ ನೀವು ಈ ರಿಚಾರ್ಜ್ ಪ್ಲಾನ್ ಮೂಲಕ 168 GB ಇಂಟರ್ನೆಟ್ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಈ ಹೈ ಸ್ಪೀಡ್ ಇಂಟರ್ನೆಟ್ ಮೂಲಕ ನೀವು ನಿಮ್ಮ ಎಲ್ಲಾ ಇಂಟರ್ನೆಟ್ ಕಾರ್ಯಕ್ರಮಗಳನ್ನು ಕೂಡ ಪೂರೈಸಿಕೊಳ್ಳಬಹುದಾಗಿದೆ.

ಅಮೆಜಾನ್ ಪ್ರೈಮ್ ಗೆ ನೀವು ಪ್ರತ್ಯೇಕವಾಗಿ ಚಂದದಾರಿಕೆ ಹಣವನ್ನು ಕಟ್ಟೋದಕ್ಕೆ ಹೋದರೆ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಿ ಬರುತ್ತದೆ ಆದರೆ ಈ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ 857 ರೂಪಾಯಿಗಳ ರಿಚಾರ್ಜ್ ಪ್ಲಾನ್ ಮಾಡುವುದರ ಮೂಲಕ ನೀವು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಕೂಡ ಜಿಯೋ ಗ್ರಾಹಕರಾಗಿದ್ದರೆ ಈ ಯೋಜನೆಯನ್ನು ಪ್ರಯತ್ನಿಸಬಹುದಾಗಿದೆ.

Comments are closed.