BSNL Recharge Plan: BSNL ಸಂಸ್ಥೆಯಿಂದ ಗ್ರಾಹಕರಿಗೆ ಗುಡ್ ನ್ಯೂಸ್; ಅನೌನ್ಸ್ ಆಯ್ತು ಕೇವಲ 6ರೂ. ಪ್ಲಾನ್!

BSNL Recharge Plan: BSNL ಸರ್ಕಾರಿ ಟೆಲಿಕಾಂ ಕಂಪನಿ ಆಗಿದ್ದು ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತದ ಗ್ರಾಹಕರಿಗೆ ಉತ್ತಮ ಸರ್ವಿಸ್ ಗಳನ್ನು ನೀಡಿಕೊಂಡು ಬಂದಿದ್ದು ಈಗ ಇರುವಂತಹ ಪೈಪೋಟಿಯಲ್ಲಿ ಸ್ವಲ್ಪ ಮಟ್ಟಿಗೆ ಹಿಂದೆ ಬಿದ್ದಿದೆ ಎಂದು ಹೇಳಬಹುದು. ಹೌದು ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳು ಟೆಲಿಕಾಂ ಇಂಡಸ್ಟ್ರಿಯಲ್ಲಿ ಯಾವ ರೀತಿಯಲ್ಲಿ ತಮ್ಮ ಗ್ರಾಹಕರನ್ನು ಹೊಂದಿವೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಅದರಲ್ಲೂ ವಿಶೇಷವಾಗಿ ಜಿಯೋ ಸಂಸ್ಥೆ ಅತ್ಯಂತ ಕಡಿಮೆ ಸಮಯದಲ್ಲಿ ಇಡೀ ದೇಶದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಕಂಪನಿಯಾಗಿ ಬೆಳೆದು ನಿಂತಿದೆ. ಇನ್ನು ಇವತ್ತಿಂದು ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಬಿಎಸ್ಎನ್ಎಲ್ ಸಂಸ್ಥೆ ತನ್ನ ಗ್ರಾಹಕರಿಗೆ ಪರಿಚಯಿಸಲು ಹೊರಟಿರುವಂತಹ ಹೊಸ ರೀಚಾರ್ಜ್ ಪ್ಲಾನ್ ಬಗ್ಗೆ ಹೇಳೋದಿಕ್ಕೆ. ಒಂದು ವೇಳೆ ನೀವು ಕೂಡ ಬಿಎಸ್ಎನ್ಎಲ್ ಗ್ರಾಹಕರಾಗಿದ್ದರೆ ತಪ್ಪದೇ ಈ ರಿಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ ನೀವು ಕೂಡ ಉಪಯೋಗಿಸಬಹುದಾಗಿದೆ.

BSNL ಸಂಸ್ಥೆ ಪರಿಚಯಿಸಿದ ನೋಡಿ ಕೈಗೆಟಕುವ ಬೆಲೆಯ ರೀಚಾರ್ಜ್ ಪ್ಲಾನ್!

ನೀವು ಇಡೀ ಒಂದು ವರ್ಷ ರೀಚಾರ್ಜ್ ಮಾಡಬೇಕಾದ ಅಗತ್ಯನೇ ಇಲ್ಲ ಎನ್ನುವ ರೀತಿಯಲ್ಲಿ ವಾರ್ಷಿಕ ರಿಚಾರ್ಜ್ ಪ್ಲಾನನ್ನು BSNL ಸಂಸ್ಥೆ ಪರಿಚಯಿಸಿದೆ. ಈ ವಾರ್ಷಿಕ ವ್ಯಾಲಿಡಿಟಿಯನ್ನು ಹೊಂದಿರುವಂತಹ ರಿಚಾರ್ಜ್ ಪ್ಲಾನಿನ ಬೆಲೆ 2399 ರೂಪಾಯಿ ಆಗಿದೆ. ಈ ರಿಚಾರ್ಜ್ ಮಾಡಿದ್ರೆ ಸಾಕು ನೀವು ಖಂಡಿತವಾಗಿ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಯಾವುದೇ ರಿಚಾರ್ಜ್ ಮಾಡಬೇಕಾದ ಅಗತ್ಯ ಇಲ್ಲ ಎಂದು ಹೇಳಬಹುದಾಗಿದೆ. ಹೌದು ಒಂದು ವರ್ಷಾನು ಅಲ್ಲ ಬದಲಾಗಿ ಒಂದು ವರ್ಷಕ್ಕೂ ಒಂದು ತಿಂಗಳು ಹೆಚ್ಚಿಗೆ ಅಂತ ಹೇಳಬಹುದು.

ಹೌದು ನೀವು ಈ ರಿಚಾರ್ಜ್ ಮಾಡಿದ್ರೆ 395 ದಿನಗಳ ಕಾಲ ವ್ಯಾಲಿಡಿಟಿಯನ್ನು ಪಡೆದುಕೊಳ್ಳಲಿದ್ದೀರಿ. ಅಂದ್ರೆ ಬಿಎಸ್ಎನ್ಎಲ್ ಸಂಸ್ಥೆ ಪರಿಚಯಿಸಿರುವಂತಹ ಈ ರಿಚಾರ್ಜ್ ಪ್ಲಾನ್ ಪ್ರಕಾರ ನೀವು ದಿನಕ್ಕೆ ಕೇವಲ 6.7 ರೂಪಾಯಿಗಳ ಖರ್ಚು ಮಾಡಿದಂತಾಗುತ್ತದೆ ಎಂದು ಹೇಳಬಹುದಾಗಿದೆ. ದಿನಕ್ಕೆ ಎರಡು ಜಿಬಿ ಲೆಕ್ಕದಲ್ಲಿ ನೀವು ಒಟ್ಟಾರೆಯಾಗಿ 790 ಜಿಬಿ ಇಂಟರ್ನೆಟ್ ಡೇಟಾ ಅನ್ನು ನೀವು ಈ ರಿಚಾರ್ಜ್ ಪ್ಲಾನ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ನಿಮಗೆ ಅನಿಯಮಿತ ಕಾಲಿಂಗ್ ಉಚಿತ ಎಸ್ಎಂಎಸ್ ಸೇರಿದಂತೆ ಸಾಕಷ್ಟು ವಿಶೇಷ ಸೌಲಭ್ಯಗಳಾಗಿರುವಂತಹ ಹಾಲು ಟ್ಯೂನ್ ನಂತೆ ಬೇರೆ ಬೇರೆ ಸೌಲಭ್ಯಗಳನ್ನು ಕೂಡ ಈ ವಾರ್ಷಿಕ ರಿಚಾರ್ಜ್ ಪ್ಲಾನ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ನೀವು ನಿಮ್ಮ ಸಿಮ್ ಕಾರ್ಡ್ ನ ವ್ಯಾಲಿಡಿಟಿಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪ್ರತಿದಿನ ನಿಮ್ಮ ಇಂಟರ್ನೆಟ್ ಬಳಕೆಗೆ ಬೇಕಾಗುವಂತಹ ಎರಡು ಜಿಬಿ ಇಂಟರ್ನೆಟ್ ಗಳ ಸೇವೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ನೂರು ಉಚಿತ ಎಸ್ಎಂಎಸ್ ಹಾಗೂ ಅನ್ಲಿಮಿಟೆಡ್ ಕಾಲಿಂಗ್ ಸೇವೆಯನ್ನು ನೀವು ಈ ರಿಚಾರ್ಜ್ ಪ್ಲಾನಿಂಗ್ ಮೂಲಕ ಪಡೆದುಕೊಳ್ಳಬಹುದಾಗಿದ್ದು, ಈ ವಿಚಾರದಲ್ಲಿ ನಿಜಕ್ಕೂ ಕೂಡ ಬಿಎಸ್ಎನ್ಎಲ್ ಸಂಸ್ಥಾನ ಎಲ್ಲಾ ಕಾಂಪಿಟೇಟರ್ ಗಳನ್ನು ಹಿಂದೆ ಹಾಕುವಂತಹ ಕೆಲಸವನ್ನು ಮಾಡಿದೆ ಎಂದು ಹೇಳಬಹುದಾಗಿದೆ.

Comments are closed.